ಯಡಿಯೂರಪ್ಪ ಪತ್ನಿ ಅನುಮಾನಾಸ್ಪದ ಸಾವಿನ ಬಗ್ಗೆ ಎಚ್ ಡಿಕೆ ಪ್ರಸ್ತಾಪ

ರಾಮನಗರ, ಸೆಪ್ಟೆಂಬರ್ 20: "ಒಂದಡಿಗೆ ಒಂದಡಿ ಇರುವ ನೀರಿನ ಟ್ಯಾಂಕ್ ನಲ್ಲಿ ಕಾಲು ಜಾರಿ ಬಿದ್ದು, ಸಾಯುವಂಥದ್ದು ಉಂಟೇನ್ರೀ? ಅಂಥದ್ದೇ ಜನ ಮೆಚ್ಚಿಕೊಂಡಿದ್ದಾರೆ. ಆ ರೀತಿ ಮಾಡಿದವರಿಗೆ ಕಾಲ ಇದು. ಅವರು ಇದೀಗ ದೇಶ ಕಾಯುವವರು, ರಾಜ್ಯ ಕಾಯುವವರು" ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಶುಕ್ರವಾರ ರಾಮನಗರದಲ್ಲಿ ಹೇಳಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪತ್ನಿ ಮೈತ್ರಾದೇವಿ ಅವರು ನೀರಿನ ಸಂಪ್ ನಲ್ಲಿ ಬಿದ್ದು ಮೃತಪಟ್ಟ ವಿಚಾರವನ್ನು ನೇರವಾಗಿ ಪ್ರಸ್ತಾವ ಮಾಡದೆ, ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ಬಿಜೆಪಿ ಸರ್ಕಾರದ ಆಯಸ್ಸು ಇನ್ನು ಮೂರ್ನಾಲ್ಕು ತಿಂಗಳು ಮಾತ್ರ ಎಂಬ ಕೋಡಿ ಮಠ ಸ್ವಾಮಿಗಳ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ನಾನು ಜ್ಯೋತಿಷಿ ಅಲ್ಲ. ಸರ್ಕಾರದ ನಡವಳಿಕೆಗಳನ್ನು ನೋಡಿದರೆ ಯಾವ ಸಮಯದಲ್ಲಿ ಬೇಕಾದರೂ ಹೋಗುವಂತಿದೆ ಎಂದರು.

HD Kumaraswamy Questioned Suspicious Death Of Yeddyurappas Wife

ಸಮಯ ಬರುತ್ತದೆ ಕಾದು ನೋಡಿ. ನಮಗೆ ಯಾರ ಮೇಲೆ ಸಿಟ್ಟು ಇಲ್ಲ. ಆದರೆ ಎಲ್ಲಾ ವಿಚಾರಗಳಿಗೆ ನನ್ನ ಹೆಸರನ್ನು ಯಾಕೆ ತಳುಕು ಹಾಕುತ್ತಾರೆ? ಮೈಸೂರಿನಲ್ಲಿ ಇವತ್ತಿನ ಸಭೆಗೆ ಜಿಲ್ಲೆಯ ಎಲ್ಲ ನಾಯಕರಿಗೂ ಆಹ್ವಾನ ಮಾಡಲಾಗಿದೆ. ಜಿ. ಟಿ. ದೇವೇಗೌಡ ಅವರಿಗೂ ಆಹ್ವಾನ ನೀಡಲಾಗಿದೆ. ಬಂದವರು ಬರುತ್ತಾರೆ, ಬಾರದವರು ಬರಲ್ಲ ಎಂದು ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+