ಕೇಜ್ರಿವಾಲ್ ವಿರುದ್ಧ ಭ್ರಷ್ಟಾಚಾರದ ಆರೋಪ : ತನಿಖೆ ಆರಂಭ

ನವದೆಹಲಿ, ಮೇ 08 : ಎರಡು ಕೋಟಿ ರುಪಾಯಿ ಲಂಚ ತಿಂದಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಹೊರಿಸಲಾಗಿರುವ ದೂರಿನ ತನಿಖೆಯನ್ನು ಭ್ರಷ್ಟಾಚಾರ ನಿಗ್ರಹ ದಳ ಸೋಮವಾರ ಆರಂಭಿಸಿದೆ.

ಈ ಗಂಭೀರ ಆರೋಪವನ್ನು ಹೊರಿಸಿರುವ ಉಚ್ಚಾಟಿಕ ಆಮ್ ಆದ್ಮಿ ಪಕ್ಷದ ನಾಯಕ ಕಪಿಲ್ ಮಿಶ್ರಾ ಅವರು ಸೋಮವಾರ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಅಗತ್ಯವಾದ ದಾಖಲೆಗಳನ್ನು ಸಲ್ಲಿಸಿದರ ನಂತರ ತನಿಖೆಯನ್ನು ಕೈಗೊಳ್ಳಲಾಗಿದೆ.[ಅರವಿಂದ್ ಕೇಜ್ರಿವಾಲ್ ಮೇಲೆ ಭ್ರಷ್ಟಾಚಾರದ ಬಾಂಬ್ ಸಿಡಿಸಿದ ಕಪಿಲ್ ಮಿಶ್ರಾ]

ಅರವಿಂದ್ರ್ ಕೇಜ್ರಿವಾಲ್ ಅವರು ತಮ್ಮ ಸಹೋದ್ಯೋಗಿ ಸತ್ಯೇಂದ್ರ ಜೈನ್ ಅವರಿಂದ 2 ಕೋಟಿ ರುಪಾಯಿ ಲಂಚ ತಿಂದಿದ್ದಾರೆಂದು ಕಪಿಲ್ ಮಿಶ್ರಾ ದೂನಿನಲ್ಲಿ ತಿಳಿಸಿದ್ದಾರೆ. ಕೇಜ್ರಿವಾಲ್ ವಿರುದ್ಧ ಸಿಡಿದೆದ್ದಿಕ್ಕೆ ಪ್ರತಿಯಾಗಿ ಕಪಿಲ್ ಮಿಶ್ರಾ ಅವರನ್ನು ಪಕ್ಷದಿಂದಲೇ ಕಿತ್ತುಹಾಕಲಾಗಿದೆ.[ಏನಿದು ಎಎಪಿ ಸರಕಾರವನ್ನೇ ನಡುಗಿಸಿದ 'ವಾಟರ್ ಟ್ಯಾಂಕರ್ ಸ್ಕ್ಯಾಮ್'?]

Bribery charges against Arvind Kejriwal: ACB initiates probe

ತಾವು ಭ್ರಷ್ಟಾಚಾರ ವಿರೋಧಿ ಎಂದು ಹೇಳಿಕೊಳ್ಳುವ ಕೇಜ್ರಿವಾಲ್ ಅವರು ಲಂಚ ತಿಂದಿದ್ದಾರೆ ಎಂದು ಆರೋಪಿಸಿ ಕಪಿಲ್ ಮಿಶ್ರಾ ಅವರು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರಿಗೆ ಭಾನುವಾರ ದೂರು ಸಲ್ಲಿಸಿದ್ದರು.[ಹಗರಣ ಬಯಲಿಗೆಳೆಯುತ್ತೇನೆ ಎಂದ ಸಚಿವನನ್ನು ಹೊರ ದಬ್ಬಿದ ಕೇಜ್ರಿ]

ಈ ದೂರನ್ನು ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸೋಮವಾರ ಸಲ್ಲಿಸಲಾಗಿದೆ. ಇಡೀ ದೇಶವನ್ನು ತಲ್ಲಣಗೊಳಿಸಿರುವ ಈ ಹಗರಣದ ತನಿಖೆಯನ್ನು ಒಂದು ವಾರದೊಳಗೆ ಪೂರ್ತಿಗೊಳಿಸಿ ವರದಿಯನ್ನು ಸಲ್ಲಿಸಬೇಕು ಎಂದು ಲೆ.ಗವರ್ನರ್ ಅವರು ಆದೇಶಿಸಿದ್ದಾರೆ.

ಸೋಮವಾರ ಭ್ರಷ್ಟಾಚಾರ ನಿಗ್ರಹ ದಳದ ಕಚೇರಿಗೆ ಭೇಟಿ ನೀಡಿದ ಕಪಿಲ್ ಮಿಶ್ರಾ ಅವರು, ಲಂಚ ಹಗರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಿದ್ದಾರೆ. ಆ ಆರೋಪದ ಹಿನ್ನೆಲೆಯಲ್ಲಿ ಅರವಿಂದ್ ಕೇಜ್ರಿವಾಲ್ ಅವರು ಕೂಡಲೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಲಾಗಿದೆ.

ಆರೋಪಗಳಿಗೆ ಪ್ರತಿಯಾಗಿ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಸೋಮವಾರ ಪತ್ರಿಕಾಗೋಷ್ಠಿ ನಡೆಸಿ, ಕಪಿಲ್ ಮಿಶ್ರಾ ಅವರ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ.

{promotion-urls}

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+