• search
  • Live TV
ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದಕ್ಷಿಣ ಕೋಸ್ಟಲ್ ರೈಲ್ವೆ ವಲಯಕ್ಕೆ ರಾಯಚೂರು ಸೇರಿಸಲು ವಿರೋಧ

|

ರಾಯಚೂರು, ಸೆಪ್ಟೆಂಬರ್ 20 : ರಾಯಚೂರು ಮತ್ತು ಯಾದಗಿರಿ ಜಿಲ್ಲೆಯ ರೈಲ್ವೆ ನಿಲ್ದಾಣಗಳನ್ನು ಹೊಸ ರೈಲ್ವೆ ವಲಯಕ್ಕೆ ಸೇರಿಸುವ ಪ್ರಸ್ತಾವನೆಗೆ ವಿರೋಧ ವ್ಯಕ್ತವಾಗಿದೆ. ಕಲ್ಯಾಣ ಕರ್ನಾಟಕದ ಪ್ರತ್ಯೇಕ ರೈಲ್ವೆ ವಲಯ ಸ್ಥಾಪಿಸಬೇಕು ಎಂಬ ಬೇಡಿಕೆಗೆ ಅನುಮತಿ ಸಿಗುವ ಸಾಧ್ಯತೆ ದೂರವಾಗಿದೆ.

ಆಂಧ್ರಪ್ರದೇಶದ ವಿಶಾಖಪಟ್ಟಣಂ ಕೇಂದ್ರಸ್ಥಾನವಾಗಿ ದಕ್ಷಿಣ ಕೋಸ್ಟಲ್ ರೈಲ್ವೆ ವಲಯ ಸ್ಥಾಪನೆ ಮಾಡಲು ಕಳೆದ ಅವಧಿಯಲ್ಲಿಯೇ ಕೇಂದ್ರ ಬಿಜೆಪಿ ಸರ್ಕಾರ ಮುಂದಾಗಿತ್ತು. ಈಗ ಈ ಪ್ರಕ್ರಿಯೆಗೆ ಮತ್ತೆ ಜೀವ ಬಂದಿದ್ದು, ಮುಂದಿನ ವರ್ಷ ಹೊಸ ವಲಯ ಸ್ಥಾಪನೆಗೆ ಸಿದ್ಧತೆ ನಡೆದಿದೆ.

ಬೆಂಗಳೂರಲ್ಲಿ ರೈಲ್ವೆ ಭದ್ರತಾ ಸುರಕ್ಷಾ ಪಡೆ ಘಟಕ ಸ್ಥಾಪನೆ

ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಈ ತೀರ್ಮಾನವನ್ನು ವಿರೋಧಿಸಿ ಟ್ವೀಟ್ ಮಾಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ಸಚಿವರಾಗಿದ್ದಾಗ ಕಲಬುರಗಿ ವಲಯ ಸ್ಥಾಪನೆ ಮಾಡುವುದಾಗಿ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರು. ಭೂ ಸ್ವಾಧೀನ ನಡೆದಿತ್ತು. ಅನುದಾನ ನೀಡಿದ್ದರು. ಇದಕ್ಕಾಗಿ ಅಧಿಕಾರಿನ್ನು ನೇಮಿಸಿದ್ದರು ಎಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.

ಹುಬ್ಬಳ್ಳಿ-ಚೆನ್ನೈ ಎಕ್ಸ್‌ಪ್ರೆಸ್ ರೈಲಿಗೆ ಹಸಿರು ನಿಶಾನೆ, ವೇಳಾಪಟ್ಟಿ

ಈಗ ಬಿಜೆಪಿಯ ಕಲ್ಯಾಣ ಕರ್ನಾಟಕದಡಿ ರಾಯಚೂರು ಮತ್ತು ಯಾದಗಿರಿ ರೈಲು ನಿಲ್ದಾಣಗಳು ವೈಝಾಕ್ ವಿಭಾಗಕ್ಕೆ ಸೇರಿಸಲು, ಉಳಿದ ನಿಲ್ದಾಣಗಳನ್ನು ಸೊಲ್ಲಾಪುರಕ್ಕೆ ಸೇರಿಸಲಾಗುತ್ತಿದೆ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸದ್ಯ ಇರುವ ದಕ್ಷಿಣ ಮಧ್ಯರೈಲ್ವೆ ವಲಯ ಸೇರಿ ನಾನಾ ರಾಜ್ಯಗಳ ವಲಯಗಳಲ್ಲಿನ ರೈಲ್ವೆ ವಿಭಾಗಗಳನ್ನು ಸೇರಿಸಿ ಹೊಸದಾಗಿ ದಕ್ಷಿಣ ಕೋಸ್ಟಲ್ ರೈಲ್ವೆ ವಲಯ ಸ್ಥಾಪಿಸಲು ಕೇಂದ್ರ ಸರ್ಕಾರ ಮುಂದಾಗಿತ್ತು. ವಿಶಾಖಪಟ್ಟಣಂ ಕೇಂದ್ರ ಸ್ಥಾನವಾಗಿ ಈ ವಲಯ ಕಾರ್ಯ ನಿರ್ವಹಿಸಬೇಕೆಂದು ಆದೇಶ ಹೊರಡಿಸಲಾಗಿತ್ತು.

ದಕ್ಷಿಣ ಮಧ್ಯರೈಲ್ವೆ ವಲಯದ ವ್ಯಾಪ್ತಿಯಲ್ಲಿರುವ ರಾಯಚೂರು ಮತ್ತು ಯಾದಗಿರಿ ಜಿಲ್ಲೆಯ ನಿಲ್ದಾಣಗಳನ್ನು ಸೇರಿಸಲು ಸೂಚಿಸಲಾಗಿತ್ತು. ಈ ಜಿಲ್ಲೆಗಳು ಕಲ್ಯಾಣ ಕರ್ನಾಟಕಕ್ಕೆ ಸೇರಿದ್ದು, ಕಲಬುರಗಿ ರೈಲ್ವೆ ವಲಯಕ್ಕೆ ಸೇರಿಸಲು ಚಿಂತನೆ ನಡೆಸಲಾಗಿತ್ತು. ಆದರೆ, ಈಗ ಕೇಂದ್ರದ ತೀರ್ಮಾನದಿಂದ ಕಲಬುರಗಿ ವಲಯ ಸ್ಥಾಪನೆಯಾಗುವುದೇ ಅನುಮಾನವಾಗಿದೆ.

ಸೆ.21ರಿಂದ ಹೊಸಪೇಟೆ-ಕೊಟ್ಟೂರು ಪ್ಯಾಸೆಂಜರ್ ರೈಲು ಸಂಚಾರ

ಧನಂಜಯಲು ಎಂಬ ವಿಶೇಷ ಅಧಿಕಾರಿ ದಕ್ಷಿಣ ಕೋಸ್ಟಲ್ ರೈಲ್ವೆ ವಲಯ ಸ್ಥಾಪಿಸುವ ಕುರಿತು ಕೇಂದ್ರ ಸರ್ಕಾರಕ್ಕೆ ವರದಿ ನೀಡಿದ್ದಾರೆ. ವಲಯ ಸ್ಥಾಪನೆಯಾದರೆ 13 ರಿಂದ 15 ಸಾವಿರ ಕೋಟಿ ರೂ. ಆದಾಯ ಹೆಚ್ಚಳವಾಗಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಈ ಹೊಸ ವಲಯ ಸ್ಥಾಪನೆಯಾದರೆ ವಿಜಯವಾಡ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಿರುವ ಗುಂತಕಲ್ ವಿಭಾಗ, ಗುಂಟೂರು, ವಾಲ್ಟೇರ್, ರಾಯಗಢ್ ವಿಭಾಗಗಳು ಅದಕ್ಕೆ ಸೇರ್ಪಡೆಗೊಳ್ಳಲಿವೆ.

English summary
Kalyana Karnataka's Raichur and Yadgir district railway station may join to South Coast Railway Zone. Former minister Priyank Kharge opposed the proposal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X