• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗಾಂಧಿ ಹೇಳಿ ಕೊಟ್ಟ ಮಂತ್ರ ಬೋಧಿಸಿದ ಮೋದಿ

By Mahesh
|

ನವದೆಹಲಿ, ಅ.2: ಮೇಕ್ ಇನ್ ಇಂಡಿಯಾ ಅಭಿಯಾನಕ್ಕೆ ಚಾಲನೆ ದೊರೆತ ಬೆನ್ನಲ್ಲೇ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಸ್ವಚ್ಛ ಭಾರತ ಅಭಿಯಾನ ಆರಂಭಿಸಿದೆ. ಮಹಾತ್ಮ ಗಾಂಧೀಜಿ ಅವರ ಅವರ ಹುಟ್ಟುಹಬ್ಬದ ದಿನದಂದು ಈ ಮಹತ್ವದ ಅಭಿಯಾನ ಜಾರಿಗೆ ತಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಗಾಂಧಿ ತಾತಾ ಹೇಳಿಕೊಟ್ಟ ಸ್ವಚ್ಛತಾ ಮಂತ್ರವನ್ನು ಎಲ್ಲರಿಗೂ ಬೋಧಿಸಿದ್ದಾರೆ.

ಗುರುವಾರ ಬೆಳಗ್ಗೆ ನವದೆಹಲಿಯ ವಾಲ್ಮೀಕಿ ಬಸ್ತಿಯಲ್ಲಿ ಸ್ವಚ್ಛತಾ ಅಭಿಯಾನ ಅಥವಾ ಕ್ಲೀನ್ ಇಂಡಿಯಾ ಯೋಜನೆಗೆ ಚಾಲನೆ ನೀಡಿದರು. ಇದಕ್ಕೂ ಮುನ್ನ ನೆರೆದಿದ್ದ ಸಮೂಹಕ್ಕೆ ಸ್ವಚ್ಛ ಭಾರತ ನಿರ್ಮಾಣದ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. [ಗಾಂಧೀಜಿ ಸ್ವಚ್ಛ ಭಾರತ ಕನಸು ನನಸಾಗಿಸೋಣ: ಮೋದಿ]

ಐದು ದಿನಗಳ ಅಮೆರಿಕ ಪ್ರವಾಸದಿಂದ ಹಿಂತಿರುಗಿರುವ ಮೋದಿ ಅವರು ಜೆಟ್ ಲಾಗ್(ಏನು ಹಾಗೆಂದರೆ?) ಕೂಡಾ ಲೆಕ್ಕಿಸದೆ ಉತ್ಸಾಹದಿಂದ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ. ಮೋದಿ ಅವರ ಜೊತೆ ಸಮಾರಂಭದಲ್ಲಿ ಕೇಂದ್ರ ಸಚಿವ ವೆಂಕಯ್ಯ ನಾಯ್ಡು, ನಿತಿನ್ ಗಡ್ಕರಿ, ನಟ ಅಮೀರ್ ಖಾನ್ ಅವರು ವೇದಿಕೆಯಲ್ಲಿದ್ದರು. [ಸ್ವಚ್ಛ ಭಾರತ ಕನಸು ನನಸಾಗಿಸೋಣ]

ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿ ಮೋದಿ ಅವರು ಮಾಡಿದ ಭಾಷಣದ ಮುಖ್ಯಾಂಶಗಳು:

* ಈ ದಿನ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಜಿ ಅವರ ಜನ್ಮ ದಿನ ವಾರ್ಷಿಕೋತ್ಸವ ಈ ಶುಭ ದಿನದಂದು ಇಂಥ ಯೋಜನೆಗೆ ಚಾಲನೆ ನೀಡುತ್ತಿರುವುದು ಸಂತೋಷ ತಂದಿದೆ.

* ಗಾಂಧೀಜಿ ಅವರ ನೇತೃತ್ವದಲ್ಲಿ ನಮಗೆ ಸ್ವಾತಂತ್ರ್ಯ ಸಿಕ್ಕಿದೆ ಆದರೆ, ಅವರ ಕನಸಾದ ಸ್ವಚ್ಛ ಭಾರತ ಇನ್ನೂ ನಾವು ಪೂರ್ಣಗೊಳಿಸಿಲ್ಲ.

* ಸ್ವಚ್ಛ ಭಾರತ ಅಭಿಯಾನದ ಚಿನ್ಹೆ ಬರೀ ಚಿನ್ಹೆಯಲ್ಲ ಅದರ ಮೂಲಕ ಗಾಂಧೀಜಿ ನಮ್ಮನ್ನು ನೋಡುತ್ತಿದ್ದಾರೆ. ಯಾವಾಗ ಭಾರತ ಸ್ವಚ್ಛಗೊಳಿಸುತ್ತೀರಿ ಎಂದು ಪ್ರಶ್ನಿಸುತ್ತಿದ್ದಾರೆ.

* ಮಂದಿರವಿರಲಿ, ಮಸೀದಿ ಇರಲಿ, ಗುರುದ್ವಾರ ಅಥವಾ ಯಾವುದೇ ಧಾರ್ಮಿಕ ಸ್ಥಳವಿರಲಿ ನಾವು ಸ್ವಯಂಪ್ರೇರಿತರಾಗಿ ಪರಿಸರವನ್ನು ಸ್ವಚ್ಛಗೊಳಿಸೋಣ. ಪಾವಿತ್ರ್ಯತೆಯನ್ನು ಕಾಯ್ದುಕೊಳ್ಳೋಣ.

ಭಾಷಣದ ಇನ್ನಷ್ಟು ಮುಖ್ಯಾಂಶಗಳು ಹಾಗೂ ವಿಡಿಯೋ ಮುಂದೆ ನೋಡಿ

ಮೋದಿ ಭಾಷಣದ ಮುಖ್ಯಾಂಶಗಳು

ಮೋದಿ ಭಾಷಣದ ಮುಖ್ಯಾಂಶಗಳು

* ಇದು ಸರ್ಕಾರಿ ಯೋಜನೆಯಲ್ಲ. ಸರ್ಕಾರ ಹಾಗೂ ಸಚಿವರು ಸರ್ಕಾರಿ ನೌಕರರು ಇದನ್ನು ಸಾಕಾರಗೊಳಿಸಲು ಸಾಧ್ಯವಿಲ್ಲ. ಪ್ರತಿಯೊಬ್ಬ ಜನರು ಕೈ ಜೋಡಿಸಬೇಕಿದೆ. 1.2 ಬಿಲಿಯನ್ ಜನರ ಮುಟ್ಟುವ ಗುರಿ ಹೊಂದಲಾಗಿದೆ

* ಈ ಅಭಿಯಾನದ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಚಾರ ಆರಂಭಿಸಿದ್ದೇನೆ. ದೇಶವನ್ನು ಪ್ರೀತಿಸುವ ನಾಗರಿಕರು ಜವಾಬ್ದಾರಿಯನ್ನು ಮರೆಯಬಾರದು.

* ಬಯಲು ಶೌಚಾಲಯ ಪದ್ದತಿ, ಮಲ ಹೊರುವ ಅನಿಷ್ಟ ಪದ್ದತಿಗಳು ಗ್ರಾಮೀಣ ಭಾಗದಲ್ಲಷ್ಟೇ ಅಲ್ಲ ನಗರಗಳಲ್ಲೂ ಇದೆ. ಇದನ್ನು ನಿರ್ಮೂಲನೆ ಮಾಡುವ ಹೊಣೆ ನಮ್ಮ ಮೇಲಿದೆ.

ಪ್ರಧಾನಿ ಸಚಿವಾಲಯದಿಂದ ಭಾಷಣದ ಟ್ವೀಟ್

ಪ್ರಧಾನಿ ಸಚಿವಾಲಯದಿಂದ ಮೋದಿ ಭಾಷಣದ ಟ್ವೀಟ್

ಹಲವಾರು ಗಣ್ಯರಿಗೆ ಕರೆ ನೀಡಿದ ಮೋದಿ

ಮಾಜಿ ಕ್ರಿಕೆಟರ್ ಸಚಿನ್ ತೆಂಡೂಲ್ಕರ್, ನಟ ಸಲ್ಮಾನ್ ಖಾನ್,ಉದ್ಯಮಿ ಅನಿಲ್ ಅಂಬಾನಿ, ಕಾಂಗ್ರೆಸ್ ನಾಯಕ ಶಶಿ ತರೂರ್ ಸೇರಿದಂತೆ 9 ಜನರಿಗೆ ಈ ಅಭಿಯಾನವನ್ನು ಮುಂದುವರೆಸುವಂತೆ ಮೋದಿ ಅವರು ಕರೆ ನೀಡಿದರು.

ಪ್ರಿಯಾಂಕಾ ಛೋಪ್ರಾಗೂ ಕರೆ ನೀಡಿದ ಮೋದಿ

ನಟ ಕಮಲ್ ಹಾಸನ್, ನಟಿ ಪ್ರಿಯಾಂಕಾ ಛೋಪ್ರಾಗೂ ಕರೆ ನೀಡಿದ ಮೋದಿ

ಮೋದಿ ಭಾಷಣದ ವಿಡಿಯೋ

ದೆಹಲಿಯಲ್ಲಿ ನಡೆದ ಸ್ವಚ್ಛಭಾರತ ಅಭಿಯಾನ ಕಾರ್ಯಕ್ರಮದ ಸಂಪೂರ್ಣ ವಿವರ ಈ ವಿಡಿಯೋದಲ್ಲಿ ಲಭ್ಯವಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Prime Minister of India Narendra Modi has been maintaining a hectic schedule on Thursday, Oct 2. While his day begins with paying tribute to Mahatma Gandhi at Rajghat, he later launched his highly ambitious scheme -- Swachh Bharat or Clean India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more