ದೆಹಲಿ: ನಾನೇನು ರಾಜನಲ್ಲ, ನಿಮ್ಮ ಸೇವಕ: ಮೋದಿ
ವದೆಹಲಿ, ಸೆ.29: ಇಲ್ಲಿನ ದೆಹಲಿ ರೋಹಿಣಿ ಪ್ರದೇಶದ ಜಪಾನೀಸ್ ಪಾರ್ಕ್ ನಲ್ಲಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಭಾಷಣ ಕೇಳಿ ಜನರು ಪುಳಕಿತಗೊಂಡಿದ್ದಾರೆ. ಭಾನುವಾರ ದೆಹಲಿ ತುಂಬಾ ಬಿಜೆಪಿ ಬಾವುಟ ಹಾರಾಡುತ್ತಿದೆ. ವಿಕಾಸ ಮೆರವಣಿಗೆ ಹೆಸರಿನಲ್ಲಿ ನಡೆದಿರುವ ಈ ಸಮಾರಂಭದಲ್ಲಿ 4 ಲಕ್ಷ ಭಾಗವಹಿಸಿರುವ ನಿರೀಕ್ಷೆಯಿದೆ.
ಮೋದಿ ಭಾಷಣ: ದೆಹಲಿಯಲ್ಲಿ ಬಿಜೆಪಿಗೆ ವಿಜಯವೋ ವಿಜಯ. ಸದ್ಯಕ್ಕೆ ಇಲ್ಲಿರುವುದು ಅಮ್ಮ ಮಗ ಹಾಗೂ ಅಳಿಯನ ಸರ್ಕಾರ. ಮುಖ್ಯಾಂಶಗಳು ಸ್ಲೈಡ್ ನಲ್ಲಿದೆ
ನಿತಿನ್ ಗಡ್ಕರಿ: ನಾವು ಅಲ್ಪ ಸಂಖ್ಯಾತರ ವಿರೋಧಿಗಳಲ್ಲ, ಆದರೆ, ಭಯೋತ್ಪಾದಕರ ವಿರೋಧಿಗಳು.
* ಮನೆಗಳಲ್ಲಿರುವ ಚಿನ್ನವನ್ನು ಅಡವಿಡುವಂತೆ ಸರ್ಕಾರ ಹೇಳುವ ದುಃಸ್ಥಿತಿಗೆ ಯುಪಿಎ ನಮ್ಮನ್ನು ದೂಡಿದೆ.
* ನಾನ್ ಸೆನ್ಸ್ ಎಂದರೂ ಎಂಎಂ ಸಿಂಗ್ ಸುಮ್ಮನಿದ್ದಾರೆ ಎಂದರೆ ಅವರ ಅಸಹಾಯಕತೆ ಬಗ್ಗೆ ಊಹಿಸಿ
ಸುಮಾರು 35 ದೇಶಗಳ ದೂತರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ವಿಶೇಷ. ಸಮಾರಂಭದ ನೇರ ವೀಕ್ಷಣೆಗಾಗಿ 20 ಬೃಹತ್ ಎಲ್ ಇಡಿ ಪರದೆಗಳನ್ನು ಅಳವಡಿಸಲಾಗಿದೆ. 80X40 ಅಳತೆಯ ವೇದಿಕೆ ಆಕರ್ಷಕವಾಗಿದೆ.
ದೆಹಲಿಯಲ್ಲಿ ಶೀಲಾ ದೀಕ್ಷಿತ್ ಸರ್ಕಾರವನ್ನು ಕೆಳಗಿಳಿಸುವುದು ಬಿಜೆಪಿ ಉದ್ದೇಶವಾಗಿದ್ದು, ಮುಂಬರುವ ಅಸೆಂಬ್ಲಿ ಚುನಾವಣೆಗೆ ಈ ಸಮಾರಂಭ ಮುನ್ನುಡಿ ಬರೆಯಲಿದೆ. ದೆಹಲಿ ಜತೆಗೆ ಮಧ್ಯಪ್ರದೇಶ, ಛತ್ತೀಸ್ ಗಢ, ಮಿಜೋರಾಂ ಹಾಗೂ ರಾಜಸ್ಥಾನ ರಾಜ್ಯಗಳು ಅಸೆಂಬ್ಲಿ ಚುನಾವಣೆಗೆ ಸಜ್ಜಾಗುತ್ತಿವೆ.
ಮೋದಿ ಮೋಡಿ: ಕಳೆದ ಒಂದೂವರೆ ತಿಂಗಳಿನಿಂದ ಎಡಬಿಡದೆ ಹಲವು ಕಡೆ ಸಮಾರಂಭಗಳಲ್ಲಿ ಮೋದಿ ಪಾಲ್ಗೊಳ್ಳುತ್ತಿದ್ದಾರೆ. ಹೈದರಾಬಾದ್, ರೆವಾರಿ(ಹರ್ಯಾಣ), ಭೋಪಾಲ್, ತಿರುಚ್ಚಿ(ತಮಿಳುನಾಡು).. ದೆಹಲಿ ಸಮಾರಂಭದ ಮುಖ್ಯಾಂಶಗಳನ್ನು ಮುಂದೆ ಓದಿ...

ಸಿದ್ದು ಭರ್ಜರಿ ಭಾಷಣ ಥ್ರಿಲ್
ಬಿಜೆಪಿ ಮುಖಂಡ ನವಜ್ಯೋತ್ ಸಿಂಗ್ ಸಿದ್ದು ಭರ್ಜರಿ ಡೈಲಾಗ್ ಮೂಲಕ ಭಾಷಣ 12.15ರ ಸುಮಾರಿಗೆ ಭಾಷಣ ಮಾಡಿದರು.
* ಆಮ್ ಆದ್ಮಿ ಪಕ್ಷದ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಮೋದಿ ಒಬ್ಬರೇ ದೇಶಕ್ಕೆ ದಿಕ್ಕು
* ದೇಶದ ಜನರ ಪ್ರೀತಿ ಸಿಕ್ಕಿರುವುದರಿಂದ ಮೋದಿ ಅವರು ಶ್ರೀಮಂತರಾಗಿದ್ದಾರೆ. ಕಾಂಗ್ರೆಸ್ಸಿಗರು ಹಣದಿಂದ ಮಾತ್ರ ಶ್ರೀಮಂತರೆನಿಸಿದ್ದಾರೆ.
* ಭಾರತವನ್ನು Sone ki chidiya ಬದಲು ಎಂಎಂಎಸ್ ಅವರು Sonia ke Chidia ಮಾಡಿಬಿಟ್ಟಿದ್ದಾರೆ.
* ಮನಮೋಹನ್ ಸಿಂಗ್ ಅವರು ಸರ್‌ದಾರ್ (ಸಿಖ್) ಕೂಡಾ ಅಲ್ಲ, ಅಸರ್‌ದಾರ್ (ಪರಿಣಾಮಕಾರಿ) ಕೂಡ ಅಲ್ಲ

ಸ್ವರಾಜ್ಯದ ನಂತರ ಸುರಾಜ್ಯ ಅಗತ್ಯವಿದೆ
* ಆಡಳಿತದಲ್ಲಿ ಕಳಂಕಿತರೂ ಸೇರಿಕೊಂಡರೆ ವ್ಯವಸ್ಥೆಯೇ ಹಾಳಾಗುತ್ತದೆ.
* ನಾವು ಸ್ವರಾಜ್ಯವನ್ನು ಪಡೆದು ಹಲವು ವರ್ಷಗಳ ನಂತರ ಸುರಾಜ್ಯದ ಹುಡುಕಾಟದಲ್ಲಿದ್ದೇವೆ
* ಅತ್ಯಾಚಾರದ ಬಗ್ಗೆ ಅನುಕುಂಪವಿದೆ ಎನ್ನುವ ಸಿಎಂ ಶೀಲಾ ಅವರು ಹೆಣ್ಣು ಮಕ್ಕಳಿಗೆ ಸಂಜೆ ವೇಳೆಗೆ ಮನೆಗೆ ಮರಳುವಂತೆ ಸೂಚಿಸುತ್ತಾರೆ. ರಕ್ಷಣೆ ನೀಡಲು ಸಾಧ್ಯವಿಲ್ಲದ ಸರ್ಕಾರವಾಗಿದೆ.
* ದೆಹಲಿಯಲ್ಲಿ ಲಂಚವಿಲ್ಲದೆ ಏನು ನಡೆಯುವುದಿಲ್ಲ. ಕ್ರೀಡೆಯಲ್ಲಿ ಭ್ರಷ್ಟಾಚಾರ ತಂದಿದ್ದು ಇದೇ ಸರ್ಕಾರ. ಕ್ರೀಡಾ ಸ್ಪೂರ್ತಿಯನ್ನು ಕೊಂದಿದ್ದಲ್ಲದೆ, ವಿಶ್ವದ ಮುಂದೆ ತಲೆ ತಗ್ಗಿಸುವಂತೆ ಮಾಡಿಬಿಟ್ಟರು.

ನವಾಜ್ ಗೆ ಅವಾಜ್ ಹಾಕಲು ಸಿಂಗ್ ಗೆ ಸಾಧ್ಯವೇ?
ಪಾಕಿಸ್ತಾನದ ನವಾಜ್ ಷರೀಫ್ ಅವರು ನಮ್ಮ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ದೆಹಾದಿ ಮಹಿಳೆ ಎಂದು ಕರೆದು ಹೀಯಾಳಿಸಿದ್ದಾರೆ. ಇದಕ್ಕೆ ಉತ್ತರ ನೀಡಿದ ನಮ್ಮ ಪ್ರಧಾನಿ ಅಮೆರಿಕ ಅಧ್ಯಕ್ಷ ಒಬಾಮಾ ಬಳಿ ದುಃಖ ತೋಡಿಕೊಳ್ಳುತ್ತಿದ್ದಾರೆ.
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರೇ ಎಂಎಂ ಸಿಂಗ್ ಆಜ್ಞೆಯನ್ನು ನಾನ್ ಸೆನ್ಸ್ ಎಂದು ಅವರ ಪಗಡಿ ಕೆಳಕ್ಕೆ ಹಾಕಿದಂತೆ ಅಗೌರವ ತೋರಿಸಿದ್ದಾರೆ. ಇನ್ನೂ ಸಿಂಗ್ ಅವರು ನವಾಜ್ ಗೆ ಅವಾಜ್ ಹಾಕುವುದು ಹೇಗೆ ಸಾಧ್ಯ. ಸಿಂಗ್ ಅವರ ದನಿ ಎಂದೋ ಹೂತು ಹೋಗಿದೆ.
ಕನಸಿನ ತಂಡ ಬೇಕಿದೆ
ಕಳಂಕಿತರನ್ನು ಆಡಳಿತದಿಂದ ಹೊರ ಹಾಕಲು ಬಿಜೆಪಿ ಬದ್ಧವಾಗಿದೆ. ಕಾಂಗ್ರೆಸ್ ನಲ್ಲಿ ಈ ಬಗ್ಗೆ ಗೊಂದಲ ಮುಂದುವರೆದಿದೆ. 2014ರಲ್ಲಿ ಜನರಿಗೆ ಗೊಂದಲದ ತಂಡ ಬೇಕಿಲ್ಲ.
ಬಿಜೆಪಿಯನ್ನು ನಂಬಿ ನಾವು ಎಂದಿಗೂ ನಿಮ್ಮ ಕೈ ಬಿಡುವುದಿಲ್ಲ. ಕಾಂಗ್ರೆಸ್ ಮಿತ್ರಪಕ್ಷಗಳು ಕಿರೀಟಧಾರಿ ರಾಜನ ಆಡಳಿತದಲ್ಲಿರಬೇಕಾ ಅಥವಾ ಸಂವಿಧಾನಕ್ಕೆ ತಲೆಬಾಗುವ ಕಡೆ ಇರಬೇಕಾ ನಿರ್ಧರಿಸಲಿ

ಉದ್ಯೋಗ ನೀಡಿ
ಪ್ರತಿಬಾರಿ ರೈಲ್ವೆ ಬಜೆಟ್ ಮಂಡನೆಯಾದಾಗ ಮೊದಲಿಗೆ ಜನರ ಕಣ್ಣು ಹೊರಳುವುದು ದರ ಏರಿಕೆ ಬಗ್ಗೆ.. ಯುಪಿಎಯಲ್ಲಿ ದರ ಇಳಿಕೆ ಬಗ್ಗೆ ಮಾತೇ ಇಲ್ಲ ಬಿಡಿ. ಸೆನ್ಸೆಕ್ಸ್ ಏರಿತಾ ಇಳಿತಾ ಎಂದು ನೋಡುತ್ತೇವೆ.
ಸರ್ಕಾರಕ್ಕೆ ಲೆಕ್ಕಾಚಾರ ಹಾಕಿ ಗೊತ್ತೇ ವಿನಹ ಕನಸು ಕಂಡು ಗೊತ್ತಿಲ್ಲ. ದೇಶದ ಯುವಕರಿಗೆ ಈಗ ಉದ್ಯೋಗ ಬೇಕಿದೆ. ಅನುದಾನ, ಸುಮ್ಮನೆ ಕುಳಿತು ಪಡೆಯುವ ಪಿಂಚಣಿ ಮೊತ್ತವಲ್ಲ
| Array |
ಸಮಾರಂಭದ ಬಗ್ಗೆ ಟ್ವೀಟ್
ದೆಹಲಿಯಲ್ಲಿ ಮೋದಿ ಸಮಾರಂಭದ ಬಗ್ಗೆ ಮೋದಿ ಟ್ವೀಟ್ ಮಾಡಿದ್ದು ಹೀಗೆ
|
ಎಷ್ಟು ಜನ ವೀಕ್ಷಣೆ
ದೆಹಲಿ ಸಮಾರಂಭಕ್ಕೆ ಅಂದಾಜು 4-5 ಲಕ್ಷ ಆಗಮಿಸಿದ್ದರೆ, ಆನ್ ಲೈನಲ್ಲಿ ಲೈವ್ ಕವರೇಜ್ ವೀಕ್ಷಿಸಿದವರು 13 ಕೋಟಿ ಜನರಂತೆ

ದೆಹಲಿಯಲ್ಲಿ ಮೋದಿ ಸಮಾರಂಭ
ದೆಹಲಿಯಲ್ಲಿ ಮೋದಿ ಮೋಡಿ

ದೆಹಲಿಯಲ್ಲಿ ಮೋದಿ ಸಮಾರಂಭ
ದೆಹಲಿಯಲ್ಲಿ ಮೋದಿ ಮೋಡಿ

ದೆಹಲಿಯಲ್ಲಿ ಮೋದಿ ಸಮಾರಂಭ
ದೆಹಲಿಯಲ್ಲಿ ಮೋದಿ ಮೋಡಿ

ದೆಹಲಿಯಲ್ಲಿ ಮೋದಿ ಸಮಾರಂಭ
ದೆಹಲಿಯಲ್ಲಿ ಮೋದಿ ಮೋಡಿ












Click it and Unblock the Notifications