ಜಿಯೋಗೆ ಕೇಂದ್ರ ಪೋಷಣೆ ಆರೋಪ:ಬಿಎಸ್‌ಎನ್‌ಎಲ್ ನೌಕರರ ಮುಷ್ಕರ
ನವದೆಹಲಿ, ಡಿಸೆಂಬರ್ 3: ಬಿಎಸ್‌ಎನ್‌ಎಲ್ ಉದ್ಯೋಗಿಗಳು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿಸೆಂಬರ್ 10ರಂದು ದೇಶವ್ಯಾಪಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನಿಸಿದೆ.
ರಿಲಯನ್ಸ್ ಜಿಯೋ ಕಂಪನಿಯನ್ನು ಕೇಂದ್ರ ಸರ್ಕಾರ ಪೋಷಿಸುತ್ತಿದೆ ಎಂದು ದೂರಿರುವ ಬಿಎಸ್‌ಎನ್‌ಎಲ್ ಉದ್ಯೋಗಿಗಳು ಪ್ರತಿಭಟನೆಗೆ ಮುಂದಾಗಿದ್ದಾರೆ.
4 ಜಿ ಸೇವೆ ಒದಗಿಸಲು ತರಂಗಗುಚ್ಛಗಳನ್ನು ಬಿಎಸ್‌ಎನ್‌ಎಲ್ ಗೆ ಸರ್ಕಾರ ವಿತರಣೆ ಮಾಡಿಲ್ಲ, ಜಿಯೋದ ಅಗ್ಗದ ದರದ ಸ್ಪರ್ಧೆಯಿಂದಾಗಿ ಇಡೀ ಟೆಲಿಕಾಂ ಉದ್ಯಮ ಸಂಕಷ್ಟದಲ್ಲಿದೆ. ಬಿಎಸ್‌ಎನ್‌ಎಲ್ ಸೇರಿದಂತೆ ತಮ್ಮ ಸ್ಪರ್ಧಿಗಳನ್ನು ತಮ್ಮ ಕಣದಿಂದ ಹೊರತಳ್ಳುವುದೇ ಜಿಯೋದ ಉದ್ದೇಶ ಎಂದು ಆರೋಪಿಸಿದ್ದಾರೆ.

2011-12ರಲ್ಲಿ 8,800 ಕೋಟಿ ರೂ ನಷ್ಟದಲ್ಲಿದ್ದ ಬಿಎಸ್‌ಎನ್‌ಎಲ್ 2014-15ರಲ್ಲಿ 672 ಕೋಟಿ ರೂ ಕಾರ್ಯಾಚರಣೆ ಲಾಭವನ್ನು ದಾಖಲಿಸಿದೆ. 4 ಜಿ ಇಲ್ಲದೆಯೇ 2 ಜಿ ಮತ್ತು 3 ಜಿ ಮೂಲಕವೇ ಬಿಎಸ್‌ಎನ್‌ಎಲ್ ತನ್ನ ಅಸ್ತಿತ್ವವನ್ನು ಕಾಯ್ದುಕೊಳ್ಳುತ್ತಿದೆ. 2017ರ ಜನವರಿಯಿಂದ ಅನ್ವಯವಾಗುವಂತೆ ಉದ್ಯೋಗಿಗಳ ವೇತನ ಮತ್ತು ಪಿಂಚಣಿ ಪರಿಷ್ಕರಣೆ ಮತ್ತಿತರೆ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮುಷ್ಕರಕ್ಕೆ ನೌಕರರು ಮುಂದಾಗಿದ್ದಾರೆ.












Click it and Unblock the Notifications