ಎಲ್‌ಪಿಜಿ ಪೋರ್ಟಬಲಿಟಿಯೂ ಸಾಧ್ಯ

ಎಲ್‌ಪಿಜಿ ಪೋರ್ಟಬಲಿಟಿ ಯೋಜನೆ ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ದೇಶದ 30 ನಗರಗಳಲ್ಲಿ ಪ್ರಾಯೋಗಿಕವಾಗಿ ಅ.5ರಿಂದ ಜಾರಿಗೆ ಬರಲಿದೆ. ನಿಮ್ಮ ಎಲ್‌ಪಿಜಿ ವಿತರಕರು ಸರಿಯಾದ ಸೇವೆ ನೀಡದಿದ್ದರೆ, ನೀವು ಬೇರೆ ಕಂಪನಿಗೆ ಬದಲಾವಣೆ ಹೊಂದಬಹುದು.
ಸೂಕ್ತ ಸಮಯಕ್ಕೆ ಅಡುಗೆ ಅನಿಲ ಪೂರೈಸುತ್ತಿಲ್ಲ, ಹೆಚ್ಚಿನ ದರ ವಸೂಲಿ ಮಾಡುತ್ತಾರೆ. ಸೂಕ್ತ ಸೇವೆ ನೀಡುವುದಿಲ್ಲ ಎಂಬ ಗ್ರಾಹಕರ ದೂರು ಬಗೆಹರಿಸಲು ಮುಂದಾಗಿರುವ ಕೇಂದ್ರ ಸರ್ಕಾರ 'ಎಲ್‌ಪಿಜಿ ಪೋರ್ಟಬಲಿಟಿ' ಯೋಜನೆ ಜಾರಿಗೆ ತರುತ್ತಿದೆ.
ಈ ಮೂಲಕ ಗ್ರಾಹಕರು ಇನ್ನು ಮುಂದೆ ಸೂಕ್ತ ಸೇವೆ ಒದಗಿಸದ ಡೀಲರ್ ಗಳನ್ನು ಅಥವಾ ಅನಿಲ ಕಂಪನಿಯನ್ನೇ ಬದಲಾಯಿಸಿ, ತಮಗೆ ಬೇಕಾದ ಡೀಲರ್ ಅಥವಾ ಕಂಪನಿಗಳಿಂದ ಸಿಲಿಂಡರ್ ಪಡೆಯಲು ಅವಕಾಶವಿದೆ.
ಪ್ರಾಯೋಗಿಕವಾಗಿ ಕರ್ನಾಟಕದ ಬೆಂಗಳೂರು ಮತ್ತು ಹುಬ್ಬಳ್ಳಿ ಸೇರಿದಂತೆ ದೇಶದ 30 ನಗರಗಳಲ್ಲಿ ಯೋಜನೆ ಜಾರಿಗೆ ಬರುತ್ತಿದೆ. ಯೋಜನೆಗೆ ಸಿಗುವ ಪ್ರತಿಕ್ರಿಯೆ ನಂತರ ದೇಶದ ಇತರ ನಗರಗಳಿಗೂ ಸೇವೆ ವಿಸ್ತರಣೆ ಮಾಡಲು ಪೆಟ್ರೋಲಿಯಂ ಇಲಾಖೆ ನಿರ್ಧರಿಸಿದೆ.
ಪೋರ್ಟಬಲಿಟಿ ಹೇಗೆ : ಈ ಯೋಜನೆ ಮೂಲಕ ವಿತರಕರು ಅಥವಾ ಕಂಪನಿ ಬದಲಾಯಿಸುವ ಗ್ರಾಹಕರು ನೇರವಾಗಿ ವಿತರಕರ ಬಳಿ ತೆರಳಿ ಈ ಕುರಿತು ಅರ್ಜಿ ನೀಡಬಹುದು. ಇಲ್ಲದೇ ಹೋದಲ್ಲಿ ಆನ್‌ಲೈನ್ ಮೂಲಕವೇ ಈ ಬೇಡಿಕೆ ಸಲ್ಲಿಸಬಹುದು.
ಆನ್‌ಲೈನ್‌ನಲ್ಲೂ ಡೀಲರ್ ಅಥವಾ ಕಂಪನಿ ಬದಲಿಸುವ ಆಯ್ಕೆಗಳನ್ನು ಒದಗಿಸಲಾಗುತ್ತದೆ. ಅಲ್ಲದೆ ಇಂತಹ ಬೇಡಿಕೆಗಳ ಕುರಿತು ಕಂಪನಿ ಅಥವಾ ಡೀಲರ್ ಗಳು ಯಾವ ಕ್ರಮ ಕೈಗೊಂಡಿದ್ದಾರೆ ಎಂದು ಆನ್‌ಲೈನ್ ಮೂಲಕವೇ ಮಾಹಿತಿ ಕಲೆ ಹಾಕಲು ಇಲಾಖೆ ನಿರ್ಧರಿಸಿದೆ.
ಗ್ರಾಹಕರು ಡೀಲರ್ ಅಥವ ಕಂಪನಿಯನ್ನು ಬದಲಾವಣೆ ಮಾಡಲು ಬಯಸಿ ಅರ್ಜಿ ಸಲ್ಲಿಸಿದರೆ, ಅದನ್ನು ತಿರಸ್ಕರಿಸುವಂತಿಲ್ಲ. ಈ ಕುರಿತ ಪ್ರತಿಯೊಂದು ಮಾಹಿತಿಯೂ ಇಲಾಖೆಗೆ ರವಾನೆಯಾಗುತ್ತಿರುತ್ತದೆ. ಹೆಚ್ಚಿನ ಮಾಹಿತಿಗಾರಿ ಪೆಟ್ರೋಲಿಯಂ ಇಲಾಖೆಯ ವೆಬ್ ಸೈಟ್ ಗೆ ಭೇಟಿ ನೀಡಬಹುದು.
-
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ












Click it and Unblock the Notifications