• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚೀನಾ ವಿರುದ್ಧ ಹೋರಾಡಿ ಹುತಾತ್ಮರಾದ ಹಿಮಾಚಲದ 'ಅಂಕುಶ್' ಠಾಕೂರ್

|

ಹಮೀರ್‌ಪುರ, ಜೂನ್ 17: ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆದ ಘರ್ಷಣೆಯಲ್ಲಿ 21 ವರ್ಷದ ಅಂಕುಶ್ ಠಾಕೂರ್ ಹುತಾತ್ಮರಾಗಿದ್ದಾರೆ. ಹಿಮಾಚಲ ಪ್ರದೇಶದ ಹಮೀರ್‌ಪುರ ಜಿಲ್ಲೆಯ ಕಡೋಹ್ತಾ ಗ್ರಾಮದ ಯೋಧರ ಕುಟುಂಬದಲ್ಲಿ ಜನಿಸಿದ್ದ ಅಂಕುಶ್ ಸಾವು ಇಡೀ ಗ್ರಾಮವನ್ನು ಶೋಕಸಾಗರದಲ್ಲಿ ಮುಳುಗಿಸಿದೆ.

   ಗಾಲ್ವಾನ್ ಘರ್ಷಣೆಯಲ್ಲಿ ಸತ್ತ ಚೀನಾ ಸೈನಿಕರ ಲೆಕ್ಕ ಕೊಟ್ಟ ಅಮೇರಿಕಾ | Oneindia Kannada

   ಅಂಕುಶ್ ಠಾಕೂರ್ ತಂದೆ ಅನಿಲ್ ಠಾಕೂರ್ ಹಾಗೂ ಅವರ ಅಜ್ಜ ಸಹ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಅಂಕುಶ್ ಠಾಕೂರ್ ಆ ಕುಟುಂಬದ ಮೂರನೇ ತಲೆಮಾರಿನ ಯೋಧ. ಹುತಾತ್ಮ ಯೋಧನ ಸಹೋದರ ಈಗ ಆರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.

   'ನಿಮ್ಮ ತ್ಯಾಗವನ್ನು ದೇಶ ಎಂದಿಗೂ ಮರೆಯುವುದಿಲ್ಲ'- ರಾಜನಾಥ್ ಸಿಂಗ್

   2018 ರಲ್ಲಿ ಸೈನ್ಯಕ್ಕೆ ಸೇರ್ಪಡೆಯಾದ ಅಂಕುಶ್ ಠಾಕೂರ್ 10 ತಿಂಗಳ ಹಿಂದೆ ಫೈಜಾಬಾದ್‌ನಲ್ಲಿ ತರಬೇತಿ ಮುಗಿಸಿ, ನಂತರ ಪಂಜಾಬ್ ರೆಜಿಮೆಂಟ್‌ಗೆ ಸೇರಿಕೊಂಡರು.

   ಚೀನಾದೊಂದಿಗೆ ಸೋಮವಾರ ರಾತ್ರಿ ನಡೆದ ಘ‍ರ್ಷಣೆಯಲ್ಲಿ 20 ಭಾರತೀಯ ಸೈನಿಕರು ಸಾವನ್ನಪ್ಪಿದ್ದರು. ಈ ಪೈಕಿ ಅಂಕುಶ್ ಠಾಕೂರ್ ಸಹ ಒಬ್ಬರು. ಅಂಕುಶ್ ಸಾವಿನ ಸುದ್ದಿ ಮನೆಯವರಿಗೆ ಫೋನ್ ಮೂಲಕ ತಿಳಿಸಲಾಯಿತು. ಈ ಸುದ್ದಿ ಹೊರಬೀಳುತ್ತಿದ್ದಂತೆ ಹಮೀರ್‌ಪುರ ಜಿಲ್ಲೆ ನೋವಿನ ಮನೆ ಆಗಿದೆ.

   ಭಾರತ-ಚೀನಾ ಘರ್ಷಣೆ: ಚೈನೀಸ್ ಸೈನಿಕರ ಸಾವಿನ ಲೆಕ್ಕ ನೀಡಿದ ಯುಎಸ್

   ಕೇಂದ್ರ ಸೇನೆಯ ಜೊತೆ ಭೋರಂಜ್‌ನ ಉಪ-ವಿಭಾಗೀಯ ಅಧಿಕಾರಿ ಅಮಿತ್ ಕುಮಾರ್ ಸಂಪರ್ಕದಲ್ಲಿದ್ದು, ಅಂಕುಶ್ ಠಾಕೂರ್ ಅವರ ಪಾರ್ಥಿವ ಶರೀರದ ಅವಶೇಷಗಳು ಇಂದು ಸಂಜೆ ವೇಳೆ ಸ್ವಗ್ರಾಮ ತಲುಪಲಿದೆ ಎಂದು ಮಾಹಿತಿ ನೀಡಿದ್ದಾರೆ.

   English summary
   Jawan army Sepoy Ankush Thakur from Himachal Pradesh killed in India-China clash at Galwan Valley.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X