ಪಾಕಿಸ್ತಾನ ನೆಲದ ಮೇಲೆ ಕಣ್ಣಿಟ್ಟಿವೆ ಇಸ್ರೋ ಸ್ಯಾಟಲೈಟ್‌ಗಳು!
ನವದೆಹಲಿ, ಸೆಪ್ಟೆಂಬರ್ 10: ಹಲವು ದೇಶಗಳು ತಮ್ಮ ಸ್ಯಾಟಲೈಟ್‌ಗಳನ್ನು ನಭಕ್ಕೆ ಹಾರಿಸಿವೆ. ಸಂಪರ್ಕ ಮನರಂಜನೆ, ಹವಾಮಾನ ಮಾಹಿತಿ, ಜಿಪಿಎಸ್ ಇನ್ನೂ ಹಲವು ಉಪಯೋಗಗಳಿಗಾಗಿ ಸ್ಯಾಟಲೈಟ್‌ಗಳನ್ನು ಬಳಸಲಾಗುತ್ತದೆ.
Recommended Video
ಈ ಕಾರಣಗಳಿಗಾಗಿ ಮಾತ್ರವೇ ಅಲ್ಲದೆ, ಶತ್ರು ದೇಶಗಳ ಚಲನವಲನಗಳ ಮೇಲೆ ಕಣ್ಣಿಡಲೂ ಸಹ ಸ್ಯಾಟಲೈಟ್‌ಗಳನ್ನು ಬಳಸಲಾಗುತ್ತದೆ. ಆದರೆ ಅದನ್ನು ಬಹಿರಂಗಗೊಳಿಸುವುದಿಲ್ಲವಷ್ಟೆ. ಇದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ.
ಭಾರತದ ಸ್ಯಾಟಲೈಟ್‌ಗಳೂ ನೆರೆಯ ರಾಷ್ಟ್ರಗಳ ಚಲನವಲನಗಳ ಮೇಲೆ ಕಣ್ಣಿಟ್ಟಿದೆ ಎನ್ನಲಾಗುತ್ತಿದೆ. ಕಣ್ಣಿಟ್ಟಿದೆಯೋ ಇಲ್ಲವೋ ಖಚಿತವಾಗಿ ಹೇಳಲಾಗದಿದ್ದರೂ ನಮ್ಮ ಸ್ಯಾಟಲೈಟ್‌ಗಳಿಗೆ ಪಾಕಿಸ್ತಾನದ ಪೂರ್ಣ ಭೂಭಾಗದ ಮೇಲೆ ಕಣ್ಣಿಡುವಷ್ಟು ಶಕ್ತಿ ಇರುವುದು ಸತ್ಯ. ಭಾರತದ ನಭಕ್ಕೆ ಹಾರಿಸಿರುವ ಕಾರ್ಟೊಸ್ಯಾಟ್ ಮಾದರಿಯ ಸ್ಯಾಟಲೈಟ್‌ಗಳಿಗೆ ಈ ಶಕ್ತಿ ಇದೆ. ಸ್ಯಾಟಲೈಟ್‌ನ ಈ ಶಕ್ತಿಯನ್ನು ಭಾರತ ಸರ್ಕಾರ ಬಳಸಿಕೊಳ್ಳದೆ ಇರುತ್ತದೆಯೇ?

ಪಾಕ್ ಸೇನೆಯ ಸಣ್ಣ ಕದಲಿಕೆಯನ್ನೂ ಗುರುತಿಸಬಲ್ಲದು
ಪೂರ್ಣ ಭೂಬಾಗದ ಮೇಲೆ ಕಣ್ಣಿಡುವುದು ಮಾತ್ರವಲ್ಲ, ಪಾಕಿಸ್ತಾನದ 87% ಮ್ಯಾಪಿಂಗ್ ಸಹ ನಮ್ಮ ಸ್ಯಾಟಲೈಟ್‌ಗಳು ಮಾಡಬಹುದಾಗಿದೆ. ಪಾಕಿಸ್ತಾನದ ಸೇನಾ ಕದಲಿಕೆ ಸೇರಿದಂತೆ ಉಗ್ರರ ಅಡಗು ತಾಣಗಳು, ಉಗ್ರ ಗುಂಪುಗಳ ಚಲನ ವಲನ, ಭಾರಿ ವಾಹನಗಳ ಸಾಗಣೆಯನ್ನೂ ಸಹ ನಮ್ಮ ಸ್ಯಾಟಲೈಟ್‌ಗಳು ಸುಲಭವಾಗಿ ಗುರುತಿಸಿ ಮಾಹಿತಿ ನೀಡುವ ಶಕ್ತಿ ಹೊಂದಿವೆ.

ಪಾಕ್‌ನಲ್ಲಿ ಇಣುಕಿ ನೋಡಬಹುದಾಗಿದೆ ಎಂದಿದ್ದ ಸಚಿವರು
ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶ ಇಲಾಖೆಯ ರಾಜ್ಯ ಸಚಿವ ಆಗಿದ್ದ ಜಿತೇಂದ್ರ ಸಿಂಗ್ ಜನವರಿಯಲ್ಲಿ ಸುದ್ದಿಗೋಷ್ಠಿಯಲ್ಲೊಮ್ಮೆ ಹೇಳಿದ್ದರು, 'ನಾವು ಈಗ ಪಾಕಿಸ್ತಾನದ ಒಳಕ್ಕೆ ಇಣುಕಿ ನೋಡಬಹುದಾಗಿದೆ' ಎಂದು. ಅವರು ಅಂದು ತಮಾಷೆ ಏನೂ ಮಾಡಿರಲಿಲ್ಲ, ಸತ್ಯವನ್ನೇ ಹೇಳಿದ್ದರು.

ಭೂಮಿ ಮೇಲಿನ ವಸ್ತುಗಳ ಚಿತ್ರ ತೆಗೆಯಬಲ್ಲವು
ಇಸ್ರೋದ ಸ್ಯಾಟಲೈಟ್‌ಗಳು ಆಕಾಶದ ನಿರ್ವಾತದಿಂದ ಭೂಮಿಯ ಮೇಲಿನ ವಸ್ತುಗಳ ಹೈರೆಸಲ್ಯೂಶನ್ ಚಿತ್ರಗಳನ್ನು ತೆಗೆದು ರವಾನಿಸುವ ಶಕ್ತಿ ಸಾಮರ್ಥ್ಯಹೊಂದಿವೆ. ಭೂಮಿಗೆ 0.65 ಮೀಟರ್ ಹತ್ತಿರದಲ್ಲಿರುವ ವಸ್ತುವನ್ನೂ ಸಹ ಖರಾರುವಕ್ಕಾಗಿ ಚಿತ್ರ ತೆಗೆಯಬಲ್ಲದು ಇಸ್ರೊದ ಸ್ಯಾಟಲೈಟ್.

ಹದಿನಾಲ್ಕು ದೇಶಗಳ ಮೇಲೆ ಕಣ್ಣಿಡಬಲ್ಲವು
ಭಾರತದ ಸ್ಯಾಟಲೈಟ್‌ಗಳು ಪಾಕಿಸ್ತಾನ ಮಾತ್ರವಲ್ಲ ನೆರೆ ಹೊರೆಯ ಹದಿನಾಲ್ಕು ರಾಷ್ಟ್ರಗಳ ಮೇಲೆ ಕಣ್ಣಿಡುವ ಸಾಮರ್ಥ್ಯ ಹೊಂದಿವೆ. ಆದರೆ ಎಲ್ಲ ರಾಷ್ಟ್ರಗಳ ಬಗೆಗಿನ ಮಾಹಿತಿಯನ್ನು ಶೀಘ್ರವಾಗಿ ನೆಲಕ್ಕೆ ರವಾನಿಸಲು ಸಾಧ್ಯವಿಲ್ಲ, ಕೆಲವನ್ನು ತಡವಾಗಿ, ಕೆಲವು ರಾಷ್ಟ್ರಗಳ ಕೆಲವು ಭೂ ಭಾಗಗ ಬಗ್ಗೆ ಮಾತ್ರವೇ ಮಾಹಿತಿಯನ್ನು ಇಸ್ರೋದ ಸ್ಯಾಟಲೈಟ್‌ಗಳು ನೀಡುವ ಸಾಮರ್ಥ್ಯ ಹೊಂದಿವೆ.

ನಮ್ಮ ಮೇಲೂ ಇತರೆ ರಾಷ್ಟ್ರಗಳು ಕಣ್ಣಿಟ್ಟಿವೆ
ಇಷ್ಟೆ ಅಲ್ಲ ನಮ್ಮ ದೇಶದ ಮೇಲೂ ಕೆಲ ರಾಷ್ಟ್ರಗಳ ಸ್ಯಾಟಲೈಟ್‌ಗಳು ಕಣ್ಣಿಟ್ಟಿವೆ. ನಮ್ಮ ಸೇನಾ ವಲಯ, ದೊಡ್ಡ-ದೊಡ್ಡ ಪ್ರಾಜೆಕ್ಟ್‌ಗಳು ಹೀಗೆ ಹಲವು ವಿಷಯಗಳನ್ನು ಬೇರೆ ರಾಷ್ಟ್ರಗಳು ಸಹ ಗಮನಿಸುತ್ತಿವೆ.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications