ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶುಲ್ಕ ಹೆಚ್ಚಿಸುವಂತಿಲ್ಲ: ಖಾಸಗಿ ಶಾಲೆಗಳಿಗೆ ದೆಹಲಿ ಸರ್ಕಾರ ಎಚ್ಚರಿಕೆ

|
Google Oneindia Kannada News

ನವದೆಹಲಿ, ಏಪ್ರಿಲ್ 17: ಖಾಸಗಿ ಶಾಲೆಗಳು ಶಾಲಾ ಶುಲ್ಕವನ್ನು ಹೆಚ್ಚು ಮಾಡುವ ಹಾಗಿಲ್ಲ ಎಂದು ದೆಹಲಿ ಸರ್ಕಾರ ಆದೇಶ ನೀಡಿದೆ. ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಇಂದು ಖಾಸಗಿ ಶಾಲೆಗಳಿಗೆ ಸರ್ಕಾರ ನಿಮಯವನ್ನು ತಿಳಿಸಿದ್ದಾರೆ.

ಕೊರೊನಾ ವೈರಸ್‌, ಲಾಕ್‌ಡೌನ್ ಇವುಗಳ ಕಾರಣವನ್ನು ಹೇಳಿ ಅನೇಕ ಖಾಸಗಿ ಶಾಲೆಗಳು ಪೋಷಕರಿಂದ ಹೆಚ್ಚು ಹಣ ಪಡೆಯುವ ಪ್ರಯತ್ನಗಳು ಮಾಡುತ್ತಿವೆ. ಇದನ್ನು ಪೋಷಕರು ಸರ್ಕಾರ ಗಮನಕ್ಕೆ ತಂದಿದ್ದಾರೆ. ಹೀಗಾಗಿ ಈ ವಿಷಯದಲ್ಲಿ ದೆಹಲಿ ಸರ್ಕಾರ ಕಠಿಣ ಕ್ರಮ ತೆಗೆದುಕೊಂಡಿದೆ.

ಆಗಸ್ಟ್ 1ಕ್ಕೆ ಶಾಲೆಗಳು ಆರಂಭ?: ಸ್ಪಷ್ಟನೆ ನೀಡಿದ ಶಿಕ್ಷಣ ಸಚಿವಆಗಸ್ಟ್ 1ಕ್ಕೆ ಶಾಲೆಗಳು ಆರಂಭ?: ಸ್ಪಷ್ಟನೆ ನೀಡಿದ ಶಿಕ್ಷಣ ಸಚಿವ

ಡಿಸಾಸ್ಟರ್ ಮ್ಯಾನೆಜ್‌ಮೆಂಟ್ ಆಕ್ಟ್ ಅಡಿಯಲ್ಲಿ ದೆಹಲಿ ಸರ್ಕಾರ ಕೆಲವು ನಿಯಮಗಳನ್ನು ಖಾಸಗಿ ಶಾಲೆಗಳಿಗೆ ವಿಧಿಸಿದೆ. ಸರ್ಕಾರದ ಅನುಮತಿ ಇಲ್ಲದೆ ಯಾವುದೇ ಖಾಸಗಿ ಶಾಲೆ, ಶುಲ್ಕ ಹೆಚ್ಚು ಮಾಡುವ ಹಾಗಿಲ್ಲ ಎಂದು ತಿಳಿಸಿದೆ. ದೆಹಲಿ ಸರ್ಕಾರ ನೀಡಿರುವ ಆದೇಶದ ಪ್ರಮುಕಾಂಶಗಳು ಹೀಗಿವೆ.

ಭೋದನೆ ಶುಲ್ಕವನ್ನು ಮಾತ್ರ ಪಡೆಯಬೇಕು

ಭೋದನೆ ಶುಲ್ಕವನ್ನು ಮಾತ್ರ ಪಡೆಯಬೇಕು

ಖಾಸಗಿ ಶಾಲೆಗಳು ಒಂದಲ್ಲ ಒಂದು ಕಾರಣ ಹೇಳಿ ಪೋಷಕರಿಂದ ಹಣ ಪಡೆಯುತ್ತಾರೆ ಎನ್ನುವ ದೂರು ಹಿಂದೆಯಿಂದಲೂ ಇದೆ. ಈಗಲೂ ಕೊರೊನಾ ಹಾಗೂ ಲಾಕ್‌ಡೌನ್ ಕಾರಣ ಹೇಳಿ ಹೆಚ್ಚಿನ ಖಾಸಗಿ ಶಾಲೆಗಳು ಹೆಚ್ಚು ಹಣ ತೆಗೆದುಕೊಳ್ಳಲು ಮುಂದಾಗಿದ್ದರು. ಆದರೆ, ದೆಹಲಿ ಸರ್ಕಾರ ಬೋಧನೆ ಶುಲ್ಕ ಬಿಟ್ಟು ಯಾವುದೇ ರೀತಿ ಶುಲ್ಕವನ್ನು ಪಡೆಯಬಾರದು ಎಂದಿದೆ. ಭೋದನೆ ಶುಲ್ಕವೂ ತಿಂಗಳಿನ ಆಧಾರದ ಮೇಲೆ ಪಡೆಯಬೇಕು ಎಂದು ತಿಳಿಸಿದೆ.

ವಾಹನ ಶುಲ್ಕ, ವಾರ್ಷಿಕ ಶುಲ್ಕ ಪಡೆಯಬಾರದು

ವಾಹನ ಶುಲ್ಕ, ವಾರ್ಷಿಕ ಶುಲ್ಕ ಪಡೆಯಬಾರದು

ಖಾಸಗಿ ಶಾಲೆಗಳಲ್ಲಿ ಭೋದನೆ ಶುಲ್ಕದ ಜೊತೆಗೆ ವಾಹನ ಶುಲ್ಕ, ಡಿಪಾರ್ಮೆಂಟ್ ಶುಲ್ಕ, ವಾರ್ಷಿಕ ಶುಲ್ಕ ಹೀಗೆ ಅನೇಕ ಶುಲ್ಕಗಳನ್ನು ಪಡೆಯುತ್ತಾರೆ. ಆದರೆ, ದೆಹಲಿ ಸರ್ಕಾರ ಈ ಸಮಯದಲ್ಲಿ ಭೋದನೆ ಶುಲ್ಕ ಬಿಟ್ಟು ಬೇರೆ ಹಣವನ್ನು ಪಡೆಯಬಾರದು ಎಂದಿದೆ. ಜೊತೆಗೆ ಏನೇನೋ ಕಾರಣಗಳನ್ನು ಕೇಳಿ ಬೋದನೆ ಶುಲ್ಕವನ್ನು ಹೆಚ್ಚು ಮಾಡುವ ಹಾಗಿಲ್ಲ ಎಂದು ಕಟ್ಟುನಿಟ್ಟಾಗಿ ತಿಳಿಸಿದೆ.

ಬೆಂಗಳೂರಲ್ಲಿ ಆನ್ ಲೈನ್ ಶಾಲೆಗೆ, ಎಂಎಸ್ ಟೀಮ್ ಅಪ್ಲಿಕೇಷನ್ ಬಲಬೆಂಗಳೂರಲ್ಲಿ ಆನ್ ಲೈನ್ ಶಾಲೆಗೆ, ಎಂಎಸ್ ಟೀಮ್ ಅಪ್ಲಿಕೇಷನ್ ಬಲ

ಆನ್‌ಲೈನ್ ಕ್ಲಾಸ್‌ನಿಂದ ದೂರ ಇಡುವಂತಿಲ್ಲ

ಆನ್‌ಲೈನ್ ಕ್ಲಾಸ್‌ನಿಂದ ದೂರ ಇಡುವಂತಿಲ್ಲ

ಈಗಾಗಲೇ ದೆಹಲಿಯ ಅನೇಕ ಶಾಲೆಗಳು ಬೋಧನೆ ಶುಲ್ಕವನ್ನು ತೆಗೆದುಕೊಳ್ಳುತ್ತಿದ್ದಾರೆ. ಇನ್ನು, ಸದ್ಯಕ್ಕೆ ಆ ಶುಲ್ಕವನ್ನು ಪಾವತಿ ಮಾಡಲು ಆಗದೆ ಇರುವ ವಿದ್ಯಾರ್ಥಿಗಳನ್ನು ಆನ್ ಲೈನ್ ಕ್ಲಾಸ್ ನಿಂದ ದೂರ ಇಡುವಂತಿಲ್ಲ ಎಂದು ತಿಳಿಸಿದೆ. ಲಾಕ್‌ಡೌನ್ ಇರುವ ಕಾರಣ ಶಾಲೆಗಳ ಪ್ರಾರಂಭಕ್ಕೆ ಅಡಿಯಾಗಿದ್ದು, ಹೀಗಾಗಿ ಬಹುತೇಕ ಶಾಲೆಗಳು ತಾತ್ಕಲಿಕವಾಗಿ ಆನ್‌ಲೈನ್ ಶಿಕ್ಷಣದ ಮೊರೆ ಹೋಗಿದ್ದಾರೆ.

ಪೋಷಕರ ದೂರು ಆಲಿಸಿದ ಸರ್ಕಾರ

ಪೋಷಕರ ದೂರು ಆಲಿಸಿದ ಸರ್ಕಾರ

ದೆಹಲಿಯ ಹಲವು ಶಾಲೆಗಳು ಶಾಲಾ ಶುಲ್ಕವನ್ನು ಹೆಚ್ಚು ಮಾಡಿದ್ದವು. ಇದನ್ನು ಅನೇಕ ಪೋಷಕರು ಸರ್ಕಾರದ ಗಮನಕ್ಕೆ ತಂದಿದ್ದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆದಿದ್ದರು. ಇದೀಗ ಈ ಬಗ್ಗೆ ದೆಹಲಿ ಸರ್ಕಾರ ಕ್ರಮ ಕೈಗೊಂಡಿದೆ. ಸರ್ಕಾರ ಅನುಮತಿ ಇಲ್ಲದೆ, ಶುಲ್ಕ ಹೆಚ್ಚು ಮಾಡುವಂತಿಲ್ಲ ಎಂದಿದೆ. ಸರ್ಕಾರ ಶುಲ್ಕ ಹೆಚ್ಚು ಮಾಡಲು ಅನುಮತಿಯನ್ನು ಸುಲಭಕ್ಕೆ ನೀಡುವುದಿಲ್ಲ ಎಂದು ತಿಳಿಸಿದೆ.

English summary
The Delhi government has instructed private schools not to hike their fees and can only charge a monthly tuition fee, and not transport fee.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X