600 ಕೋಟಿ ಒಡೆಯ, ನೂರು ಕೋಟಿ ಖರ್ಚು ಮಾಡಿ ಸನ್ಯಾಸಿಯಾದ!
ನವದೆಹಲಿ, ಜೂ. 03 : ಎಲ್ಲಾ ಬಂಧನವನ್ನು ಕಳಚಿಕೊಂಡು ಸನ್ಯಾಸಿಯಾಗಲು ಹೊರಟ ವ್ಯಕ್ತಿ ಅದಕ್ಕಾಗಿ ಖರ್ಚು ಮಾಡಿದ ಹಣವೆಷ್ಟು ಗೊತ್ತೆ? 100 ಕೋಟಿ. ದೆಹಲಿಯ ಪ್ಲಾಸ್ಟಿಕ್ ಕಿಂಗ್ ಎಂದು ಖ್ಯಾತಿ ಪಡೆದಿರುವ ಭನ್ವರ್‌ಲಾಲ್ ರಘುನಾಥ್ ದೋಶಿ ಲಕ್ಷಾಂತರ ಜನರ ಸಮ್ಮುಖದಲ್ಲಿ ಜೈನ ದೀಕ್ಷೆ ಪಡೆದಿದ್ದಾರೆ.
600 ಕೋಟಿ ರೂ.ಗಳ ಒಡೆಯ ರಘುನಾಥ ದೋಶಿ ಜೈನ ಧರ್ಮದತ್ತ ಆಕರ್ಷಿತರಾಗಿ, ಭಾನುವಾರ ಸನ್ಯಾಸ ದೀಕ್ಷೆ ಸ್ವೀಕರಿಸಿದ್ದಾರೆ. ಅಹಮದಾಬಾದ್‌ನಲ್ಲಿ ನಡೆದ ದೀಕ್ಷೆ ಕಾರ್ಯಕ್ರಮಕ್ಕೆ ಅವರು 100 ಕೋಟಿ ರೂ.ಹಣವನ್ನು ಖರ್ಚು ಮಾಡಿದ್ದಾರೆ.
ಸುಮಾರು ಒಂದೂವರೆ ಲಕ್ಷ ಜನರ ಸಮ್ಮುಖದಲ್ಲಿ ರಘುನಾಥ ದೋಶಿ ಅವರು ಜೈನ ಆಚಾರ್ಯ ಶ್ರೀ ಗೌತಮ ಸುರೀಶ್ವರಜೀ ಮಹಾರಾಜ್ ಅವರ 104ನೇ ಶಿಷ್ಯರಾಗಿ ದೀಕ್ಷೆ ಸ್ವೀಕರಿಸಿದ್ದಾರೆ. ಹಡಗಿನ ಆಕಾರದಲ್ಲಿ ನಿರ್ಮಿಸಿದ್ದ ಭವ್ಯ ವೇದಿಕೆಯಲ್ಲಿ ಸಕಲ ಸಂಪತ್ತನ್ನು ತ್ಯಜಿಸಿ ಸನ್ಯಾಸ ದೀಕ್ಷೆ ಸ್ವೀಕರಿಸಿದ್ದಾರೆ.
ತಮ್ಮ ಉದ್ಯಮದ ನಡುವೆಯೂ 1982ರಿಂದಲೇ ಜೈನ ಪ್ರವಚನಗಳಿಗೆ ಹಾಜರಾಗುತ್ತಿದ್ದ ದೋಶಿ ಅವರು, ಸನ್ಯಾಸಿಯಾಗಲು ಹಂಬಲಿಸಿದ್ದರು. ಆದರೆ, ಅವರ ಪತ್ನಿ ಮತ್ತು ಮೂವರು ಮಕ್ಕಳು ಇದನ್ನು ವಿರೋಧಿಸಿದ್ದರು. ಎಲ್ಲರ ಮನವೊಲಿಸಿ ಕೊನೆಗೂ ಸನ್ಯಾಸಿಯಾಗಿದ್ದಾರೆ. ಸನ್ಯಾಸ ಸ್ವೀಕರಿಸಿದ ಚಿತ್ರಗಳು ಇಲ್ಲಿವೆ....

ಸನ್ಯಾಸ ದೀಕ್ಷೆ ಸ್ವೀಕರಿಸಿದ ಭನ್ವರ್‌ಲಾಲ್ ರಘುನಾಥ್ ದೋಶಿ
ಭಾನುವಾರ ಅಹಮದಾಬಾದ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭನ್ವರ್‌ಲಾಲ್ ರಘುನಾಥ್ ದೋಶಿ ಅವರು ಜೈನ ಆಚಾರ್ಯ ಶ್ರೀ ಗೌತಮ ಸುರೀಶ್ವರಜೀ ಮಹಾರಾಜ್ ಅವರ 104ನೇ ಶಿಷ್ಯರಾಗಿ ದೀಕ್ಷೆ ಸ್ವೀಕರಿಸಿದ್ದಾರೆ. ಹಡಗಿನ ಆಕಾರದಲ್ಲಿ ನಿರ್ಮಿಸಿದ್ದ ಭವ್ಯ ವೇದಿಕೆಯಲ್ಲಿ ಸಕಲ ಸಂಪತ್ತನ್ನು ತ್ಯಜಿಸಿ ಸನ್ಯಾಸಿಯಾಗಿದ್ದಾರೆ.

ಭನ್ವರ್‌ಲಾಲ್ ರಘುನಾಥ್ ದೋಶಿ ಯಾರು?
ದೆಹಲಿಯ 'ಪ್ಲಾಸ್ಟಿಕ್ ಕಿಂಗ್' ಎಂದು ಖ್ಯಾತಿ ಪಡೆದಿರುವ ಭನ್ವರ್‌ಲಾಲ್ ಪಾಸ್ಟಿಕ್ ಉದ್ಯಮದಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. ಅವರದ್ದು ಸುಮಾರು 600 ಕೋಟಿ ರೂ. ವ್ಯವಹಾರ. ಸದ್ಯ ಆಸ್ತಿ, ಹಣ, ಮನೆ, ಬಂಗಲೆ, ಕುಟುಂಬವನ್ನು ತೆರೆದು ಸನ್ಯಾಸಿಯಾಗಿ ದೀಕ್ಷೆ ಸ್ವೀಕರಿಸಿದ್ದಾರೆ.

ದೀಕ್ಷೆ ಸಮಾರಂಭಕ್ಕೆ 100 ಕೋಟಿ ಖರ್ಚು
ಭನ್ವರ್‌ಲಾಲ್ ರಘುನಾಥ್ ದೋಶಿ ಭಾನುವಾರ ಅಹಮದಾಬಾದ್‌ನಲ್ಲಿ ದೀಕ್ಷೆ ಸ್ವೀಕರಿಸಲು 100ಕೋಟಿ ರೂ. ಖರ್ಚು ಮಾಡಿದ್ದಾರೆ. ಹಡಗಿನ ಆಕಾರದ ವೈಭೋವೋಪೇತ ವೇದಿಕೆಯಲ್ಲಿ ಸುಮಾರು ಒಂದೂವರೆ ಲಕ್ಷ ಜನರ ಸಮ್ಮುಖದಲ್ಲಿ ದೋಶಿ ಸನ್ಯಾಸಿಯಾಗಿದ್ದಾರೆ.

7 ಕಿ.ಮೀ.ನಡೆಯಿತು ಮೆರವಣಿಗೆ
ಸನ್ಯಾಸ ದೀಕ್ಷೆ ಸಮಾರಂಭಕ್ಕೆ 1000 ಜೈನ ಸನ್ಯಾಸಿಗಳು, 12 ರಥಗಳು, 9 ಆನೆ, 9 ಒಂಟೆ ಗಾಡಿಗಳು ಮತ್ತು ಸಾಂಪ್ರದಾಯಿಕ ಸಂಗೀತಗಾರರೊಂದಿಗೆ 7 ಕಿ.ಮೀ. ಮೆರವಣಿಗೆಯನ್ನು ದೋಶಿ ನಡೆಸಿದರು. ಗುಜರಾತ್‌ನ ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಸೇರಿದಂತೆ ಹಲವು ಗಣ್ಯರು ಸನ್ಯಾಸ ದೀಕ್ಷೆ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು.

ಎಲ್ಲರ ಮನವೊಲಿಸಿದ ದೋಶಿ
ತಮ್ಮ ಪ್ಲಾಸ್ಟಿಕ್ ಉದ್ಯಮದ ನಡುವೆಯೇ 1982ರಿಂದಲೇ ಜೈನ ಪ್ರವಚನಗಳಿಗೆ ಹಾಜರಾಗುತ್ತಿದ್ದ ದೋಶಿ ಅವರು, ಸನ್ಯಾಸಿಯಾಗಲು ಹಂಬಲಿಸಿದ್ದರು. ಆದರೆ, ಅವರ ಪತ್ನಿ ಮತ್ತು ಮೂವರು ಮಕ್ಕಳು ಇದನ್ನು ವಿರೋಧಿಸಿದ್ದರು. ಎಲ್ಲರ ಮನವೊಲಿಸಿ ಕೊನೆಗೂ ಸನ್ಯಾಸಿಯಾಗಿದ್ದಾರೆ.
-
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Asha Bhosle: ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ, ಸಂಗೀತ ರಾಣಿ ಎಂದೇ ಖ್ಯಾತಿ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Vijay: ನಟ, ರಾಜಕಾರಣಿ ವಿಜಯ್ ಮಹತ್ವದ ಟ್ವೀಟ್ - ಅಪ್ರಬುದ್ಧ ರಾಜಕಾರಣಿ ಎಂದ ಡಿ.ಕೆ ಶಿವಕುಮಾರ್ Tamil Nadu Assembly Election -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್












Click it and Unblock the Notifications