ಸುಷ್ಮಾ ಸ್ವರಾಜ್ ಗೆ ಕಿಡ್ನಿ ಆಫರ್ ಮಾಡಿದ ಟಿಡಿಪಿ ಸಂಸದ
ಮೂತ್ರ ಪಿಂಡ ವೈಫಲ್ಯದಿಂದ ದೆಹಲಿ ಏಮ್ಸ್ ಆಸ್ಪತ್ರೆಗೆ ದಾಖಲಾಗಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಮೂತ್ರಪಿಂಡ ದಾನಮಾಡುವುದಾಗಿ ಟಿಡಿಪಿ ಸಂಸದ ರಾಯಪಾಟಿ ಸಂಬಶಿವರಾವ್ ಪತ್ರ ಬರೆದಿದ್ದಾರೆ.
ನವದೆಹಲಿ, ನವೆಂಬರ್, 18: ಮೂತ್ರಪಿಂಡ ವೈಫಲ್ಯದಿಂದ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಆಸ್ಪತ್ರೆಗೆ ದಾಖಲಾಗಿರುವುದು ಹಳೆಯ ವಿಷಯ.
ಹೊಸ ವಿಷಯವೇನೆಂದರೆ ಸುಷ್ಮಾ ಅವರಿಗೆ ಕಿಡ್ನಿ ದಾನ ಮಾಡಲು ತಾವು ಸಿದ್ಧ ಎಂದು ಸಂಸದರೊಬ್ಬರು ಎದ್ದು ನಿಂತಿದ್ದಾರೆ.
ಎನ್ ಡಿ ಎ ಮೈತ್ರಿಕೂಟದ ಮಿತ್ರಪಕ್ಷವಾದ ತೆಲುಗುದೇಶಂ ಪಕ್ಷದ ಸಂಸದ ರಾಯಪಾಟಿ ಸಾಂಬಶಿವರಾವ್ ಅವರು ಸುಷ್ಮಾ ಅವರಿಗೆ ಕಿಡ್ನಿ ದಾನ ಮಾಡಲು ಸಿದ್ಧರಿರುವುದಾಗಿ ಹೇಳಿಕೆ ನಿಡಿದ್ದಾರೆ. [ಕಿಡ್ನಿ ವಿಫಲ, ಸುಷ್ಮಾ ಸ್ವರಾಜ್ ಎಐಐಎಂಎಸ್‌ಗೆ ದಾಖಲು]

ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿರುವ ವಿಷಯವನ್ನು ಸ್ವತಃ ಸುಷ್ಮಾ ಸ್ವರಾಜ್ ಅವರೇ ಟ್ವಿಟ್ಟರ್ ನಲ್ಲಿ ಪ್ರಕಟಿಸಿದ್ದರು. ಸುದ್ದಿ ಹೊರ ಬೀಳುತ್ತಿದ್ದಂತೆಯೇ ಹಲವು ಮಂದಿ ಸುಷ್ಮಾ ಅವರಿಗೆ ಕಿಡ್ನಿ ದಾನ ಮಾಡುವುದಾಗಿ ತಿಳಿಸಿದ್ದರು.
ಪ್ರಸ್ತುತ ಸಾಂಬಶಿವರಾವ್ ಅವರೂ ಸಹ ಕಿಡ್ನಿ ದಾನ ಮಾಡುವುದಾಗಿ ಹೇಳಿದ್ದು, "ಸುಷ್ಮಾ ಅವರೇ ನೀವು ಮತ್ತಷ್ಟು ದಿನ ದೇಶಕ್ಕೆ ಸೇವೆ ಸಲ್ಲಿಸಬೇಕಾದ ಅವಶ್ಯಕತೆ ಇದೆ, ಆದ್ದರಿಂದ ದಯವಿಟ್ಟು ನನ್ನ ಕಿಡ್ನಿಯನ್ನು ತೆಗೆದುಕೊಳ್ಳಿ ಎಂದು ಪತ್ರ ಬರೆದಿದ್ದಾರೆ.

ಶುಕ್ರವಾರ ಸುಷ್ಮಾ ಸ್ವರಾಜ್ ಕಚೇರಿ ಸಿಬ್ಬಂದಿಗೆ ಈ ಪತ್ರವನ್ನು ಅವರು ರವಾನಿಸಿದ್ದಾರೆ.
ಪ್ರಸ್ತುತ ಸುಷ್ಮಾ ಸ್ವರಾಜ್ ಅವರು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಉತ್ತರಪ್ರದೇಶ, ಪಂಜಾಬ್, ಹರ್ಯಾಣ ರಾಜ್ಯಗಳಿಂದ ಹೆಚ್ಚು ಜನರು ಸುಷ್ಮಾ ಅವರಿಗೆ ಕಿಡ್ನಿ ದಾನಮಾಡುವುದಾಗಿ ಆಸ್ಪತ್ರೆಗೆ ಕರೆ ಮಾಡಿ ತಿಳಿಸುತ್ತಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.












Click it and Unblock the Notifications