ಸ್ವಾಮಿಯೊಂದಿಗೆ ಸರಸ ಸಲ್ಲಾಪದಲ್ಲಿದ್ದ ನಟಿ ಆತ್ಮಹತ್ಯೆಗೆ ಯತ್ನ
Recommended Video

ಶಿವಮೊಗ್ಗ, ನವೆಂಬರ್ 02: ಯಲಹಂಕದ ಹುಣಸಮಾರನಹಳ್ಳಿಯ ಮದ್ದೇವಣಾಪುರ ಜಂಗಮ ಮಠದ ದಯಾನಂದ ಸ್ವಾಮಿಯೊಂದಿಗೆ ಅಂದು ಸರಸ ಸಲ್ಲಾಪದಲ್ಲಿ ತೊಡಗಿದ್ದ ನಟಿ ಇದೀಗ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ದಯಾನಂದ ಸ್ವಾಮಿ ಜತೆ ರಾಸಲೀಲೆಯಲ್ಲಿ ತೊಡಗಿದ್ದ ಖತರ್ನಾಕ್ ಚಿತ್ರದ ನಟಿ ಕಾವ್ಯಾ ಆಚಾರ್ಯ ಅವರು ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಸಧ್ಯ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡಿದೆ.
ಕಾವ್ಯಾ ಆಚಾರ್ಯ ಆತ್ಮಹತ್ಯೆಗೆ ಯತ್ನಿಸಿರುವುದನ್ನು ನೋಡಿದರೇ, ಯಾವುದೇ ನಾಚಿಕೆವಿಲ್ಲದೇ ಸರ-ಸರನೇ ತನ್ನ ಮೈಮೇಲಿನ ಬಟ್ಟೆಗಳನ್ನು ಬಿಚ್ಚಿ ನಗ್ನಳಾಗಿ ಮುಗುಳ್ನಗುತ್ತಾ ಆ ಸ್ವಾಮಿಯ ಅಂಗೈಯಲ್ಲಿ ಮಲಗಿರುವುದು ಇದೇ ನಟಿ ಇರಬಹುದು ಎನ್ನುವುದು ಮಲ್ನೋಟಕ್ಕೆ ಕಂಡುಬರುತ್ತಿದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾವ್ಯಾ ಆಚಾರ್ಯ ಆರೋಗ್ಯದಲ್ಲಿ ಕೊಂಚ ಸುಧಾರಿಸಿದ್ದು, ಆರೋಗ್ಯಕ್ಕೆ ಯಾವುದೇ ಅಪಾಯ ಇಲ್ಲವೆಂದು ಅವರ ಸಹೋದರ ಕೃಷ್ಣ ಹೇಳಿಕೆ ನೀಡಿದ್ದಾರೆ.

ರಾಸಲೀಲೆ ನಡೆಸಿದ್ದ ವಿಡಿಯೋ ವೈರಲ್
ದಯಾನಂದ ಸ್ವಾಮಿ ಹಾಗೂ ನಟಿಯೊಬ್ಬರು ರಾಸಲೀಲೆ ನಡೆಸಿದ್ದ ವಿಡಿಯೋ ವೈರಲ್ ಆಗಿ, ಟಿವಿ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಈ ನಡುವೆ ವಿಡಿಯೋದಲ್ಲಿರುವ ನಟಿ ಯಾರು ಎಂಬ ಪ್ರಶ್ನೆ ಮೂಡಿತ್ತು.

ನಟಿ ಕಾವ್ಯಾ ಆಚಾರ್ಯ ಸ್ಪಷ್ಟನೆ
ವಿಡಿಯೋದಲ್ಲಿರುವುದು ಖತರ್ನಾಕ್' ಸೇರಿದಂತೆ ಕೆಲವು ಚಿತ್ರಗಳಲ್ಲಿ ಅಭಿನಯಿಸಿದ್ದ ಕಾವ್ಯಾ ಆಚಾರ್ಯ ಎಂಬ ಸುದ್ದಿ ಹಬ್ಬಿತ್ತು. ಇದಾದ ಬಳಿಕ ದಯಾನಂದ್ ಅಲಿಯಾಸ್ ಗುರು ನಂಜೇಶ್ವರರಿಗೂ ನನಗೂ ಯಾವುದೇ ಸಂಬಂಧವಿಲ್ಲ. ಆ ವಿಡಿಯೋದಲ್ಲಿರುವುದು ನಾನಲ್ಲ ಎಂದು ನಟಿ ಕಾವ್ಯಾ ಆಚಾರ್ಯ ಸ್ಪಷ್ಟನೆ ನೀಡಿದ್ದರು.

ಮರ್ಯಾದೆಗೆ ಹೆದರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆಯೇ?
ಇದೀಗ ಆತ್ಮಹತ್ಯೆ ಯತ್ನಿಸಿರುವುದೇಕೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಅಂದು ಮೂರು ಬಿಟ್ಟವಳಂತೆ ಸ್ವಾಮಿ ಜತೆ ಮಾಡೋದೆಲ್ಲ ಮಾಡಿ ಇದೀಗ ಮರ್ಯಾದೆಗೆ ಹೆದರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆಯೇ ಎಂಬ ಪ್ರಶ್ನಿ ಹುಟ್ಟು ಹಾಕಿದೆ.

ದಯಾನಂದ ಸ್ವಾಮಿ ಉಚ್ಚಾಟನೆ
ದಯಾನಂದ ಸ್ವಾಮಿ ನಟಿಯೊಂದಿಗಿನ ರಾಸಲೀಲೆ ವೈರಲ್ ಆಗುತ್ತಿದ್ದಂತೆಯೇ ಜಗದ್ಗುರುಗಳ ಗಮನಕ್ಕೆ ಬರುವಂತೆ ಭಾರೀ ಪ್ರಮಾಣದಲ್ಲಿ ಪ್ರತಿಭಟನೆಗಳು ನಡೆದಿದ್ದವು. ಈ ಹಿನ್ನೆಲೆಯಲ್ಲಿ ಶ್ರೀಶೈಲದ ಸ್ವಾಮಿಗಳು ಮದ್ದೇವಣಾಪುರ ಜಂಗಮ ಮಠ ಭೇಟಿ ನೀಡಿ ಪರಿಶೀಲಿಸಿದರು. ಭಕ್ತರ ಒತ್ತಾಯದಂತೆ ಕಾಮಿ ಸ್ವಾಮಿಯನ್ನು ಮಠದಿಂದ ಉಚ್ಚಾಟನೆ ಮಾಡಿದ್ದರು.












Click it and Unblock the Notifications