• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮದ್ಯಕ್ಕಾಗಿ ಅಲ್ಲ ಕುಡಿಯುವ ನೀರಿಗಾಗಿ ಇಷ್ಟು ದೊಡ್ಡ ಕ್ಯೂ

|

ನವದೆಹಲಿ, ಮೇ 6: ಕಳೆದ ಎರಡು ದಿನಗಳಿಂದ ಮದ್ಯದಂಗಡಿಗಳ ಮುಂದೆ ಜನರು ಸಾಲುಗಟ್ಟಿ ನಿಂತಿರುವ ದೃಶ್ಯಗಳನ್ನು ನೀವು ನೋಡಿರುತ್ತೀರಿ. ಒಂದು ಕಡೆ ಮದ್ಯಕ್ಕೆ ಕ್ಯೂ ನಿಂತಿರುವ ಜನರಾದರೆ, ಮತ್ತೊಂದು ಕಡೆ ಕುಡಿಯುವ ನೀರಿಗೆ ಜನರು ದೊಡ್ಡ ಸಾಲು ಮಾಡಿದ್ದಾರೆ.

ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

ದೆಹಲಿಯ ಅನೇಕ ಭಾಗಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿದೆ. ಟ್ಯಾಂಕರ್‌ ಮೂಲಕ ಜನರಿಗೆ ಕುಡಿಯುವ ನೀರನ್ನು ಒದಗಿಸಲಾಗುತ್ತಿದೆ. ದೆಹಲಿಯ ಚಿಲ್ಲಾ ವಿಲೇಜ್ ಬಳಿ ಜನರು ಕುಡಿಯುವ ನೀರು ಪಡೆದುಕೊಳ್ಳಲು ದೊಡ್ಡ ಕ್ಯೂ ಮಾಡಿದ್ದಾರೆ. ಒಬ್ಬರ ನಂತರ ಒಬ್ಬರು ನೀರು ತುಂಬಿಸಿಕೊಳ್ಳುತ್ತಿದ್ದಾರೆ.

2 ದಿನ ಕಳೆದರೂ ಕಡಿಮೆಯಾಗಲಿಲ್ಲ ಮದ್ಯದಂಗಡಿ ಮುಂದಿನ ಕ್ಯೂ

ಗಂಡಸರು ಹಾಗೂ ಹೆಂಗಸರು ಪ್ರತ್ಯೇಕ ಸಾಲು ಮಾಡಿದ್ದಾರೆ. ಮನೆಯಲ್ಲಿ ಇರುವ ಕೊಡ, ಡಬ್ಬ, ಪಾತ್ರೆಗಳ ಮೂಲಕ ಜನರು ನೀರು ತೆಗೆದುಕೊಂಡು ಹೋಗುತ್ತಿದ್ದಾರೆ. ಅನೇಕರ ಮನೆಗಳಲ್ಲಿ ದಿನ ಬಳಕೆಗೂ ನೀರಿಲ್ಲದಂತೆ ಆಗಿದೆ.

ಚೀನಾ ಗಡಿಯಲ್ಲಿರುವ ಭಾರತದ 'ಟಿಬೆಟ್' ಸೇನೆ ಬಗ್ಗೆ ನಿಮಗೆಷ್ಟು ಗೊತ್ತು?

ನೀರು ತೆಗೆದುಕೊಳ್ಳಲು ಬರುವ ವೇಳೆ ಕೊರೊನಾ ವೈರಸ್‌ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಜನ ಮಾಸ್ಕ್‌ ಧರಿಸಿದ್ದಾರೆ. ರಸ್ತೆಯ ಮೇಲೆ ವೃತ್ತ ಹಾಕಿದ್ದು, ಅದರ ಮೇಲೆ ನಿಂತಿದ್ದಾರೆ. ಈ ರೀತಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗುತ್ತಿದೆ.

ದೆಹಲಿಯಲ್ಲಿ ಸೋಂಕಿತರ ಸಂಖ್ಯೆ 5104ಕ್ಕೆ ಏರಿಕೆಯಾಗಿದೆ. 64 ಮಂದಿ ಮರಣ ಹೊಂದಿದ್ದಾರೆ. 1468 ಜನರು ಕೊರೊನಾ ವಿರುದ್ಧ ಹೋರಾಟ ನಡೆಸಿ ಗೆದ್ದಿದ್ದಾರೆ.

English summary
Delhi People line up to collect drinking water from Delhi Jal Board (DJB) trucks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X