Video: ಬಿಹಾರದಲ್ಲಿ ಸಿಎಂ ನಿತೀಶ್ ಮೇಲೆ ಈರುಳ್ಳಿ ಎಸೆದ ವ್ಯಕ್ತಿ!
ಪಾಟ್ನಾ, ನವೆಂಬರ್.03: ಬಿಹಾರದ ಅಂತಿಮ ಹಂತದ ವಿಧಾನಸಭಾ ಚುನಾವಣಾ ಕ್ಷೇತ್ರಗಳಲ್ಲಿ ನಡೆಸಿದ ಪ್ರಚಾರದ ವೇಳೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಮೇಲೆ ಸಾರ್ವಜನಿಕನೊಬ್ಬ ಈರುಳ್ಳಿ ಎಸೆದಿರುವ ಘಟನೆ ಮಂಗಳವಾರ ನಡೆದಿದೆ.
ಬಿಹಾರದ ಮಧುಬನಿಯ ಹರ್ಲಾಕಿ ಪ್ರದೇಶದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಸಿಎಂ ನಿತೀಶ್ ಕುಮಾರ್ ಮೇಲೆ ವ್ಯಕ್ತಿಯೊಬ್ಬರು ಈರುಳ್ಳಿಯನ್ನು ಎಸೆದಿದ್ದಾರೆ. ಆರ್ ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ರಾಷ್ಟ್ರೀಯ ಜನತಾ ದಳ ಮತ್ತು ಕಾಂಗ್ರೆಸ್ಸಿನ ಮಹಾಘಟಬಂಧನ್ ಮೈತ್ರಿಕೂಟದ ವಿರುದ್ಧ ಸಿಎಂ ನಿತೀಶ್ ಕುಮಾರ್ ಕಿಡಿ ಕಾರಿದ್ದರು. ಈ ಹಿಂದೆ 15 ವರ್ಷಗಳ ಆಡಳಿತ ನಡೆಸಿದಾಗ ಅವರು ಅದೆಷ್ಟರ ಮಟ್ಟಿಗೆ ಉದ್ಯೋಗ ಸೃಷ್ಟಿಸಿದ್ದಾರೆ ಎಂದು ಪ್ರಶ್ನೆ ಮಾಡಿದರು.
#Correction: Onions pelted during Chief Minister Nitish Kumar's election rally in Madhubani's Harlakhi.#BiharPolls pic.twitter.com/0NwXZ3WIfm
— ANI (@ANI) November 3, 2020
ನಾವು ಆರು ಲಕ್ಷ ಮಂದಿಗೆ ಉದ್ಯೋಗ ನೀಡಿದ್ದೇವೆ:
ಬಿಹಾರದಲ್ಲಿ ಹಿಂದಿನ ಲಾಲೂ ಪ್ರಸಾದ್ ಯಾದವ್ ಅಧಿಕಾರದಲ್ಲಿದ್ದ 15 ವರ್ಷಗಳಲ್ಲಿ ಕೇವಲ 95000 ಮಂದಿಗೆ ಸರ್ಕಾರಿ ಉದ್ಯೋಗವನ್ನು ನೀಡಿದ್ದಾರೆ. ಆದರೆ ನಾನು ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಆರು ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ. ಇಂದು ಅವರು 10 ಲಕ್ಷ ಮಂದಿಗೆ ಉದ್ಯೋಗ ನೀಡುತ್ತೇವೆ ಎಂದು ಹೇಳುತ್ತಿದ್ದಾರೆ. ಅವರ ಈ ಮಾತು ಕೇವಲ ಚುನಾವಣಾ ಪ್ರಚಾರಕ್ಕೆ ಅಷ್ಟೇ ಸೀಮಿತವಾಗಿರುತ್ತದೆ. ಅವರು ಕೇವಲ ಮಾತುಗಳನ್ನು ಆಡುತ್ತಾರೆ. ಯಾವುದೇ ರೀತಿಯ ಕೆಲಸವನ್ನು ಮಾಡುವುದಿಲ್ಲ ಎಂದು ನಿತೀಶ್ ಕುಮಾರ್ ಕಿಡಿ ಕಾರಿದರು.












Click it and Unblock the Notifications