• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚೀನಾ, ಯುಎಸ್‌ ನಂತರ ಕೊರೊನಾ ಹಾಟ್‌ಸ್ಪಾಟ್‌ ಆದ ಬ್ರೆಜಿಲ್!

|

ದೆಹಲಿ, ಮೇ 13: ಚೀನಾದಲ್ಲಿ ಹುಟ್ಟಿದ ಕೊರೊನಾ ವೈರಸ್‌ ಅಲ್ಲಿ ಮಾರಣಹೋಮವೇ ಮಾಡಿಬಿಡ್ತು. 80 ಸಾವಿರ ಸೋಂಕು ಪತ್ತೆಯಾಗಿದ್ದು, 4 ಸಾವಿರಕ್ಕೂ ಹೆಚ್ಚು ಜನ ಬಲಿಯಾದರು. ಚೀನಾದ ದುರಂತ ನೋಡಿ ಇತರೆ ದೇಶಗಳು ಭಯಗೊಂಡಿದ್ದವು. ದಿನಕಳೆದಂತೆ ಚೀನಾದಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂತು.

ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

ಆದರೆ, ಒಬ್ಬರಿಂದ ಮತ್ತೊಬ್ಬರಿಗೆ ಹರಡಿದ ಈ ಮಹಾಮಾರಿ ಚೀನಾದಿಂದ ಸ್ಪೇನ್, ಇಟಲಿ, ಅಮೆರಿಕ, ಯುಕೆ, ಭಾರತ ಹೀಗೆ ಇಡೀ ವಿಶ್ವಕ್ಕೆ ಹಬ್ಬಿತು. ಕೊವಿಡ್ ಆರ್ಭಟಕ್ಕೆ ಜಗತ್ತಿನ ಪ್ರಮುಖ ದೇಶಗಳು ನಲುಗಿ ಹೋದವು.

ಟರ್ಮಿನಲ್ ಕಥೆ ನೆನಪಿಸಿದ ಐಜಿಐ ವಿಮಾನ ನಿಲ್ದಾಣದಲ್ಲಿದ್ದ ಜರ್ಮನ್

ಯುಎಸ್‌ಎನಲ್ಲಿ ನಿರೀಕ್ಷೆಗೂ ಮೀರಿ ಸಾವು ಸಂಭವಿಸಿದೆ. 14 ಲಕ್ಷಕ್ಕೂ ಹೆಚ್ಚು ಸೋಂಕು ವರದಿಯಾಗಿದ್ದು, 83 ಸಾವಿರ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದೀಗ, ಜಗತ್ತಿನಲ್ಲಿ ಕೊರೊನಾಗೆ ಹೊಸ ಹಾಟ್‌ಸ್ಪಾಟ್‌ ಆಗಿ ಬ್ರೆಜಿಲ್ ದೇಶ ಬಲಿಯಾಗಿದೆ. ಮುಂದೆ ಓದಿ.....

ಗಡಿಯಲ್ಲಿ ಚೀನಾದ ರಸ್ತೆ: ಭಾರತದ ಆತಂಕಕ್ಕೆ ಕಾರಣವೇನು?

1.7 ಲಕ್ಷಕ್ಕೂ ಅಧಿಕ ಸೋಂಕು

1.7 ಲಕ್ಷಕ್ಕೂ ಅಧಿಕ ಸೋಂಕು

ಬ್ರೆಜಿಲ್‌ ದೇಶದಲ್ಲಿ ಕಳೆದ ಫೆಬ್ರವರಿ ತಿಂಗಳಿನಿಂದ ಈವರೆಗೂ 1.77,589 ಕೊರೊನಾ ಕೇಸ್‌ಗಳು ವರದಿಯಾಗಿದೆ. ಅತಿ ಸೋಂಕಿತರ ಪಟ್ಟಿಯಲ್ಲಿ ಮುಂದಿದ್ದ ಜರ್ಮನಿಯಲ್ಲಿ ಬ್ರೆಜಿಲ್ ಹಿಂದಿಕ್ಕಿದೆ. ಫ್ರಾನ್ಸ್ ದೇಶದ ಸನಿಹದಲ್ಲಿ ಬಂದು ನಿಂತಿದೆ. ದಕ್ಷಿಣ ಅಮೆರಿಕ ರಾಷ್ಟ್ರಗಳ ಪೈಕಿ ಬ್ರೆಜಿಲ್ ಕೊರೊನಾ ಹಾಟ್‌ಸ್ಪಾಟ್‌ ಆಗಿದೆ.

ಆತಂಕದೆಡೆಗೆ ಬ್ರೆಜಿಲ್!

ಆತಂಕದೆಡೆಗೆ ಬ್ರೆಜಿಲ್!

ಬ್ರೆಜಿಲ್ ದೇಶದಲ್ಲಿ ಈವರೆಗೂ 12,461 ಜನರು ಕೊರೊನಾದಿಂದ ಪ್ರಾಣ ಕಳೆದುಕೊಂಡಿದ್ದಾರೆ. ವಾಷಿಂಗ್ಟನ್ ವಿಶ್ವವಿದ್ಯಾಲಯದ ಆರೋಗ್ಯ ಮಾಪನ ಮತ್ತು ಮೌಲ್ಯಮಾಪನ (ಐಎಚ್‌ಎಂಇ) ವರದಿ ಪ್ರಕಾರ ಆಗಸ್ಟ್ ವೇಳೆಗೆ ಬ್ರೆಜಿಲ್‌ನಲ್ಲಿ ಸುಮಾರು 88000 ಸಾವು ಸಂಭವಿಸಲಿದೆ ಎಂದು ಹೇಳಿದೆ. ಇದು ನಿಜಕ್ಕೂ ಆತಂಕ ತಂದಿದೆ.

ಭಾರತದ ಮೇಲೆ ದಾಳಿಗೆ ಪಿಒಕೆ ಪ್ರಧಾನಿಯಿಂದ ಪಾಕಿಸ್ತಾನಕ್ಕೆ ಒತ್ತಾಯ

ಜಿಮ್, ಸಲೂನ್ ತೆರೆಯಲು ಅಧ್ಯಕ್ಷರ ಒತ್ತಾಯ

ಜಿಮ್, ಸಲೂನ್ ತೆರೆಯಲು ಅಧ್ಯಕ್ಷರ ಒತ್ತಾಯ

ಲಾಕ್‌ಡೌನ್‌ ಕಾರಣದಿಂದ ದೇಶದಲ್ಲಿ ಅರ್ಥಿಕ ಬಿಕ್ಕಟ್ಟು ಎದುರಾಗಿದೆ. ವ್ಯವಹಾರಕ್ಕೆ ಅವಕಾಶ ಕೊಡದೆ ಹೋದರೆ ಆರ್ಥಿಕ ಹಾನಿ ರೋಗಕ್ಕಿಂತ ಕೆಟ್ಟದಾಗಿರಲಿದೆ ಎಂದು ಹೇಳಿದ್ದಾರೆ. ಇದರಿಂದ ಜಿಮ್ ಮತ್ತು ಸಲೂನ್‌ ಅಂಗಡಿ ಓಪನ್ ಮಾಡಲು ಅವಕಾಶ ಕೊಡಲು ತೀರ್ಮಾನಿಸಿದ್ದಾರೆ. ಆದರೆ, ಅಧ್ಯಕ್ಷ ಬೋಲ್ಸೊನಾರೊ ಅವರ ವಾದಕ್ಕೆ ರಾಜ್ಯಗಳ ಗರ್ವನರ್‌ಗಳು ವಿರೋಧ ವ್ಯಕ್ತಪಡಿಸಿದ್ದಾರೆ.

ಯುಎಸ್‌ ಬಳಿಕ ರಷ್ಯಾ

ಯುಎಸ್‌ ಬಳಿಕ ರಷ್ಯಾ

ಜಗತ್ತಿನಲ್ಲಿ ಅತಿ ಹೆಚ್ಚು ಸೋಂಕು ಹೊಂದಿರುವ ದೇಶಗಳ ಪಟ್ಟಿಯಲ್ಲಿ ರಷ್ಯಾ ಮೂರನೇ ಸ್ಥಾನ ಪಡೆದುಕೊಂಡಿದೆ. ಅಮೆರಿಕ, ಸ್ಪೇನ್ ನಂತರ ರಷ್ಯಾದಲ್ಲಿ ಹೆಚ್ಚು ಕೇಸ್ ದಾಖಲಾಗಿದೆ. ಕಳೆದ 24 ಗಂಟೆಯಲ್ಲಿ 10 ಸಾವಿರಕ್ಕೂ ಹೆಚ್ಚು ಕೇಸ್ ಇಲ್ಲಿ ವರದಿಯಾಗಿದೆ. ಈವರೆಗೂ 232,243 ಜನರಿಗೆ ಕೊರೊನಾ ದೃಢಪಟ್ಟಿದೆ. ಆದರೆ, ಸಾವಿನ ಸಂಖ್ಯೆಯಲ್ಲಿ ರಷ್ಯಾ ನಿಯಂತ್ರಣದಲ್ಲಿದೆ. ಇದುವರೆಗೂ 2,116 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ.

English summary
After China, US, Spain now Brazil set to become new global hotspot for pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X