ವರದಕ್ಷಿಣೆ ಕಿರುಕುಳದ ಸಾಕ್ಷ್ಯವಿದ್ದರೆ ಮಾತ್ರ ಶಿಕ್ಷೆ: ಸುಪ್ರೀಂ

Posted By:
Subscribe to Oneindia Kannada

ನವದೆಹಲಿ, ನವೆಂಬರ್ 21: ವರದಕ್ಷಿಣೆಗೆ ಬೇಡಿಕೆಯಿಂದ ಪತ್ನಿಗೆ ಕಿರುಕುಳ ನೀಡುತ್ತಿದ್ದ ಎಂಬುದಕ್ಕೆ ಸಾಕ್ಷ್ಯ ಇದ್ದರೆ ಮಾತ್ರ, ವರದಕ್ಷಿಣೆ ಸಾವು ಪ್ರಕರಣಕ್ಕೆ ಆರೋಪಿಗೆ ಶಿಕ್ಷೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ.

ಮದುವೆಯಾದ 7ವರ್ಷಗಳಲ್ಲಿ ಆಕೆ ಸಾವಿಗೀಡಾದರೆ ಆಕೆ ಸಾಯಲು ಆತನು ನೀಡುತ್ತಿದ್ದ ಹಿಂಸೆಯೇ ಕಾರಣ. ವರದಕ್ಷಿಣೆ ಕಿರುಕುಳ ನೀಡುತ್ತಿದ್ದನು ಎಂಬುದಕ್ಕೆ ಸಾಕ್ಷ್ಯವಿದ್ದರೆ ಮಾತ್ರ ಪ್ರಕರಣದ ಆರೋಪಿಯನ್ನು ಶಿಕ್ಷೆಗೆ ಗುರಿಮಾಡಬೇಕು ಎಂದು ಹೇಳಿದೆ.

supreme

ವರದಕ್ಷಿಣೆ ಸಾವನ್ನು ಸಾಕ್ಷ್ಯಸಮೇತ ಸಾಬೀತು ಮಾಡಲು ಸಾಧ್ಯವಾಗದಿದ್ದರೆ, ಆ ಆರೋಪಿಯನ್ನು ಅಪರಾಧಿ ಎಂದು ಪರಿಗಣಿಸಲು ಸಾಧ್ಯವಾಗುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಅಮಿತಾ ರಾವ್ ಮತ್ತು ದೀಪಕ್ ಮಿಶ್ರ ಅವರ ವಿಭಾಗೀಯ ಪೀಠ ತೀರ್ಪಿನಲ್ಲಿ ತಿಳಿಸಿದೆ.

ಈ ಹಿನ್ನೆಲೆ ಮಹಿಳೆಯೊಬ್ಬಳ ಶವ 1996ರಲ್ಲಿ ಅವಳ ಮನೆಯಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದು ವರದ ಕ್ಷಿಣೆ ಕಿರುಕುಳದಿಂದ ಸಂಭವಿಸಿದ ಸಾವು ಎಂದು ಆಕೆಯ ಕೆಲವು ಸಂಬಂಧಿಕ ರನ್ನು ಶಿಕ್ಷೆಗೆ ಗುರಿಪಡಿಸಲಾಗಿತ್ತು. ಮಧ್ಯಪ್ರದೇಶ ಹೈಕೋರ್ಟ್‌ ಇವರಿಗೆ ಶಿಕ್ಷೆ ವಿಧಿಸಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಇವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು.

ಪತಿ ಮತ್ತು ಕೆಲವು ಸಂಬಂಧಿಕರು ಮಹಿಳೆಯಿಂದ ವರದಕ್ಷಿಣೆ ಕೇಳುತ್ತಿದ್ದರು. ಆಕೆಯನ್ನು ಹಿಂಸೆಗೆ ಗುರಿಮಾಡಿದ್ದರು ಎಂದು ಪೊಲೀಸರು ಹೇಳಿದ್ದರು. ಪತಿ, ಆತನ ಸಂಬಂಧಿಕರು ಅಥವಾ ವರದಕ್ಷಿಣೆ ಸಾವು ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿರುವ ಯಾವುದೇ ವ್ಯಕ್ತಿ ಕ್ರೂರವಾಗಿ ವರ್ತಿಸಿದ್ದ ಎಂಬುದಕ್ಕೆ ಸಾಕ್ಷ್ಯವನ್ನು ತೋರಿಸಬೇಕು ಹೀಗಾಗಿ ಈ ಪ್ರಕರಣವನ್ನು ದೋಷಮುಕ್ತಗೊಳಿಸಿ ಆತನನ್ನು ಬಿಡುಗಡೆಗೊಳಿಸಿದೆ.

'ಸ್ಪಷ್ಟ ಸಾಕ್ಷ್ಯವನ್ನು ಹಾಜರುಪಡಿಸಲು ಪ್ರಾಸಿಕ್ಯೂಷನ್ ವಿಫಲವಾದರೆ, ಪೂರ್ವಗ್ರಹಿಕೆಯನ್ನು ಮಾತ್ರ ಆಧಾರವಾಗಿ ಮುಂದಿಟ್ಟುಕೊಂಡು ಆರೋಪಿಯನ್ನು ಶಿಕ್ಷೆಗೆ ಗುರಿಪಡಿಸಲು ಆಗದು' ಎಂದು ನ್ಯಾಯಪೀಠ ಹೇಳಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The provision to secure convictions in dowry death cases was inserted in the Evidence Act, which provides that instead of presumption of innocence, the accused would be presumed prima facie guilty in such homicides if a woman dies within seven years of marriage and there is proof of cruelty
Please Wait while comments are loading...