ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಸರ್ವಾಧಿಕಾರಿಗಳ ಹೆಸರೆಲ್ಲಾ "ಎಂ" ಅಕ್ಷರದಿಂದಲೇ ಶುರುವಾಗುತ್ತೆ ಯಾಕೆ?"

|
Google Oneindia Kannada News

ನವದೆಹಲಿ, ಫೆಬ್ರುವರಿ 03: "ಹಲವು ಸರ್ವಾಧಿಕಾರಿಗಳ ಹೆಸರೆಲ್ಲಾ "ಎಂ" ಅಕ್ಷರದಿಂದಲೇ ಆರಂಭವಾಗುತ್ತದೆ ಏಕೆ?" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಟ್ವೀಟ್ ನಲ್ಲಿ ಪ್ರಶ್ನೆಯೊಂದನ್ನು ಹರಿಬಿಟ್ಟಿದ್ದಾರೆ.

ಇದಕ್ಕೆ ಹೆಚ್ಚೇನೂ ವಿವರಣೆ ನೀಡದ ಅವರು, "ಹಲವು ಸರ್ವಾಧಿಕಾರಿಗಳ ಹೆಸರೆಲ್ಲಾ "ಎಂ" ಅಕ್ಷರದಿಂದಲೇ ಶುರುವಾಗುತ್ತದೆ ಏಕೆ? ಮಾರ್ಕೋಸ್, ಮಿಸೊಲಿನಿ, ಮುಬಾರಕ್, ಮೊಬುಟು, ಮುಶರಫ್, ಮಿಲೋಸೆವಿಕ್, ಮೈಕಾಂಬೆರೊ..." ಎಂದು ಹೆಸರುಗಳ ಪಟ್ಟಿಯನ್ನಷ್ಟೇ ಟ್ವೀಟ್ ಮಾಡಿದ್ದಾರೆ. ಈ ಮೂಲಕ ಪ್ರಧಾನಿ ಮೋದಿ ವಿರುದ್ಧ ಪರೋಕ್ಷವಾಗಿ ದಾಳಿ ನಡೆಸಿದ್ದಾರೆ.

ಸೇತುವೆ ಕಟ್ಟಿ, ಗೋಡೆಯನ್ನಲ್ಲ; ರಾಹುಲ್ ಗಾಂಧಿ ಸಲಹೆಸೇತುವೆ ಕಟ್ಟಿ, ಗೋಡೆಯನ್ನಲ್ಲ; ರಾಹುಲ್ ಗಾಂಧಿ ಸಲಹೆ

ರಾಹುಲ್ ಗಾಂಧಿಯವರ ಈ ಟ್ವೀಟ್ ಗೆ ಸಾಕಷ್ಟು ಮಿಶ್ರ ಪ್ರತಿಕ್ರಿಯೆಗಳೂ ಬಂದಿವೆ. ಕರ್ನಾಟಕ ರಾಜ್ಯ ಸಚಿವ ಶ್ರೀರಾಮುಲು ಕೂಡ ಈ ಟ್ವೀಟ್ ಗೆ ತಿರುಗೇಟು ನೀಡಿದ್ದಾರೆ. "ರಾಹುಲ್ ಗಾಂಧಿ ಏಕೆ ತಮ್ಮ ಜನರ ಮೇಲೆ ದಾಳಿ ಮಾಡುತ್ತಿದ್ದಾರೆ ಗೊತ್ತಾಗುತ್ತಿಲ್ಲ. "ಎಂ" ಇಂದ ಮೋತಿಲಾಲ್ ನೆಹರು, ಮನಮೋಹನ್ ಸಿಂಗ್, ಮಮತಾ ಬ್ಯಾನರ್ಜಿ... ಎಷ್ಟು ಜನ ಇದ್ದರಲ್ಲಾ? ಎಂದು ವ್ಯಂಗ್ಯದ ಧಾಟಿಯಲ್ಲಿ ಉತ್ತರ ನೀಡಿದ್ದಾರೆ.

Why So Many Dictators Have Names Begin With M Tweeted Rahul Gandhi

ಕೇಂದ್ರ ಸರ್ಕಾರದ ಮೇಲೆ ಮತ್ತೆ ವಾಗ್ದಾಳಿ ಮಾಡಿರುವ ರಾಹುಲ್ ಗಾಂಧಿ, ದೆಹಲಿಯಲ್ಲಿ ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಕೆಲವರ ಟ್ವಿಟ್ಟರ್ ಖಾತೆಗಳ ಮೇಲೆ ನಿರ್ಬಂಧ ಹೇರಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿದ್ದಾರೆ. ಮೋದಿ ನೇತೃತ್ವದ ಸರ್ಕಾರ ಭಾರತದ ಆಸ್ತಿಯನ್ನು ಬಂಡವಾಳಶಾಹಿಗಳಿಗೆ ಮಾರಾಟ ಮಾಡುತ್ತಿದೆ ಎಂದು ದೂರಿದ್ದಾರೆ.

English summary
Congress leader rahul gandhi wednesday, tweeted 'Why do so many dictators have names that begin with M? targetting modi,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X