ಎಎಪಿಗೆ ಮುಖಭಂಗ: ಕುಮಾರ್ ವಿಶ್ವಾಸ್ ದಂಪತಿ ವಿರುದ್ಧ ಎಫ್ ಐಆರ್
ನವದೆಹಲಿ, ಜೂ.25: ಆಮ್ ಆದ್ಮಿ ಪಕ್ಷ ಬಜೆಟ್ ಮಂಡನೆ ಬಗ್ಗೆ ತಲೆ ಕೆಡಿಸಿಕೊಳ್ಳುವ ವೇಳೆಗೆ ಎಎಪಿ ಮುಖಂಡರ ಮೇಲೆ ಮೊಕದ್ದಮೆಗಳು ದಾಖಲಾಗಿ ತಲೆ ನೋವು ತಂದಿದೆ. ತೋಮಾರ್ ಪ್ರಕರಣದ ನಂತರ ಕುಮಾರ್ ವಿಶ್ವಾಸ್ ದಂಪತಿ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ನೋಯ್ಡಾ ಸೆಕ್ಟರ್ 20ರಲ್ಲಿ ವ್ಯಕ್ತಿಯೊಬ್ಬನಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಕುಮಾರ್ ವಿಶ್ವಾಸ್ ಹಾಗೂ ಅವರ ಪತ್ನಿ ವಿರುದ್ಧ ಪೊಲೀಸರು ಗುರುವಾರ ಎಫ್ ಐಆರ್ ಹಾಕಿದ್ದಾರೆ. ಜಗತ್ ಅವಾನಾ ಎಂಬ ವ್ಯಕ್ತಿ ಕುಮಾರ್ ವಿಶ್ವಾಸ್ ದಂಪತಿ ವಿರುದ್ಧ ದೂರು ನೀಡಿದ್ದರು. ಐಪಿಸಿ ಸೆಕ್ಷನ್ 507 ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಆದರೆ, ಕುಮಾರ್ ವಿಶ್ವಾಸ್ ಜೊತೆ ಅನೈತಿಕ ಸಂಬಂಧ ಹೊಂದಿರುವುದಾಗಿ ಈ ಹಿಂದೆ ಆರೋಪಿಸಿದ್ದ ಯುವತಿ ಹಾಗೂ ಜಗತ್ ಅವಾನಾ ಇಬ್ಬರು ಸ್ನೇಹಿತರಾಗಿದ್ದಾರೆ. ಇವರಿಬ್ಬರು ಸೇರಿಕೊಂಡು ಕುಮಾರ್ ವಿಶ್ವಾಸ್ ಅವರ ಮುಖಕ್ಕೆ ಕಪ್ಪು ಮಸಿ ಬಳಿಯಲು ಯತ್ನಿಸುತ್ತಿದ್ದಾರೆ ಎಂದು ಎಎಪಿ ಪ್ರತಿಕ್ರಿಯಿಸಿದೆ. [ಅಕ್ರಮ ಸಂಬಂಧ ಆರೋಪ, ಕುಮಾರ್ ವಿಶ್ವಾಸ್‌ಗೆ ನೋಟಿಸ್]
ಇದು ಕಾಂಗ್ರೆಸ್ ಪಕ್ಷದ ಕುತಂತ್ರ, ನಾನು ಯಾವ ವ್ಯಕ್ತಿಗೂ ಬೆದರಿಕೆ ಒಡ್ಡಿಲ್ಲ. ನನ್ನ ಪತ್ನಿ ಹೆಸರು ಏಕೆ ಈ ಪ್ರಕರಣದಲ್ಲಿ ದಾಖಲಿಸಲಾಗಿದೆ ಗೊತ್ತಿಲ್ಲ ಎಂದು ಎಂದು ಕುಮಾರ್ ವಿಶ್ವಾಸ್ ಪ್ರತಿಕ್ರಿಯಿಸಿದ್ದಾರೆ. (ಒನ್ ಇಂಡಿಯಾ ಸುದ್ದಿ)












Click it and Unblock the Notifications