ನವದೆಹಲಿ: ಕಸದ ರಾಶಿಗೆ ಇಬ್ಬರು ಬಲಿ, 11 ವಾಹನ ನೀರುಪಾಲು!

ನವದೆಹಲಿ, ಸೆಪ್ಟೆಂಬರ್ 1: ಕಸದ ರಾಶಿ ಬಿದ್ದು ಇಬ್ಬರು ಮೃತರಾದ ಘಟನೆ ದೆಹಲಿಯ ಗಾಜಿಪುರ ಎಂಬಲ್ಲಿ ಇಂದು (ಸೆ.1) ನಡೆದಿದೆ. ನಾಲ್ಕು ಜನರನ್ನು ರಕ್ಷಿಸಲಾಗಿದ್ದು, 11 ಕ್ಕೂ ಹೆಚ್ಚು ವಾಹನಗಳು ಚರಂಡಿಗೆ ಬಿದ್ದಿವೆ!

ಇಲ್ಲಿನ ರಸ್ತೆಯೊಂದರ ಪಕ್ಕ ಕಸವನ್ನು ತಂದು ತಂದು ಚೆಲ್ಲಲಾಗುತ್ತಿತ್ತು. ಈ ಕಸದ ರಾಶಿ ಎಷ್ಟು ಬೆಳೆದಿತ್ತೆಂದರೆ ಕಸದ ರಾಶಿಯ ಒಂದು ಭಾಗ ಕುಸಿದಿದ್ದರಿಂದ ಆ ರಾಶಿಯೊಳಗೆ ಸಿಕ್ಕು ಇಬ್ಬರು ಮೃತರಾಗಿದ್ದಲ್ಲದೆ, ಕಸದ ರಾಶಿ ಬಿದ್ದ ರಭಸಕ್ಕೆ ರಸ್ತೆಯ ಪಕ್ಕ ನಿಲ್ಲಿಸಿದ್ದ ಕಾರು, ಬೈಕ್ ಸೇರಿದಂತೆ 11 ಕ್ಕೂ ಹೆಚ್ಚು ವಾಹನಗಳು ಪಕ್ಕದ ಬೃಹತ್ ಚರಂಡಿಯೊಂದರ ನೀರಿಗೆ ಬಿದ್ದಿದೆ!

Two killed as garbage dump caves in at Gazipur Delhi landfill site

ಸ್ಥಳಕ್ಕೆ ಆಗಮಿಸಿದ ಎನ್ ಡಿಆರ್ ಎಫ್(ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ) ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಕಸದ ರಾಶಿಯಲ್ಲಿ ಬಿದ್ದಿದ್ದ ನಾಲ್ಕು ಜನರನ್ನು ಹೊರತೆಗೆದು, ರಕ್ಷಿಸಿದ್ದಾರೆ. ವಾಹನಗಳನ್ನೂ ನೀರಿನಿಂದ ತೆಗೆಯಲಾಗುತ್ತಿದೆ!

Two killed as garbage dump caves in at Gazipur Delhi landfill site

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. (ಚಿತ್ರಕೃಪೆ: ಎಎನ್ ಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+