ಅಂದದ ಸಖಿಯರಿರುವ ಗತಿಮಾನ್ ಎಕ್ಸ್ ಪ್ರೆಸ್ ರೈಲಿನ ಚೆಂದ

Posted By:
Subscribe to Oneindia Kannada

ನವದೆಹಲಿ, ಏಪ್ರಿಲ್ 05: ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ರೈಲು ಸಖಿಯರನ್ನು ಹೊಂದಿರುವ ಸೆಮಿ ಹೈ ಸ್ಪೀಡ್ ರೈಲು 'ಗತಿಮಾನ್ ಎಕ್ಸ್ ಪ್ರೆಸ್' ಗೆ ಮಂಗಳವಾರ ಚಾಲನೆ ಸಿಕ್ಕಿದೆ. ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಬೆಳಗ್ಗೆ ಹಸಿರು ನಿಶಾನೆ ತೋರಿಸಿದರು.

ದೆಹಲಿ- ಆಗ್ರಾ ನಡುವೆ 160 ಕಿ,ಮೀ ಪ್ರತಿ ಗಂಟೆ ವೇಗದಲ್ಲಿ ಸಂಚರಿಸುವ ಗತಿಮಾನ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಟಿವಿ ಸೇವೆ, ಅಪಾಯ ಸೂಚನೆ ವ್ಯವಸ್ಥೆ, ತುರ್ತು ಪರಿಸ್ಥಿತಿಯಲ್ಲಿ ಬ್ರೇಕಿಂಗ್ ವ್ಯವಸ್ಥೆ, ಜಿಪಿಎಸ್ ಆಧಾರಿತ ಪ್ರಯಾಣಿಕರ ಮಾಹಿತಿ ವ್ಯವಸ್ಥೆ,ಕೇಟರಿಂಗ್ ವ್ಯವಸ್ಥೆ ಸೇರಿದಂತೆ ಹಲವು ಸೌಲಭ್ಯ ಗಳು ಇರಲಿದೆ. [ಚುಕು ಬುಕು ಸಖಿ, ರೈಲು ಸಖಿ, ಆಹಾ! ಎಷ್ಟೊಂದು ಹೆಸರು]

ಒಂದು ತಾಸಿಗೆ 160 ಕಿ.ಮೀ. ಓಡುವ 5,4000 ಎಚ್ ಪಿ ಇಂಜಿನ್ ವಾಹನದಲ್ಲಿ 12 ಕೋಚುಗಳಿರುತ್ತದೆ. ಶತಾಬ್ದಿ ಏಕ್ಸ್ ಪ್ರೆಸ್ 200 ಕಿಲೋ ಮೀಟರ್ ಅಂತರವನ್ನು 120 ನಿಮಿಷಗಳಲ್ಲಿ ಕ್ರಮಿಸಿದರೆ, ಗತಿಮಾನ್ ಎಕ್ಸ್ ಪ್ರೆಸ್ 105 ನಿಮಿಷಗಳಲ್ಲಿ ಕ್ರಮಿಸುವ ಸಾಧ್ಯತೆಯಿದೆ.

Nizamuddin-Agra Gatimaan Express flagged off

ಪ್ರಯಾಣದರ ಶತಾಬ್ದಿ ಎಕ್ಸ್‌ಪ್ರೆಸ್ ದರಕ್ಕಿಂತ ಶೇ.25ರಷ್ಟು ಹೆಚ್ಚಿರುತ್ತದೆ. ಪೂರ್ತಿ ಎಸಿ ಚೇರ್ ಕ್ಲಾಸ್ ಗತಿಮಾನ್ ಎಕ್ಸ್ ಪ್ರೆಸ್ ಪ್ರಯಾಣ ದರ 690ರು ಆಗಲಿದೆ. ಎಕ್ಸಿಕ್ಯೂಟಿವ್ ಕ್ಲಾಸ್ ನಲಿ ಪ್ರಯಾಣಿಸಲು 1,365 ರು ತೆರಬೇಕಾಗುತ್ತದೆ. ದೆಹಲಿ-ಅಗ್ರಾ ಶತಾಬ್ದಿ ಎಕ್ಸ್ ಪ್ರೆಸ್ ಚೇರ್ ಕ್ಲಾಸ್ ಬೆಲೆ 540 ರು ಇದ್ದರೆ, ಎಕ್ಸಿ ಕ್ಯೂಟಿವ್ ಕ್ಲಾಸ್ ದರ 1,040 ರು ಮಾತ್ರ ಇದೆ.[ಟಿಕೆಟ್ ಕ್ಯಾನ್ಸಲ್ ಮಾಡಲು 139ಕ್ಕೆ ಡಯಲ್ ಮಾಡಿ]

ಗೋ ಉಪ್ಪಿಟ್ಟು (ಉಪ್ಮಾ) ಮಿನಿದೋಸೆ, ಕಾಂಜಿವರಂ ಇಡ್ಲಿ, ಹೆಚ್ಚಿದ (ತಾಜಾ) ಹಣ್ಣುಗಳು, ಆಲೂಕುಲ್ಟ, ಡ್ರೈಫ್ರೂಟ್, ಚಿಕನ್ ರೋಲ್, ಸ್ಯಾನಿಷ್ ಎಗ್ ವೈಟ್ ಆಮ್ಲೆಟ್ ಸೇರಿದಂತೆ ಇನ್ನೂ ಹಲವು ದೇಶೀ, ವಿದೇಶಿ ಆಹಾರ ಲಭ್ಯವಿರುತ್ತದೆ.[ರೈಲ್ವೆ ಬಜೆಟ್ 2016-17 : ಕರ್ನಾಟಕಕ್ಕೆ ಸಿಕ್ಕಿದ್ದೇನು?]

ರೈಲು ಸಖಿಯರಿರುವ ಗತಿಮಾನ್ ಎಕ್ಸ್ ಪ್ರೆಸ್ ನೋಡಿ

ರೈಲು ಸಖಿಯರಿರುವ ಗತಿಮಾನ್ ಎಕ್ಸ್ ಪ್ರೆಸ್ ನೋಡಿ

-
ರೈಲು ಸಖಿಯರಿರುವ ಗತಿಮಾನ್ ಎಕ್ಸ್ ಪ್ರೆಸ್ ನೋಡಿ

ರೈಲು ಸಖಿಯರಿರುವ ಗತಿಮಾನ್ ಎಕ್ಸ್ ಪ್ರೆಸ್ ನೋಡಿ

ರೈಲು ಸಖಿಯರಿರುವ ಗತಿಮಾನ್ ಎಕ್ಸ್ ಪ್ರೆಸ್ ನೋಡಿ
-
-
-
-
-
-
-
-
-
-
-
-

9 ರೈಲು ಮಾರ್ಗಗಳಲ್ಲಿ ರೈಲು ಸಖಿ ಸೌಲಭ್ಯ ಕಾನ್ಪುರ-ದೆಹಲಿ, ಚಂಡೀಗಢ-ದೆಹಲಿ, ಹೈದರಾಬಾದ್-ಚೆನ್ನೈ, ನಾಗಪುರ್-ಬಿಲಾಸ್‌ಪುರ್, ಗೋವಾ-ಮುಂಬೈ, ನಾಗಪುರ ಸಿಕಂದರಾಬಾದ್ ಮಾರ್ಗಗಳಲ್ಲಿ ಇನ್ನೂ 9 ಇಂಥ ರೈಲುಗಳನ್ನು ಓಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ.[ರೈಲ್ವೆ ಟಿಕೆಟ್ ಬುಕ್ಕಿಂಗ್ ಸುಲಭಗೊಳಿಸಿದ ಎಂರುಪೀ]


ಗತಿಮಾನ್ ಎಕ್ಸ್ ಪ್ರೆಸ್ ಉದ್ಘಾಟನಾ ಸಮಾರಂಭದ ವಿಡಿಯೋ ಇಲ್ಲಿದೆ ನೋಡಿ, ಸುದ್ದಿ ಕೇಳಿಸಿಕೊಳ್ಳಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Heralding a new era of semi-high speed trains in the country, Railway Minister Suresh Prabhu on Tuesday (April 5) flagged off India's fastest train, the Gatimaan Express, which will cover the 200 km distance between Delhi and Agra in 100 minutes
Please Wait while comments are loading...