'ಅರವಿಂದ್ ಕೇಜ್ರಿವಾಲ್ ಗೆ ಝಡ್ ಪ್ಲಸ್ ಸೆಕ್ಯುರಿಟಿ ಬೇಕಿಲ್ಲ'
ನವದೆಹಲಿ, ಫೆ.12: ದೆಹಲಿ ಸಿಎಂ ಆಗಿ ಮತ್ತೊಮ್ಮೆ ಪ್ರಮಾಣ ವಚನ ಸ್ವೀಕರಿಸಲು ಸಿದ್ಧರಾಗುತ್ತಿರುವ ನಿಯೋಜಿತ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ಝಡ್ ಪ್ಲಸ್ ಸೆಕ್ಯುರಿಟಿ ಬೇಕಿಲ್ಲಎಂದು ಆಮ್ ಆದ್ಮಿ ಪಕ್ಷದ ಮುಖಂಡರು ಹೇಳಿದ್ದಾರೆ. ಜನ ಸಾಮಾನ್ಯರೊಡನೆ ಕಲೆತು ಬೆರತು ಕೆಲಸ ಮಾಡಲು ಸೆಕ್ಯುರಿಟಿ ತೊಂದರೆ ಉಂಟು ಮಾಡುತ್ತದೆ ಎಂದಿದ್ದಾರೆ.
ನಿಯೋಜಿತ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ಝಡ್ ಪ್ಲಸ್ ಸೆಕ್ಯುರಿಟಿ ನೀಡಲೇಬೇಕಾದರೆ ಅದಕ್ಕೆ ಪೂರಕವಾದ ಕಾರಣಗಳನ್ನು ನೀಡಬೇಕಾಗುತ್ತದೆ. ನಾವು ಗೃಹ ಇಲಾಖೆಯನ್ನು ಝಡ್ ಪ್ಲಸ್ ಸೆಕ್ಯುರಿಟಿ ಬೇಕು ಎಂದು ಕೇಳಿಲ್ಲ ಎಂದು ಎಎಪಿ ಮುಖಂಡ ಆಶುತೋಷ್ ಹೇಳಿದ್ದಾರೆ.[ಆಮ್ ಆದ್ಮಿ ಪಕ್ಷಕ್ಕೆ ಜಯ, ಭ್ರಷ್ಟತೆ ಇನ್ನು ಮಾಯ]

ಅದರೆ, ಆಮ್ ಆದ್ಮಿ ಪಕ್ಷದ ಅಭೂತಪೂರ್ವ ವಿಜಯದ ನಂತರ ಅರವಿಂದ್ ಕೇಜ್ರಿವಾಲ್ ಅವರ ಭದ್ರತಾ ಸಿಬ್ಬಂದಿಗಳ ಸಂಖ್ಯೆ ಹೆಚ್ಚಿದೆ. ಅವರ ಮನೆ, ಕಚೇರಿಗೆ ಸೆಕ್ಯುರಿಟಿ ಒದಗಿಸಲಾಗಿದೆ. ಜೊತೆಗೆ ಉತ್ತರಪ್ರದೇಶ ಪೊಲೀಸ್ ಇಲಾಖೆ ಕೂಡಾ ಅರವಿಂದ್ ಕೇಜ್ರಿವಾಲ್ ಮನೆ ಕೌಶಾಂಬಿಗೆ ರಕ್ಷಣೆ ಒದಗಿಸಿದ್ದಾರೆ. 12 ಜನ ಶಸ್ತ್ರಧಾರಿ ಕಮಾಂಡೋಗಳು ಮನೆಯನ್ನು ಕಾವಲು ಕಾಯುತ್ತಿದ್ದಾರೆ.[ಮೋದಿ ಹಾಗೂ ಗುಲಾಮರಿಗೆ ಶ್ರೀಸಾಮಾನ್ಯನ ಪೆಟ್ಟು]
ಗೃಹ ಸಚಿವ ರಾಜನಾಥ್ ಸಿಂಗ್, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅರವಿಂದ್ ಅವರು ಭೇಟಿ ಮಾಡಿ ಮಾತುಕತೆ ನಡೆಸಿ ಬಂದಿದ್ದಾರೆ.
ಅರವಿಂದ್ ಕೇಜ್ರಿವಾಲ್ ಅವರು ಒಪ್ಪಲಿ, ಬಿಡಲಿ ನಾವು ನಮ್ಮ ಕರ್ತವ್ಯವನ್ನು ನಿರ್ವಹಿಸಬೇಕಾಗುತ್ತದೆ. ಅವರಿಗೆ ಝಡ್ ಪ್ಲಸ್ ಸೆಕ್ಯುರಿಟಿ ನೀಡಲಾಗುತ್ತದೆ ಎಂದು ವಿಶೇಷ ಆಯುಕ್ತ (ಸೆಕ್ಯುರಿಟಿ) ಎಸ್.ಬಿ. ಕೆ ಸಿಂಗ್ ಅವರು ದೆಹಲಿ ಚುನಾವಣೆ ಫಲಿತಾಂಶ ಹೊರ ಬಿದ್ದ ತಕ್ಷಣ ಹೇಳಿರುವುದನ್ನು ಇಲ್ಲಿ ಸ್ಮರಿಸಬಹುದು.
ಝಡ್ ಪ್ಲಸ್ ಕೆಟಗೆರಿ: ಈ ಕೆಟಗರಿಯಲ್ಲಿ 36 ನ್ಯಾಷನಲ್ ಸೆಕ್ಯುರಿಟಿ ಗಾರ್ಡ್ ಕಮಾಂಡೋಗಳಿರುತ್ತಾರೆ. ಎಲ್ಲರ ಕೈಯಲ್ಲೂ ಎಂಪಿ5 ಗನ್ಸ್, ಅತ್ಯಾಧುನಿಕ ಸಂವಹನ ಸಾಧನಗಳಿರುತ್ತದೆ. ಮಾರ್ಷಲ್ ಆರ್ಟ್ಸ್ ಕಲಿತ ಕಮಾಂಡೋಗಳು ಸದ್ಯಕ್ಕೆ 17ಕ್ಕೂ ಅಧಿಕ ವಿಐಪಿಗಳಿಗೆ ರಕ್ಷಣೆ ನೀಡುತ್ತಿದ್ದಾರೆ.(ಪಿಟಿಐ)












Click it and Unblock the Notifications