ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಲ್ವಾಮ ದಾಳಿ : ಹುತಾತ್ಮರಿಗೆ ಮೋದಿಯಿಂದ ಅಂತಿಮ ನಮನ

|
Google Oneindia Kannada News

ನವದೆಹಲಿ, ಫೆಬ್ರವರಿ 15 : ಪುಲ್ವಾಮದ ಅವಂತಿಪುರ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಂತಿಮ ನಮನ ಸಲ್ಲಿಸಿದರು. ಜಮ್ಮು ಮತ್ತು ಕಾಶ್ಮೀರದಿಂದ ಪಾರ್ಥಿವ ಶರೀರವನ್ನು ದೆಹಲಿಗೆ ತರಲಾಗಿದೆ.

ಶುಕ್ರವಾರ ರಾತ್ರಿ ದೆಹಲಿಯ ಪಾಲಂ ವಿಮಾನ ನಿಲ್ದಾಣಕ್ಕೆ ಯೋಧರ ಪಾರ್ಥಿವ ಶರೀರವನ್ನು ತರಲಾಯಿತು. ಪುಲ್ವಾಮದ ಅವಂತಿಪುರ್‌ನಲ್ಲಿ ಗುರುವಾರ ಉಗ್ರರು ಸೇನಾ ವಾಹನದ ಮೇಲೆ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ 40 ಯೋಧರು ಹುತಾತ್ಮರಾಗಿದ್ದರು.

ಗುಪ್ತಚರ ಇಲಾಖೆ ದಾರಿ ತಪ್ಪಿಸಲು ಉಗ್ರ ಸಂಘಟನೆಯ ಹೊಸ ತಂತ್ರಗುಪ್ತಚರ ಇಲಾಖೆ ದಾರಿ ತಪ್ಪಿಸಲು ಉಗ್ರ ಸಂಘಟನೆಯ ಹೊಸ ತಂತ್ರ

PM Narendra Modi pay tribute to martyred in the Pulwama attack

ಎಲ್ಲಾ 40 ಹುತಾತ್ಮ ಯೋಧರ ಪಾರ್ಥಿವ ಶರೀರವನ್ನು ವಿಮಾನ ನಿಲ್ದಾಣಕ್ಕೆ ತರಲಾಗಿದೆ. ಸೇನಾಪಡೆಯಿಂದ ಅಂತಿಮ ನಮನ ಸಲ್ಲಿಸಿದ ಬಳಿಕ ಆಯಾ ರಾಜ್ಯಗಳಿಗೆ ಯೋಧರ ಪಾರ್ಥಿವ ಶರೀರವನ್ನು ಕಳುಹಿಸಲಾಗುತ್ತದೆ.

12ನೇ ತರಗತಿ ಪರೀಕ್ಷೆಗೆ ಹೋಗಿದ್ದ ಆದಿಲ್ ಮನೆಗೆ ಮರಳಲಿಲ್ಲ12ನೇ ತರಗತಿ ಪರೀಕ್ಷೆಗೆ ಹೋಗಿದ್ದ ಆದಿಲ್ ಮನೆಗೆ ಮರಳಲಿಲ್ಲ

ಪಾಲಂ ವಿಮಾನ ನಿಲ್ದಾಣಕ್ಕೆ ಪಾರ್ಥಿವ ಶರೀರವನ್ನು ತಂದ ಬಳಿಕ ಸೇನಾ ಪಡೆಯಿಂದ ಅಂತಿಮ ಗೌರವ ಸಲ್ಲಿಸಲಾಯಿತು. ನಂತರ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ರಕ್ಷಣಾ ಸಚಿವ ನಿರ್ಮಲಾ ಸೀತಾರಾಮನ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅಂತಿಮ ನಮನ ಸಲ್ಲಿಸಿದರು.

PM Narendra Modi pay tribute to martyred in the Pulwama attack

ಫೋಟೋಗೆ ಹೂವಿನ ಹಾರ ಹಾಕ್ಬೇಡಿ ಎಂದು ಅತ್ತು ಗೋಳಾಡಿದ ಹುತಾತ್ಮ ಯೋಧ ಗುರುವಿನ ಪತ್ನಿಫೋಟೋಗೆ ಹೂವಿನ ಹಾರ ಹಾಕ್ಬೇಡಿ ಎಂದು ಅತ್ತು ಗೋಳಾಡಿದ ಹುತಾತ್ಮ ಯೋಧ ಗುರುವಿನ ಪತ್ನಿ

ಪುಲ್ವಾಮದ ಉಗ್ರರ ದಾಳಿಯಲ್ಲಿ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗುಡಿಗೆರೆ ಗ್ರಾಮದ ಎಚ್.ಗುರು (33) ಹುತಾತ್ಮರಾಗಿದ್ದಾರೆ. ಅವರ ಪಾರ್ಥಿವ ಶರೀರವನ್ನು ತಡರಾತ್ರಿ ಕರ್ನಾಟಕಕ್ಕೆ ಕಳುಹಿಸಲಾಗುತ್ತದೆ.

English summary
Prime Minister Narendra Modi paid tribute to soldiers who laid down their lives in Pulwama attack. Bodies of 40 soldiers in Palam airport, New Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X