ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುರುಘಾ ಶರಣರ ಲೈಂಗಿಕ ದೌರ್ಜನ್ಯ ಪ್ರಕರಣ: ಸಿಬಿಐ, ನ್ಯಾಯಾಂಗ ತನಿಖೆಗೆ ಒಪ್ಪಿಸಲು ಆಗ್ರಹ

By ರಾಯಚೂರು
|
Google Oneindia Kannada News

ರಾಯಚೂರು ಸೆಪ್ಟೆಂಬರ್ 3; ಚಿತ್ರದುರ್ಗದ ಮರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎನ್ನುವ ಆರೋಪದಡಿ ಪೋಕ್ಸೋ ಪ್ರಕರಣ ದಾಖಲಾಗಿದೆ. ನೆಲದ ಕಾನೂನಿನಂತೆ ನ್ಯಾಯಾಂಗ ತನಿಖೆಗೆ ಒಪ್ಪಿಸಿ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.

ರಾಯಚೂರು ಜಿಲ್ಲೆಯ ಸಿಂಧನೂರು ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಸಂಚಾಲಕ ಎಸ್.ದೇವೇಂದ್ರಗೌಡ "ಶರಣರು ರಾಜಕಾರಣಿಗಳ ಸಂಪರ್ಕ ಹೊಂದಿದ್ದು, ಸಮಾಜದಲ್ಲಿ ಪ್ರಭಾವಿಗಳಾಗಿದ್ದಾರೆ. ಆದ್ದರಿಂದ ಪೋಕ್ಸೋ ಪ್ರಕರಣದ ಪ್ರಕ್ರಿಯೆಯ ಸ್ವರೂಪದಲ್ಲಿ ತನಿಖೆಯಾಗುತ್ತಿಲ್ಲ ಎಂದು ಜನತೆಗೆ ಅನುಮಾನ ಉಂಟಾಗಿದೆ. ಕಾರಣ ನ್ಯಾಯಾಧೀಶರ ನೇತೃತ್ವದಲ್ಲಿ ಈ ಪ್ರಕರಣ ತನಿಖೆ ನಡೆಸಬೇಕು" ಎಂದು ಹೇಳಿದರು.

Protest for Demand to Transfer Murugha Mutt seer sexual assault case to CBI

ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ವೀರಭದ್ರಗೌಡ ಅಮರಾಪುರ ಮಾತನಾಡಿ " ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶವ್ಯಾಪಿ ಚರ್ಚೆ ನಡೆದಿದೆ. ಶರಣರ ಮೇಲೆ ಗುರುತರ ಆರೋಪ ಬಂದಿರುವುದರಿಂದ ತನಿಖೆಗೆ ಸಹಕಾರ ನೀಡಬೇಕು. ಇದು ಷಡ್ಯಂತ್ರವೋ ಸತ್ಯವೋ ಎನ್ನುವುದು ತನಿಖೆಯಿಂದ ಹೊರ ಬರಬೇಕು" ಎಂದು ತಿಳಿಸಿದರು.

ಟಿಪ್ಪುನನ್ನು ವರ್ಣನೆ ಮಾಡಿದಕ್ಕೆ ಮುರುಘಾ ಸ್ವಾಮೀಜಿಗೆ ಈ ಗತಿ ಬಂದಿದೆ: ಯತ್ನಾಳ್ಟಿಪ್ಪುನನ್ನು ವರ್ಣನೆ ಮಾಡಿದಕ್ಕೆ ಮುರುಘಾ ಸ್ವಾಮೀಜಿಗೆ ಈ ಗತಿ ಬಂದಿದೆ: ಯತ್ನಾಳ್

ಒಕ್ಕೂಟದ ಸಂಚಾಲಕ ಚಂದ್ರಶೇಖರ ಗೊರಬಾಳ ಮಾತನಾಡಿ " ಮುರುಘಾ ಮಠದ ಮೌಲ್ಯಗಳು ಉಳಿಯಬೇಕಾದರೆ ಶರಣರ ಮೇಲಿನ ಆಪಾದನೆ ಕುರಿತು ಸಮಗ್ರ ತನಿಖೆ ನಡೆಯಬೇಕು. ಈಗಾಗಲೇ ನ್ಯಾಯಾಲಯದ ಮುಂದೆ ಸಿಆರ್‌ಪಿಸಿ 164ರ ಅಡಿಯಲ್ಲಿ ಸಂತ್ರಸ್ತ ಬಾಲಕಿಯರು ಹೇಳಿಕೆ ನೀಡಿದ್ದಾರೆ. ತನಿಖೆ ದಾರಿ ತಪ್ಪದಂತೆ ಎಚ್ಚರ ವಹಿಸಬೇಕಾಗಿದೆ. ಈ ಹಿಂದೆ ರಾಮಚಂದ್ರಪುರದ ರಾಘವೇಶ್ವರ ಸ್ವಾಮೀಜಿಗಳ ಪ್ರಕರಣದಲ್ಲಿ ತನಿಖೆಯೇ ಆಗಲಿಲ್ಲ. ಪ್ರಭಾವಿಗಳು ಮುಚ್ಚಿ ಹಾಕಿದರು. ಇದರಿಂದ ಮಹಿಳಾ ಸಂಕುಲಕ್ಕೆ ದ್ರೋಹ ಬಗೆದಂತಾಗಿದೆ" ಎಂದು ಅಭಿಪ್ರಾಯಪಟ್ಟರು.

ಬಸವಕೇಂದ್ರದ ಮುಖಂಡ ಗೋವಿಂದರಾಜ ಬಾರಕೇರ್ ಮಾತನಾಡಿ " ಶರಣರಿಂದ ಬಾಲಕಿಯರ ಮೇಲೆ 3 ವರ್ಷಗಳಿಂದ ಲೈಂಗಿಕ ದೌರ್ಜನ್ಯ ನಡೆದಿದೆ ಎನ್ನುವ ಆರೋಪ ಮಾಡಲಾಗಿದೆ. ಆದ್ದರಿಂದ ಬಸವಾದಿ ಶರಣರ ಆಶಯಗಳಿಗೆ ಧಕ್ಕೆಯಾಗಬಾರದೆಂದರೆ ಸಂತ್ರಸ್ತರಿಗೆ ನ್ಯಾಯ ಸಿಗಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು" ಎಂದು ಒತ್ತಾಯಿಸಿದರು.

ಸಿಬಿಐ ತನಿಖೆಗೆ ವಹಿಸಲು ಒತ್ತಾಯ
ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಬಾಲಕಿಯರ ಮೇಲೆ ಅತ್ಯಾಚಾರ ಮಾಡಿದ ಆರೋಪಕ್ಕೆ ಸಂಬಂಧಿಸಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಿ ತಕ್ಷಣ ಪೀಠದಿಂದ ಮೊಟಕು ಗೊಳಿಸಬೇಕು ಎಂದು ಒತ್ತಾಯಿಸಿ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಸಾಮಾಜಿಕ ನ್ಯಾಯಕ್ಕಾಗಿ) ಜಿಲ್ಲಾ ಸಮಿತಿಯ ಪದಾಧಿಕಾರಿಗಳು ರಾಯಚೂರು ಜಿಲ್ಲಾಡಳಿತ ಕಚೇರಿ ಎದುರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಶುಕ್ರವಾರ ಮನವಿ ಸಲ್ಲಿಸಿದರು.

ಪೋಲಿಸ್ ಕಸ್ಟಡಿ ಮುಗಿಯುವವರೆಗೂ ಜಾಮೀನು ಅರ್ಜಿ ಸಲ್ಲಿಸದಿರಲು ಮುರುಘಾ ಶರಣರಿಗೆ ಕೋರ್ಟ್ ಸೂಚನೆಪೋಲಿಸ್ ಕಸ್ಟಡಿ ಮುಗಿಯುವವರೆಗೂ ಜಾಮೀನು ಅರ್ಜಿ ಸಲ್ಲಿಸದಿರಲು ಮುರುಘಾ ಶರಣರಿಗೆ ಕೋರ್ಟ್ ಸೂಚನೆ

ಚಿತ್ರದುರ್ಗ ಜಿಲ್ಲೆಯ ಮರುಘಾ ಮಠದಲ್ಲಿ ವಿದ್ಯಾಭ್ಯಾಸ ಮಾಡಿರುವ ಬಾಲಕಿಯರ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಶಿವಮೂರ್ತಿ ಮುರುಘಾ ಶರಣರ ಕೃತ್ಯ ರಾಜ್ಯವನ್ನು ತಲೆ ತಗ್ಗಿಸುವಂತೆ ಮಾಡಿದೆ. ಮಠದ ಅಕ್ಕ ಮಹಾದೇವಿ ವಸತಿ ನಿಲಯದಲ್ಲಿ ವಿದ್ಯಾರ್ಥಿನಿಯರು ಸಾಕಷ್ಟು ನೊಂದು ಕೊಂಡಿದ್ದಾರೆ. ಪ್ರಕರಣವನ್ನು ನಿಷ್ಪಕ್ಷ ಪಾತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

Protest for Demand to Transfer Murugha Mutt seer sexual assault case to CBI

ಪ್ರಕರಣ ತಮಿಳುನಾಡಿಗೆ ವರ್ಗಾಯಿಸಿ
ರಾಯಚೂರುನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣವನ್ನು ತಮಿಳುನಾಡು ಅಥವಾ ಕೇರಳ ರಾಜ್ಯಕ್ಕೆ ವರ್ಗಾವಣೆ ಮಾಡಿ ನಿಷ್ಪಕ್ಷಪಾತ ತನಿಖೆಗೆ ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಉಸ್ತುವಾರಿ ಎಂ.ಗೋಪಿನಾಥ ಒತ್ತಾಯಿಸಿದ್ದಾರೆ.

ಪ್ರಕರಣ ಏನೇ ಇದ್ದರೂ ಸತ್ಯಾಂಶ ಹೊರಬೇಕು. ರಾಜ್ಯ ಸರ್ಕಾರ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ವಿದ್ಯಾರ್ಥಿನಿರಲ್ಲಿ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಬಾಲಕಿಯೂ ಇದ್ದು ಎಸ್.ಸಿ-ಎಸ್.ಟಿ ವಿರುದ್ಧ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಾದರೂ ಪೊಲೀಸರು ಆರೋಪಿ ಶ್ರೀಗಳಿಗೆ ಬಂಧಿಸದೇ ಆರು ದಿನದ ಬಳಿಕ ಬಂಧಿಸಿದ್ದಾರೆ. ಇದು ಕೆಟ್ಟ ಸಾಂಪ್ರದಾಯಕ್ಕೆ ನಾಂದಿ ಹಾಡಿದಂತಾಗಿದೆ. ಗೃಹ ಸಚಿವ ಅರಗ ಜ್ಞಾನೇಂದ್ರ ಆರಂಭದಲ್ಲಿಯೇ ಮುರುಘಾ ಶರಣರ ಪರ ಹೇಳಿಕೆ ನೀಡಿದ್ದು ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿದೆ. ಮುರುಘಾ ಮಠ ಹಾಗೂ ಶಿವಮೂರ್ತಿ ಮುರುಘಾ ಶರಣರು ಪ್ರಭಾವಿಯಾಗಿದ್ದು ಬೇರೆ ರಾಜ್ಯಕ್ಕೆ ವರ್ಗಾಯಿಸಬೇಕು ಎಂದು ಆಗ್ರಹಿಸಿದರು.

English summary
Progressive organizations demand to Transfer Murugha Mutt seer sexual assault case to CBI in Raichur
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X