ಸರ್ಕಾರ ರಚನೆ ಬಗ್ಗೆ ಜನಾಭಿಪ್ರಾಯ ಕೇಳಿದ ಕೇಜ್ರಿವಾಲ್

ನವದೆಹಲಿ, ಡಿ. 17 : ದೆಹಲಿ ಸರ್ಕಾರ ರಚನೆ ಕರಸತ್ತು ಮುಂದುವರೆದಿದ್ದು, ಆಮ್ ಆದ್ಮಿ ಪಕ್ಷ ಸರ್ಕಾರ ರಚಿಸಲು ಇತರ ಪಕ್ಷಗಳ ಬೆಂಬಲ ಪಡೆಯಲು ಜನಾಭಿಪ್ರಾಯ ಪಡೆಯಲು ಮುಂದಾಗಿದೆ. ಈ ಕುರಿತು ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಜನರ ಅಭಿಪ್ರಾಯ ಸಂಗ್ರಹಣೆ ನಂತರ ಅಂತಿಮ ನಿರ್ಧಾರ ಪ್ರಕಟಿಸುತ್ತೇವೆ ಎಂದು ಮಂಗಳವಾರ ಹೇಳಿದ್ದಾರೆ.

ದೆಹಲಿಯಲ್ಲಿ ಸರ್ಕಾರ ರಚಿಸುವ ಕುರಿತು ಚರ್ಚಿಸಲು ಮಂಗಳವಾರ ಆಮ್ ಆದ್ಮಿ ಪಕ್ಷದ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿತ್ತು. ಸಭೆಯ ನಂತರ ಮಾತನಾಡಿದ ಅರವಿಂದ್ ಕೇಜ್ರಿವಾಲ್, ನಾವು ಜವಾಬ್ದಾರಿಯಿಂದ ನುಣುಚಿಕೊಳ್ಳಿತ್ತಿಲ್ಲ. ಸರ್ಕಾರ ರಚಿಸಲು ನಾವು ಸಿದ್ಧವಾಗಿದ್ದು, ಇತರ ಪಕ್ಷಗಳ ಬೆಂಬಲ ಪಡೆಯುವ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಲಿದ್ದೇವೆ ಎಂದು ತಿಳಿಸಿದರು. [ಅರವಿಂದ್ ಹದಿನೆಂಟು ಷರತ್ತು!]

Arvind Kejriwal

ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷ ಆಮ್ ಆದ್ಮ ಪಕ್ಷಕ್ಕೆ ಬೆಂಬಲ ನೀಡುವುದಾದದರೆ ನಮ್ಮ ಷರತ್ತುಗಳಿಗೆ ಒಪ್ಪಿಗೆ ನೀಡಬೇಕೆಂದು ತಿಳಿಸಿದ್ದೆವು. ನಾವು ಹಾಕಿದ 18 ಷರತ್ತುಗಳಿಗೆ ಬಿಜೆಪಿ ಯಾವುದೇ ಉತ್ತರ ನೀಡಿಲ್ಲ. ಕಾಂಗ್ರೆಸ್ ಕೇವಲ 16 ಷರತ್ತುಗಳಿಗೆ ಮಾತ್ರ ಉತ್ತರ ನೀಡಿದೆ. ಆದ್ದರಿಂದ ಪಕ್ಷಗಳ ಬೆಂಬಲ ಪಡೆಯಲು ಜನಾಭಿಪ್ರಾಯ ಪಡೆಯಲು ಮುಂದಾಗಿದ್ದೇವೆ ಎಂದು ಕೇಜ್ರಿವಾಲ್ ಹೇಳಿದರು. [ರಾಷ್ಟ್ರಪತಿ ಆಡಳಿತ ಹೇರಲು ಸೂಚನೆ]

ಎಸ್ಎಂಎಸ್, ಪತ್ರದ ಮೂಲಕ ಆಮ್ ಆದ್ಮಿ ಪಕ್ಷ ಜನಾಭಿಪ್ರಾಯ ಸಂಗ್ರಹಿಸಲಿದೆ. ಜನರಿಗೆ 25 ಲಕ್ಷ ಪತ್ರಗಳನ್ನು ಬರೆಯುವ ಮೂಲಕ ನಾವು ಅವರ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ ಎಂದು ಕೇಜ್ರಿವಾಲ್ ತಿಳಿಸಿದರು. ಕಾಂಗ್ರೆಸ್ ಪಕ್ಷ ಸರ್ಕಾರ ಬೀಳಿಸುವುದನ್ನು ಚೆನ್ನಾಗಿ ಕಲಿತಿದೆ. ಆದರೆ, ಬೆಂಬಲ ನೀಡಲು ಅವರಿಗೆ ತಿಳಿದಿಲ್ಲ ಎಂದು ಅವರು ಆರೋಪಿಸಿದರು.

ಅರವಿಂದ್ ಕೇಜ್ರಿವಾಲ್ ಅವರ ನೇತೃತ್ವದಲ್ಲಿನ ಆಮ್ ಆದ್ಮಿ ಪಕ್ಷದ ಮೇಲೆ ಸರ್ಕಾರ ರಚನೆ ಮಾಡುವ ಒತ್ತಡವಿದೆ. ಮರು ಚುನಾವಣೆ ನಡೆಸಿ ದೆಹಲಿ ಜನರಿಗೆ ಕಷ್ಟ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಎಎಪಿ, ಕಾಂಗ್ರೆಸ್ ಜತೆ ಸೇರಿ ಸರ್ಕಾರ ನಡೆಸಲು ಮುಂದಾಗಿದೆ. ಆದ್ದರಿಂದಲೇ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಕುರಿತು ಜನಾಭಿಪ್ರಾಯ ಸಂಗ್ರಹಿಸಲು ಮುಂದಾಗಿದೆ.

ದೆಹಲಿ ಸರ್ಕಾರ ರಚನೆ ಬಿಕ್ಕಟ್ಟು ಉಂಟಾಗಿರುವುದರಿಂದ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಬೇಕೆಂದು ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಶಿಫಾರಸು ಮಾಡಿದ್ದಾರೆ. ಬಹುಮತವಿಲ್ಲದ ಕಾರಣ 31 ಸೀಟುಗಳನ್ನು ಪಡೆದುಕೊಂಡಿರುವ ಬಿಜೆಪಿ 70 ಸದಸ್ಯರಿರುವ ದೆಹಲಿ ವಿಧಾನಸಭೆಯಲ್ಲಿ ಸರ್ಕಾರ ರಚಿಸಲು ಅಸಾಧ್ಯವಾಗಿದೆ. ಸದ್ಯ ಕಾಂಗ್ರೆಸ್ ಬೆಂಬಲದೊಂದಿಗೆ 28 ಶಾಸಕರನ್ನು ಹೊಂದಿರುವ ಎಪಿಪಿ ಸರ್ಕಾರ ರಚಿಸಲು ಕಸರತ್ತು ನಡೆಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+