ನರೇಂದ್ರ ಮೋದಿ ಅಶ್ವಮೇಧ ಯಾಗ ವಿಫಲಗೊಳಿಸಲು ಮೆಗಾಪ್ಲಾನ್

By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ, ಮಾರ್ಚ್ 17: ರಾಷ್ಟ್ರಮಟ್ಟದಲ್ಲಿ ಒಂದು ದೊಡ್ಡ ಮೈತ್ರಿಕೂಟವೊಂದನ್ನು ಭಾರತೀಯರು ನೋಡಲಿದ್ದಾರಾ? ಬಿಜೆಪಿಯ ಗೆಲುವಿನ ಕುದುರೆಗೆ ತಡೆ ಹಾಕುವುದಕ್ಕೆ ಸಾಧ್ಯವಿಲ್ಲವೇನೋ ಎಂಬಂಥ ಸನ್ನಿವೇಶ ಕಣ್ಣೆದುರಿಗಿದೆ. ಬಿಜೆಪಿಯ ಗೆಲುವಿನ ಓಟಕ್ಕೆ ತಡೆಹಾಕಲು ಎಲ್ಲ ಆಯ್ಕೆಗಳನ್ನು ಎದುರಿಗಿಟ್ಟು ತೂಗುತ್ತಿರುವ ಕಾಂಗ್ರೆಸ್, ದೊಡ್ಡ ಮೈತ್ರಿಕೂಟ ರಚನೆ ಆಯ್ಕೆ ಮುಂದೆ ನಿಂತಿದೆ.

ಈ ಮೈತ್ರಿಕೂಟ ರಚನೆಯ ರೂಪು-ರೇಖೆಗಳು ಮುಂದಿನ ವರ್ಷದ ವೇಳೆಗೆ ಸಿಗಲಿದೆ. 2019ರ ಲೋಕಸಭೆ ಚುನಾವಣೆಗೆ ಅದು ಸಿದ್ಧವಾಗಲಿದೆ. ಈ ಆಲೋಚನೆ ಬಂದಿರುವುದು ಜೆಡಿಯು ಹಾಗೂ ಆರ್ ಎಲ್ ಡಿ ಹೇಳಿದ ಮಾತಿನ ನಂತರ. ಅಂಥ ಮಾತೇನದು ಅಂತೀರಾ? "ಉತ್ತರಪ್ರದೇಶದಲ್ಲಿ ಎಸ್ಪಿ, ಬಿಎಸ್ಪಿ ಹಾಗೂ ಕಾಂಗ್ರೆಸ್ ಒಟ್ಟಾಗಿ ಕಣಕ್ಕಿಳಿದಿದ್ದರೆ ಬಿಜೆಪಿ ಖಂಡಿತಾ ಗೆಲ್ಲುತ್ತಿರಲಿಲ್ಲ ಎಂದಿದ್ದಾರೆ ಬಿಹಾರದ ದೋಸ್ತಿಗಳು.[ಹಡಗೇ ಮುಳುಗಿದೆ, ಕಳ್ಕೊಂಡಿದ್ದು ಅಡಿಕೆ ಚೂರು ಅಂತಾರೆ ರಾಹುಲ್ ಗಾಂಧಿ]

To beat Modi, Congress proposes grand alliance for 2019

ಈ ಬಗ್ಗೆ ಕಾಂಗ್ರೆಸ್ ಆಸಕ್ತಿಯೇನೋ ತೋರಿಸಿತು. ಆದರೆ ಈ ಗುಂಪಿನ ನಾಯಕತ್ವ ವಹಿಸುವುದಕ್ಕೆ ಸಾಧ್ಯವಾಗಲಿಲ್ಲ. ರಾಷ್ಟ್ರಮಟ್ಟದಲ್ಲಿ ರಚನೆಯಾಗುವ ದೊಡ್ಡ ಮೈತ್ರಿಕೂಟದ ಮುಂದಾಳತ್ವ ವಹಿಸಲು ಜೆಡಿಯು ಉತ್ಸುಕವಾಗಿದೆ. ಆ ಮೈತ್ರಿಕೂಟದ ನಾಯಕತ್ವವನ್ನು ನಿತೀಶ್ ಕುಮಾರ್ ವಹಿಸುವ ಸಾಧ್ಯತೆ ಇದೆ.

ಈ ಗುಂಪಿನಲ್ಲಿ ಸಿಪಿಎಂನ ಕೂಡ ಸೇರಿಕೊಳ್ಳುವ ಸಾಧ್ಯತೆ ಇದೆ. 2019ರ ಚುನಾವಣೆಗೆ ಒಂದು ಸಾಮಾನ್ಯ ಉದ್ದೇಶ-ಗುರಿ ಇಟ್ಟುಕೊಂಡು ಅದರ ಪ್ರಕಾರ ಬಿಜೆಪಿ ವಿರುದ್ಧ ಬಡಿದಾಡಬೇಕು ಎಂಬ ಚಿಂತನೆ ನಡೆದಿದೆ. ಈ ಬಗ್ಗೆ ಸಿಪಿಎಂನ ಮುಖವಾಣಿ 'ಪೀಪಲ್ಸ್ ಡೆಮಾಕ್ರಸಿ'ಯಲ್ಲಿ ಸಂಪಾದಕೀಯ ಕೂಡ ಬರೆದಿದ್ದಾರೆ ಪ್ರಕಾಶ್ ಕಾರಟ್.[ಸಮೀಕ್ಷೆ: 2018ರ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿಗೆ 150 ಸ್ಥಾನ!]

"ಉತ್ತರಪ್ರದೇಶದ ಫಲಿತಾಂಶದಿಂದ ನಮಗೊಂದು ಪಾಠವಿದೆ. ರಾಜಕೀಯ ಪಕ್ಷಗಳು ಬಿಜೆಪಿ ವಿರುದ್ಧ ಬಡಿದಾಡಲು ಮೈತ್ರಿ ಮಾಡಿಕೊಳ್ಳುವಾಗ ಸಾಮಾನ್ಯ ಕಾರ್ಯಕ್ರಮಗಳು ಹಾಗೂ ನೀತಿಯ ಆಧಾರದಲ್ಲಿ ಒಂದಾಗಬೇಕು. ಅದು ಸಾಧ್ಯವಾಗಲಿಲ್ಲ ಅಂದರೆ ಎಸ್ಪಿ-ಕಾಂಗ್ರೆಸ್ ಮೈತ್ರಿ ವಿಫಲವಾದಂತೆ ಆಗುತ್ತದೆ" ಎಂದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Are we about to witness a grand alliance on the national front? With the BJP appearing to be unstoppable, the Congress said that it is exploring all options including a grand alliance to stop the BJP march. The alliance is likely to take shape in the next year and would be ready for the 2019 general elections.
Please Wait while comments are loading...