• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆತ್ಮಹತ್ಯೆಗೆ ಯತ್ನಿಸಿದ "ಬಾಬಾ ಕಾ ಡಾಬಾ" ಖ್ಯಾತಿಯ ಕಾಂತಪ್ರಸಾದ್

|
Google Oneindia Kannada News

ನವದೆಹಲಿ, ಜೂನ್ 18: ಯೂಟ್ಯೂಬ್‌ ವಿಡಿಯೋದಿಂದಾಗಿ ದೇಶಾದ್ಯಂತ ಏಕಾಏಕಿ ಖ್ಯಾತಿಯಾಗಿದ್ದ, "ಬಾಬಾ ಕಾ ಡಾಬಾ"ದ ಕಾಂತ ಪ್ರಸಾದ್ (80) ಗುರುವಾರ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಸಣ್ಣ ಪೆಟ್ಟಿಗೆ ಹೋಟೆಲ್ ಇಟ್ಟುಕೊಂಡಿದ್ದ ಕಾಂತ ಪ್ರಸಾದ್ ಯೂಟೂಬ್‌ನಿಂದಾಗಿ ಪ್ರಸಿದ್ಧಿ ಪಡೆದು, ನಂತರ ಹಣಕಾಸಿನ ಸಹಾಯ ದೊರೆತು ದೊಡ್ಡ ರೆಸ್ಟೋರೆಂಟ್ ತೆರೆದಿದ್ದರು. ಆದರೆ ಈಚೆಗೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಹೋಟೆಲ್ ಮುಚ್ಚಿದ್ದರು.

ಹೊಸ ರೆಸ್ಟೋರೆಂಟ್ ತೆರೆದ ಬಾಬಾ ಕಾ ಢಾಬಾ ಮಾಲೀಕ ಕಾಂತ ಪ್ರಸಾದ್ ಹೊಸ ರೆಸ್ಟೋರೆಂಟ್ ತೆರೆದ ಬಾಬಾ ಕಾ ಢಾಬಾ ಮಾಲೀಕ ಕಾಂತ ಪ್ರಸಾದ್

ಸದ್ಯ ಸಫ್ಸರ್ ಜಂಗ್ ಆಸ್ಪತ್ರೆಯಲ್ಲಿ ಕಾಂತ ಪ್ರಸಾದ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುರುವಾರ ಆಸ್ಪತ್ರೆಯಿಂದ ಕರೆ ಬಂದಿದ್ದು, ಓರ್ವ ವ್ಯಕ್ತಿ ಆತ್ಮಹತ್ಯೆಗೆ ಪ್ರಯತ್ನಿಸಿರುವ ವಿಷಯ ತಿಳಿಯಿತು. ಆಸ್ಪತ್ರೆಗೆ ಹೋದ ಮೇಲೆ ಅದು ಕಾಂತ ಪ್ರಸಾದ್ ಎಂದು ತಿಳಿಯಿತು. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪೆಟ್ಟಿ ಹೋಟೆಲ್‌ನ ಕಾಂತ ಪ್ರಸಾದ್ ಯೂಟೂಬ್‌ನಿಂದಾಗಿ ಒಂದೇ ರಾತ್ರಿಯಲ್ಲಿ ಫೇಮಸ್ ಆಗಿದ್ದರು. ದೇಶದ ಹಲವು ಕಡೆಗಳಿಂದ ಬಾಬಾ ಕಾ ಡಾಬಾ ಕಾಂತ ಪ್ರಸಾದ್‌ಗೆ ನೆರವು ಬಂದಿತ್ತು. ತಮಗೆ ಬಂದ ಹಣದಿಂದ ಚೈನೀಸ್ ರೆಸ್ಟೊರೆಂಟ್ ತೆರೆದಿದ್ದರು. ಆದರೆ ಹೋಟೆಲ್‌ಗೆ ತಿಂಗಳಿಗೆ ಒಂದು ಲಕ್ಷ ರೂಪಾಯಿ ಖರ್ಚಾಗುತ್ತಿತ್ತು. ವ್ಯಾಪಾರ ಕಡಿಮೆಯಾಗಿತ್ತು. ಈ ಕಾರಣಕ್ಕೆ ರೆಸ್ಟೊರೆಂಟ್ ಮುಚ್ಚಿ ಮತ್ತೆ ಪೆಟ್ಟಿ ಹೋಟೆಲ್‌ಗೆ ಮರಳಿದ್ದರು.

ಈ ಸಂಗತಿಗಳಿಂದ ಕಾಂತಪ್ರಸಾದ್ ಮಾನಸಿಕವಾಗಿ ಕುಗ್ಗಿದ್ದರು. ಹೀಗಾಗಿ ಆತ್ಮಹತ್ಯೆ ಯತ್ನ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

COOJ Mental Health Foundation (COOJ)- 0832-2252525, ಪರಿವರ್ತನ್- +91 7676 602 602, Connecting Trust- +91 992 200 1122/+91-992 200 4305 or Sahai- 080-25497777/ SAHAIHELPLINE@GMAIL.COM

English summary
Owner of 'Baba Ka Dhaba' in Delhi's Malviya Nagar, Kanta Prasad, was admitted to Safdarjung Hospital on Thursday after attempting suicide,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X