ಸೆಲ್ಫಿ ಕ್ಲಿಕ್ಕಿಸಿ ಕೆಲಸದಲ್ಲಿ ಹಿಂಬಡ್ತಿ ಪಡೆದ ಡಿಆರ್ ಡಿಒ ವಿಜ್ಞಾನಿ

Posted By:
Subscribe to Oneindia Kannada

ನವದೆಹಲಿ,ಮಾರ್ಚ್,21: ಸೆಲ್ಫಿ ಹುಚ್ಚಿಗೆ ಎಷ್ಟೋ ಮಂದಿ ತಮ್ಮ ಪ್ರಾಣ ತೆತ್ತಿದ್ದಾರೆ. ಆದರೆ ಎಲ್ಲೂ ಉದ್ಯೋಗದಲ್ಲಿ ಹಿಂಬಡ್ತಿ ಪಡೆದ, ಉದ್ಯೋಗ ಕಳೆದುಕೊಂಡ ಘಟನೆ ನಡೆದಿರಲಿಲ್ಲ. ಇದೀಗ ಡಿಆರ್ ಡಿಓ (Defence Research and Development Organization) ವಿಜ್ಞಾನಿಯೊಬ್ಬರು ಸೆಲ್ಫಿ ಕ್ಲಿಕ್ಕಿಸಲು ಹೋಗಿ ತಮ್ಮ ಉದ್ಯೋಗದಲ್ಲಿ ಹಿಂಬಡ್ತಿ ಪಡೆದಿರುವ ಘಟನೆ ವರದಿಯಾಗಿದೆ.

ದೇಶದ ಪ್ರಮುಖ ರಕ್ಷಣಾ ಸಂಸ್ಥೆಯಾದ ಸಂಸ್ಥೆ ಡಿಆರ್ ಡಿಒ ವಿಜ್ಞಾನಿಯಾದ ಸುಶೀಲ್ ಕುಮಾರ್ ಅವರು ಸೆಲ್ಫಿ ತೆಗೆದುಕೊಳ್ಳಲು ಹೋಗಿ ತಮ್ಮ ಕೆಲಸದಲ್ಲಿ ಹಿಂಬಡ್ತಿ ಪಡೆದಿದ್ದು ಹಿರಿಯ ಅಧಿಕಾರಿಗಳು ಅವರನ್ನು ಪುನಃ ಮೊದಲಿನ ಕೆಲಸಕ್ಕೆ ನಿಯೋಜಿಸಿದ್ದಾರೆ.[ಸೆಲ್ಫಿ ಮೋಹ ಒಂದು ಮಾನಸಿಕ ಕಾಯಿಲೆ - ಮನಶ್ಶಾಸ್ತ್ರಜ್ಞರು]

Selfie craze DRDO scientist demotion of his position in New delhi

ಡಿಆರ್ ಡಿಒದಲ್ಲಿ ನಡೆದಿದ್ದರಾದರೂ ಏನು?

ಸುಶೀಲ್ ಕುಮಾರ್ ಅವರು ಇತ್ತೀಚೆಗೆಯಷ್ಟೇ ತಮ್ಮ ವೃತ್ತಿಯಲ್ಲಿ ಬಡ್ತಿ ಪಡೆದಿದ್ದರು. ದೆಹಲಿ ಪ್ರಧಾನ ಕಚೇರಿಗೆ ಆಗಮಿಸಿದ್ದ ಅವರು ಬಡ್ತಿ ಪಡೆದ ಸಂತಸದಲ್ಲಿ ಕಚೇರಿಯಲ್ಲಿ ಕೆಲವು ಸೆಲ್ಫಿ ಕ್ಲಿಕ್ಕಿಸಿದ್ದಾರೆ.

ಇವರು ಸೆಲ್ಫಿ ತೆಗೆದುಕೊಳ್ಳುವಾಗ ಹಲವಾರು ರಹಸ್ಯ ಉಪಕರಣಗಳು ಕಚೇರಿಯಲ್ಲಿ ಇದ್ದವು. ತಮ್ಮ ಬಡ್ತಿ ಸಂತೋಷದಲ್ಲಿ ಸುಶೀಲ್ ಅವರು ರಹಸ್ಯ ಕೊಠಡಿಯಲ್ಲಿ ಫೋಟೋ ಕ್ಲಿಕ್ಕಿಸುವಂತಿಲ್ಲ ಎಂಬುದನ್ನು ಗಮನಿಸದೆ ತಮ್ಮ ಸ್ನೇಹಿತರೊಂದಿಗೆ ಸೆಲ್ಫಿ ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.[ಕಳ್ಳತನ ಬಯಲು ಮಾಡಿದ ಕಳ್ಳಿಯ ಸೆಲ್ಫಿ ಹುಚ್ಚು]

ಈ ವಿಚಾರ ತಿಳಿದ ಹಿರಿಯ ಅಧಿಕಾರಿಗಳು ಸುಶೀಲ್ ಅವರ ಮೊಬೈಲ್ ನ್ನು ವಶಕ್ಕೆ ತೆಗೆದುಕೊಂಡು ಅವರ ವಿರುದ್ಧ ಕ್ರಮ ಜರುಗಿಸಿದ್ದು, ಉದ್ಯೋಗದಲ್ಲಿ ಹಿಂಬಡ್ತಿ ನೀಡಿದ್ದಾರೆ.

ಮೊದಲು ಎಲ್ಲಿ ಕಾರ್ಯನಿರ್ವಹಿಸುತ್ತಿದ್ದರು?

ಸುಶೀಲ್ ಕುಮಾರ್ ಅವರು ಮೊದಲು ಡಿಆರ್ ಡಿಒ ಸಂಸ್ಥೆಯಲ್ಲಿ ಮೆಟೀರಿಯಲ್ ಮ್ಯಾನೇಜ್ ಮೆಂಟ್ ಗೆ ಆಯ್ಕೆ ಆಗಿದ್ದರು. ಮೊದಲು ಇವರು ಲ್ಯಾಬೋರೇಟರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅಲ್ಲದೇ ಡಿಆರ್ ಡಿಒದ ಪ್ರತಿಷ್ಠಿತ ಯೋಜನೆಗಳಾದ ಆಕಾಶ್ ಮತ್ತು ನಾಗ್ ಕ್ಷಿಪಣಿ ಯೋಜನೆಗಳಲ್ಲಿ ಕೆಲಸ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
DRDO (Defence Research and Development Organization) scientist Sushil Kumar clicked several selfies in his chamber and posted them on his face book wall. He is stripped of his position and sent back to earlier work.
Please Wait while comments are loading...