ಮಾತಾಡಲು ಬಿಡಿ, ಭೂಕಂಪ ಏನಂತ ತೋರಿಸ್ತೀನಿ : ರಾಹುಲ್

Posted By:
Subscribe to Oneindia Kannada

ನವದೆಹಲಿ, ಡಿಸೆಂಬರ್ 09 : "ಅಪನಗದೀಕರಣದ ಮೇಲೆ ಚರ್ಚೆ ಮಾಡದೆ ಕೇಂದ್ರ ಸರಕಾರ ಪಲಾಯನ ಮಾಡುತ್ತಿದೆ. ಅವರು ನನಗೆ ಈ ವಿಷಯದ ಮೇಲೆ ಮಾತನಾಡಲು ಅವಕಾಶ ಮಾಡಿಕೊಟ್ಟರೆ ಭೂಕಂಪ ಹೇಗಿರುತ್ತದೆಂದು ತೋರಿಸುತ್ತೇನೆ!"

ಹೀಗೆಂದು ಗುಡುಗಿರುವವರು ಮತ್ತಾರೂ ಅಲ್ಲ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ. ಅಪನಗದೀಕರಣ ಭಾರತದ ಇತಿಹಾಸದಲ್ಲಿಯೇ ದಾಖಲಾದ ಅತೀದೊಡ್ಡ ಹಗರಣ. ಈ ಬಗ್ಗೆ ನಾನು ಲೋಕಸಭೆಯಲ್ಲಿ ಮಾತನಾಡಲು ಇಚ್ಛಿಸುತ್ತೇನೆ. ಅಲ್ಲಿ ಎಲ್ಲವನ್ನೂ ಬಯಲು ಮಾಡುತ್ತೇನೆ ಎಂದು ರಾಹುಲ್ ಅಬ್ಬರಿಸಿ ಬೊಬ್ಬಿರಿದಿದ್ದಾರೆ. [ನಗದು ಬದಲು ಕಾರ್ಡ್ ಬಳಸುವವರಿಗೆ ಭರ್ಜರಿ ರಿಯಾಯಿತಿ]

Demonetisation - Allow me to speak, will show what earthquake is : Rahul Gandhi

ಪ್ರಧಾನ ಮಂತ್ರಿ (ನರೇಂದ್ರ ಮೋದಿ) ಇಡೀ ದೇಶದಲ್ಲಿ ಭಾಷಣ ಬಿಗಿಯುತ್ತಿದ್ದಾರೆ. ಆದರೆ, ಲೋಕಸಭೆಗೆ ಬರಲು ಹೆದರುತ್ತಿದ್ದಾರೆ. ಇಷ್ಟೊಂದು ಹೆದರಿಕೆ ಏಕೆ? ಎಂದು ಅಪನಗದೀಕರಣ ಯಜ್ಞ ಶುರುವಾಗಿ ಒಂದು ತಿಂಗಳು ಸಂದಿರುವ ಸಂದರ್ಭದಲ್ಲಿ ಶುಕ್ರವಾರ ಮಾಧ್ಯಮದೆದಿರು ರಾಹುಲ್ ಪ್ರಶ್ನಿಸಿದ್ದಾರೆ. [ಟ್ವಿಟ್ಟರಲ್ಲಿ ಅಪಹಾಸ್ಯಕ್ಕೀಡಾಗ ರಾಹುಲ್ 'ಭೂಕಂಪ'ದ ಮಾತು]

ಕಳೆದ ಒಂದು ತಿಂಗಳಿಂದ ಅಪನಗದೀಕರಣದ ಮೇಲೆ ಚರ್ಚೆ ಆಗಲೆಂದು ಬಯಸುತ್ತಿದ್ದೇವೆ. ಅವಕಾಶ ಕೊಟ್ಟದರೂ ನೋಡಲಿ 'ದೂದ್ ಕಾ ದೂದ್, ಪಾನಿ ಕಾ ಪಾನಿ' ಆಗೇ ಆಗುತ್ತದೆ, ನೋಡ್ತಿರಿ ಬೇಕಾದ್ರೆ ಎಂದು ಆಡಳಿತ ಪಕ್ಷಕ್ಕೆ ರಾಹುಲ್ ಗಾಂಧಿ ಸವಾಲು ಎಸೆದಿದ್ದಾರೆ. [ಕೋಟ್ಯಂತರ ರುಪಾಯಿ ನೋಟು ಬದಲಾವಣೆ ದಂಧೆ ನಡೆದದ್ದು ಹೀಗೆ]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Govt running away from debate on Demonetisation. If they allow me to speak then you will see what an earthquake will come : Rahul Gandhi has challenged the ruling party and Narendra Modi to allow him to speak on note ban. Will they allow him to speak?
Please Wait while comments are loading...