ಮೋದಿ ಪದಗ್ರಹಣಕ್ಕೆ ಅಭೂತಪೂರ್ವ ಸಿದ್ಧತೆ
ನವದೆಹಲಿ, ಮೇ.26: ದೇಶದ 15ನೇ ಪ್ರಧಾನಿಯಾಗಿ ಸೋಮವಾರ ಸಂಜೆ ರಾಷ್ಟ್ರಪತಿ ಭವನದಲ್ಲಿ ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ರಾಷ್ಟ್ರಪತಿ ಭವನದಲ್ಲಿ ದೇಶದ ಪ್ರಥಮ ಪ್ರಜೆಯಾಗಿರುವ ಪ್ರಣಬ್ ಮುಖರ್ಜಿ ಅವರು ನೂತನ ಪ್ರಧಾನಿಗೆ ಅಧಿಕಾರ ಗೌಪ್ಯತೆ ಬೋಧಿಸಲಿದ್ದು, ಬಿಗಿಭದ್ರತೆಗಾಗಿ ಒಟ್ಟು ಆರು ಸಾವಿರ ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ.
ನರೇಂದ್ರ ಮೋದಿಯವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ದೇಶ-ವಿದೇಶಗಳಿಂದ ರಾಷ್ಟ್ರಾಧ್ಯಕ್ಷರು, ಪ್ರಧಾನ ಮಂತ್ರಿಗಳು, ರಾಯಭಾರಿ ಅಧಿಕಾರಿಗಳು ಸೇರಿದಂತೆ ಉನ್ನತ ನಿಯೋಗ ಆಗಮಿಸುತ್ತಿರುವುದರಿಂದ ದೆಹಲಿಯಲ್ಲಿ ಹಿಂದೆಂದೂ ಕಾಣದಷ್ಟು ಕಟ್ಟೆಚ್ಚರ ವಹಿಸಲಾಗಿದೆ.
ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆಗಳಾದ ಲಷ್ಕರ್-ಇ-ತೊಯ್ಬಾ, ಹಿಜ್ಬುಲ್ ಮುಜಾಹಿದ್ದೀನ್, ಇಂಡಿಯನ್ ಮುಜಾಹಿದ್ದೀನ್ ಸೇರಿದಂತೆ ವಿವಿಧ ಸಂಘಟನೆಗಳ ಬೆದರಿಕೆ ಹಿನ್ನೆಲೆಯಲ್ಲಿ ಮೋದಿಯವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಎಲ್ಲೆಡೆ ಬಿಗಿಭದ್ರತೆ ಕೈಗೊಳ್ಳಲಾಗಿದೆ.
ರಾಷ್ಟ್ರ ರಾಜಧಾನಿ ನವದೆಹಲಿಯನ್ನು ಅಕ್ಷರಶಃ ಪೊಲೀಸರ ಸುಪರ್ದಿಗೆ ನೀಡಲಾಗಿದೆ. ಸಮಾರಂಭ ನಡೆಯಲಿರುವ ರೈಸೀನಾ ಹಿಲ್ಸ್ ನ ಸುತ್ತಮುತ್ತ ಎರಡು ಕಿಮೀ ವ್ಯಾಪ್ತಿ ಸೇರಿದಂತೆ ಎಲ್ಲೆಡೆ ಪೊಲೀಸರ ಲಾಠಿ ಮತ್ತು ಬೂಟು ಸದ್ದುಗಳೇ ರಿಂಗಣಿಸುತ್ತಿವೆ. ಕಳೆದ ಮೂರು ದಿನಗಳಿಂದಲೇ ದೆಹಲಿಯನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡಿರುವ ಸೇನಾಪಡೆ ಆಯಕಟ್ಟಿನಲ್ಲಿ ಹದ್ದಿನ ಕಣ್ಣಿಟ್ಟಿದ್ದಾರೆ. ವಾಯುಸೇನೆ, ಭೂ ಸೇನೆ ಮತ್ತು ನೌಕಾ ಸೇನಾ ಪಡೆಯನ್ನು ಇದೇ ಮೊದಲ ಬಾರಿಗೆ ಭದ್ರತೆಗೆ ನಿಯೋಜಿಸಲಾಗಿದೆ. ಜತೆಗೆ ಬಿಎಸ್‍ಎಫ್, ಸಿಐಎಸ್‍ಎಫ್, ಸಿಆರ್‍ಪಿಎಫ್, ಎನ್‍ಎಸ್‍ಜಿಯನ್ನು ಸಹ ಭದ್ರತೆಗೆ ನಿಯೋಜಿಸಲಾಗಿದೆ.

ಹೆಲಿ ಕಾಪ್ಟರ್ ಹೊಡೆದುರುಳಿಸಲು ಸೂಚನೆ
ಸೋಮವಾರ ಬೆಳಗ್ಗೆ ರಾಷ್ಟ್ರಪತಿ ಭವನದ ಸುತ್ತಮುತ್ತ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳಲ್ಲೂ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ.
ಅಲ್ಲದೆ, ಮಧ್ಯಾಹ್ನ ಎರಡು ಗಂಟೆ ನಂತರ ರಾಷ್ಟ್ರಪತಿ ಭವನದ ಸುತ್ತಮುತ್ತ ಯಾವುದೇ ರೀತಿಯ ಹೆಲಿಕಾಪ್ಟರ್ ಇಲ್ಲವೆ ವಿಮಾನಗಳ ಹಾರಾಟವನ್ನು ನಿಷೇಧಿಸಲಾಗಿದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.
ಭೂತನ್ ಪ್ರಧಾನಿ ದೆಹಲಿಗೆ ಆಗಮನ
ನವದೆಹಲಿಗೆ ಆಗಮಿಸಿರುವ ಭೂತನ್ ಪ್ರಧಾನಿ ಲಿಯೊಚೆನ್ ತ್ಸಾರಿಂಗ್ ತೊಬ್ಗೆ ಅವರಿಗೆ ವಿದೇಶಾಂಗ ಖಾತೆ ಸದಸ್ಯೆ ರುಚಿತಾ ಕಾಂಬೊಜ್ ಅವರಿಂದ ಸ್ವಾಗತ.

ದೆಹಲಿ ತಮಿಳ್ ಯುವಕರ ಪ್ರತಿಭಟನೆ
ಮೋದಿ ಪದಗ್ರಹಣ ಸಮಾರಂಭಕ್ಕೆ ಶ್ರೀಲಂಕಾ ಅಧ್ಯಕ್ಷ ರಾಜಪಕ್ಸೆ ಆಗಮಿಸುವುದನ್ನು ಖಂಡಿಸಿ ಚೆನ್ನೈಯಲ್ಲಷ್ಟೆ ಅಲ್ಲದೆ ನವದೆಹಲಿಯಲ್ಲೂ ತಮಿಳರು ಪ್ರತಿಭಟನೆ ನಡೆಸಿದ್ದಾರೆ. PTI Photo by Atul Yadav

ರಾಷ್ಟ್ರಪತಿ ಭವನದ ಬಳಿ ಡ್ರ್ಯಾಗನ್ ಫ್ಲೈ
ನವದೆಹಲಿಯ ರಾಷ್ಟ್ರಪತಿ ಭವನ ರೈಸಿನಾ ಹಿಲ್ಸ್ ಪ್ರದೇಶದ ಹೂದೋಟವೊಂದರಲ್ಲಿ ದೊಡ್ಡರೆಕ್ಕೆಯುಳ್ಳ ಡ್ರ್ಯಾಗನ್ ಫ್ಲೈ ಹುಳ. PTI Photo by Shirish Shete

ವಿಜಯ್ ಚೌಕ ಸ್ವಚ್ಛತಾ ಕಾರ್ಯ
ವಿಜಯ್ ಚೌಕ ಸ್ವಚ್ಛತಾ ಕಾರ್ಯ ಭರದಿಂದ ಸಾಗಿದ್ದು, ಮೋದಿ ಪದಗ್ರಹಣ ಸಮಾರಂಭಕ್ಕೆ ಸಿದ್ಧತೆ ಪೂರ್ಣಗೊಳಿಸಲಾಗುತ್ತಿದೆ.PTI Photo by Shirish Shete

ದೆಹಲಿಯ ಪ್ರಮುಖ ಸ್ಥಳಗಳಲ್ಲಿ ಭದ್ರತೆ
ದೆಹಲಿಯ ಪ್ರಮುಖ ಸ್ಥಳಗಳಾದ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ರೈಲ್ವೆ ಮತ್ತು ಬಸ್ ನಿಲ್ದಾಣ, ಇಂಡಿಯಾ ಗೇಟ್, ವಿಜಯ್ ಚೌಕ್, ಚಾಂದಿನಿ ಚೌಕ್, ರಾಯಭಾರಿ ಕಚೇರಿಗಳು, ಸಚಿವರ ನಿವಾಸ, ಗಣ್ಯರು ತಂಗುವ ಪಂಚತಾರಾ ಹೊಟೇಲ್‍ಗಳು ಸೇರಿದಂತೆ ಎಲ್ಲೆಡೆ ಹಿಂದೆಂದಿಗಿಂತಲೂ ಹೆಚ್ಚಿನ ಭದ್ರತೆ ಕೈಗೊಳ್ಳಲಾಗಿದೆ.
ಸಮಾರಂಭಕ್ಕೆ ಒಟ್ಟು ಮೂರು ಸಾವಿರಕ್ಕೂ ಹೆಚ್ಚು ಗಣ್ಯರು ಆಗಮಿಸುತ್ತಿರುವುದರಿಂದ ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವ ಸಂದರ್ಭಗಳಲ್ಲಿ ಒದಗಿಸುತ್ತಿದ್ದ ಭದ್ರತೆಗಿಂತ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.
ಇಂಡಿಯಾ ಗೇಟ್ ಬಳಿ ವಾಯುಸೇನೆ
ಇಂಡಿಯಾ ಗೇಟ್ ಬಳಿ ವಾಯುಸೇನೆ ಯೋಧರ ಕವಾಯತು. ರಾಷ್ಟ್ರಪತಿ ಭವನ ಸುತ್ತ ಎಲ್ಲೆಡೆ ಶ್ವಾನದಳ, ಬಾಂಬ್ ನಿಷ್ಕ್ರಿಯ ದಳ ಮತ್ತು ತುರ್ತು ಚಿಕಿತ್ಸೆ ಒದಗಿಸುವ ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸಲಾಗಿದ್ದು, ದೆಹಲಿಯನ್ನು ಅಕ್ಷರಶಃ ಸೇನಾಪಡೆ ಸುತ್ತುವರಿದುಕೊಂಡಿದೆ. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ.

ಅಮೃತಸರದಲ್ಲಿ ಮೋದಿ ಚಹಾಕಪ್
ಅಮೃತಸರದಲ್ಲಿ ಮೋದಿ ಚಹಾ ಕಪ್ ರಚಿಸಿ ಶುಭ ಕೋರಲಾಗಿದೆ.

ಸಂಪುಟದಲ್ಲಿ ಯಾರಿಗೆ ಸ್ಥಾನ ಸಿಗಲಿದೆ?
ರಾಜನಾಥ್ ಸಿಂಗ್, ಅರುಣ್ ಜೇಟ್ಲಿ, ನಿತಿನ್ ಗಡ್ಕರಿ, ಸುಷ್ಮಾ ಸ್ವರಾಜ್, ಅರುಣ್ ಶೌರಿ, ರಾಜೀವ್ ಪ್ರತಾಪ್ ರೂಢಿ, ಅನಂತಕುಮಾರ್, ಡಿವಿ ಸದಾನಂದ ಗೌಡ, ವೆಂಕಯ್ಯ ನಾಯ್ಡು, ರವಿಶಂಕರ್ ಪ್ರಸಾದ್ ಅವರಿಗೆ ಮೊದಲ ಹಂತದಲ್ಲಿ ಮೋದಿ ಜತೆಗೆ ಪ್ರಮಾಣ ವಚನ ಸ್ವೀಕರಿಸುವ ಭಾಗ್ಯ ಸಿಗುವುದು ಖಚಿತವಾಗಿದೆ.
ಉಳಿದಂತೆ ಮಿತ್ರಪಕ್ಷಗಳಾದ ಶಿವಸೇನೆ, ಟಿಡಿಪಿ, ಅಕಾಲಿದಳ, ಎಲ್ ಜೆಪಿ ಸಂಸದರಿಗೆ ಹಾಗೂ ವಾಜಪೇಯಿ ಅಧಿಕಾರ ಅವಧಿಯಲ್ಲಿ ಕಾರ್ಯ ನಿರ್ವಹಿಸಿದ ಸಂಸದರಿಗೆ ಸ್ಥಾನಗಳು ಸಿಗಲಿವೆ.
-
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ -
ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ -
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ: ನಿರ್ಮಾಣವಾಯ್ತು ಹೊಸ ಇತಿಹಾಸ -
Mona Lisa: ಮಹಾಕುಂಭ ಮೇಳದ ಫೇಮಸ್ ಮೊನಾಲಿಸಾ ಪತಿಗೆ ಕಾನೂನು ಸಂಕಷ್ಟ: ಫರ್ಮಾನ್ ಖಾನ್ ಮೇಲೆ ಪೋಕ್ಸೋ ಪ್ರಕರಣ -
2nd PUC: ಬೆಂಗಳೂರು - ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 260 ವಿದ್ಯಾರ್ಥಿಗಳಿಗೆ 35,000 ರೂ. -
RBI New Rule: ಇನ್ಮುಂದೆ ಆನ್ಲೈನ್ ವಹಿವಾಟಿನಲ್ಲಿ ದೊಡ್ಡ ಬದಲಾವಣೆ: 10,000 ರೂ. ಹಣ ವರ್ಗಾವಣೆಗೂ ಹೊಸ ನಿಯಮ -
Gold Rate April 10: ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಬೆಳವಣಿಗೆ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
ದ್ವಿತೀಯ PUC ರಿಪೀಟರ್ಸ್ ಗಮನಕ್ಕೆ: ತಾಂತ್ರಿಕ ದೋಷ ಸರಿಪಡಿಸಿ ಪರಿಷ್ಕೃತ ಫಲಿತಾಂಶ ಪ್ರಕಟಿಸಿದ ಮಂಡಳಿ -
ಸಾಮಾಜಿಕ ಜಾಲತಾಣದ ಕರೆಗೆ ಓಗೊಟ್ಟ ಹೆಚ್.ಡಿ.ಕುಮಾರಸ್ವಾಮಿ: ನಂಜನಗೂಡಿನ ಹುಲ್ಲಳ್ಳಿಯ ನೊಂದ ಕುಟುಂಬಕ್ಕೆ ಅಭಯ -
ಡಿವಿಜಿ ಒಡನಾಡಿ,ರಾಷ್ಟ್ರೋತ್ಥಾನದ ಮಾಜಿ ಅಧ್ಯಕ್ಷ ಎಸ್ಆರ್ ರಾಮಸ್ವಾಮಿ ನಿಧನ












Click it and Unblock the Notifications