ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್: ಚೀನಾ ಅಧ್ಯಕ್ಷರಿಗೆ ಪ್ರಧಾನಿ ನರೇಂದ್ರ ಮೋದಿ ಪತ್ರ

|
Google Oneindia Kannada News

ನವದೆಹಲಿ, ಫೆಬ್ರವರಿ.09: ಕೊರೊನಾ ವೈರಸ್ ನಿಂದ ನಲುಗಿ ಹೋಗಿರುವ ಚೀನಾಗೆ ಅಗತ್ಯ ನೆರವು ನೀಡುವುದಾಗಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ. ಈ ಸಂಬಂಧ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರಿಗೆ ಮೋದಿ ಪತ್ರ ಬರೆದಿದ್ದಾರೆ.

ಚೀನಾದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಕೊರೊನಾ ವೈರಸ್​,​ ಜಪಾನ್​, ಥೈಲ್ಯಾಂಡ್​, ಅಮೆರಿಕಾ, ದಕ್ಷಿಣ ಕೊರಿಯಾ, ಭಾರತ ಸೇರಿದಂತೆ 26ಕ್ಕೂ ಅಧಿಕ ದೇಶಗಳಲ್ಲಿ ಹರಡಿರುವ ಬಗ್ಗೆ ಈಗಾಗಲೇ ವರದಿಯಾಗಿದೆ.

ಕೊರೊನಾ ವೈರಸ್: ಚೀನಾದಿಂದ 'ರೋಗ' ಆಮದು ಮಾಡಿಕೊಳ್ಳುತ್ತಿದೆಯಾ ಭಾರತ?ಕೊರೊನಾ ವೈರಸ್: ಚೀನಾದಿಂದ 'ರೋಗ' ಆಮದು ಮಾಡಿಕೊಳ್ಳುತ್ತಿದೆಯಾ ಭಾರತ?

ಇದರ ಮಧ್ಯೆ ಮಾರಕ ರೋಗದಿಂದ ಭಾರತೀಯರನ್ನು ರಕ್ಷಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಕ್ರಮ ತೆಗೆದುಕೊಂಡು ಆಗಿದೆ. ಕಳೆದ 96 ಗಂಟೆಗಳ ಕಾರ್ಯಾಚರಣೆಯಲ್ಲಿ ವುಹಾನ್ ಸೇರಿದಂತೆ ಚೀನಾದ ಹಲವೆಡೆಗಳಲ್ಲಿ ಉಳಿದುಕೊಂಡಿದ್ದ 647ಕ್ಕೂ ಹೆಚ್ಚು ಭಾರತೀಯರನ್ನು ಸುರಕ್ಷಿತವಾಗಿ ದೇಶಕ್ಕೆ ವಾಪಸ್ ಕರೆ ತರಲಾಗಿದೆ.

 CoronaVirus: PM Narendra Modi Write A Letter To China President

ಚೀನಾಗೆ ಅಗತ್ಯ ನೆರವು ನೀಡುವುದಾಗಿ ಪತ್ರ ಸಂದೇಶ:

ಚೀನಾದಲ್ಲಿ ಕೊರೊನಾ ವೈರಸ್ ನಿಂದ 811ಕ್ಕೂ ಹೆಚ್ಚು ಜನರು ಪ್ರಾಣ ಬಿಟ್ಟಿದ್ದು, ಮೃತರ ಸಾವಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಇದರ ಜೊತೆಗೆ ಕೊರೊನಾ ವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ ನೆರೆಯ ರಾಷ್ಟ್ರ ಚೀನಾಗೆ ಅಗತ್ಯ ನೆರವು ನೀಡಲು ಭಾರತ ಸಿದ್ಧವಿದೆ ಎಂದು ಪ್ರಧಾನಮಂತ್ರಿ ಮೋದಿ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಮಾರಕ ವೈರಸ್ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಚೀನಾ ಸರ್ಕಾರದ ಜೊತೆಗೆ ಭಾರತೀಯ ಸರ್ಕಾರವು ಕೈಜೋಡಿಸಲು ಸದಾ ಸಿದ್ಧವಿರುತ್ತದೆ ಎಂದು ಮೋದಿ ತಿಳಿಸಿದ್ದಾರೆ. ಅಲ್ಲದೇ, ಚೀನಾದಲ್ಲಿದ್ದ 647ಕ್ಕೂ ಹೆಚ್ಚು ಭಾರತೀಯರನ್ನು ಸುರಕ್ಷಿತವಾಗಿ ದೇಶಕ್ಕೆ ವಾಪಸ್ ಕಳುಹಿಸುವಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ನೀಡಿದ ಸಹಕಾರವನ್ನು ಮೋದಿ ಶ್ಲಾಘಿಸಿದ್ದಾರೆ.

English summary
CoronaVirus: Prime Minister Narendra Modi Write A Letter To China President Xi Jinping. Indian Government Helps China For Fight Against Coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X