ಯದುವೀರ್ ಒಡೆಯರ್ ಯದುವಂಶದ 27ನೇ ಅರಸ
ಮೈಸೂರು, ಫೆ. 23 : ಯದುವೀರ ಗೋಪಾಲರಾಜ ಅರಸ್ ದತ್ತು ಸ್ವೀಕಾರದ ವಿಧಿ ವಿಧಾನಗಳು ಮೈಸೂರು ಅರಮನೆಯಲ್ಲಿ ಮುಕ್ತಾಯಗೊಂಡಿವೆ. ಇಂದು ಮಧ್ಯಾಹ್ನ 1.20ರಿಂದ 1.50ರ ಮಿಥುನ ಲಗ್ನದಲ್ಲಿ ದತ್ತು ಸ್ವೀಕಾರ ಸಮಾರಂಭ ನಡೆದಿದೆ.
ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಸಹೋದರಿ ಗಾಯಿತ್ರಿ ದೇವಿಯವರ ಮೊಮ್ಮಗ ಯದುವೀರ ಅರಸ್ ಮೈಸೂರು ಸಂಸ್ಥಾನದ ಉತ್ತರಾಧಿಕಾರಿಯಾಗಲಿದ್ದು, ಇಂದು ದತ್ತು ಸ್ವೀಕಾರ ಕಾರ್ಯಕ್ರಮ ಮುಕ್ತಾಯಗೊಂಡಿದೆ. ಯದುವೀರ ಗೋಪಾಲರಾಜ ಅರಸ್ ಗಾಯಿತ್ರಿದೇವಿಯವರ ಪುತ್ರಿ ತ್ರಿಪುರಸುಂದರಿ ದೇವಿ-ಸ್ವರೂಪ್ ಆನಂದ್ ಗೋಪಾಲರಾಜ ಅರಸ್ ದಂಪತಿಗಳ ಪುತ್ರ. [ಯದುವೀರ ಅರಸ್ ಪರಿಚಯ]
ಸಮಯ 3.31 : ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌ಪಟ್ಟಾಭಿಷೇಕ ಮಹೋತ್ಸವ ಮೇ ತಿಂಗಳಿನಲ್ಲಿ ನಡೆಯುವ ಸಾಧ್ಯತೆ ಇದೆ. [ಮೈಸೂರು ಯದುವಂಶ ಒಡೆಯರ್ ವಂಶಾವಳಿ]
ಸಮಯ 3.05 : ದತ್ತು ಸ್ವೀಕಾರ ಸಮಾರಂಭದ ಬಳಿಕ ಕಾಗದ ಪತ್ರಗಳಿಗೆ ಸಹಿ ಹಾಕುವ ಮೂಲಕ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗಿದೆ. [ದತ್ತು ಸ್ವೀಕಾರ ಸಮಾರಂಭದ ಚಿತ್ರಗಳು]
ಸಮಯ 2.26 : ಯದುವೀರ ಅರಸ್ ದತ್ತು ಸ್ವೀಕಾರ ಸಮಾರಂಭ ಮುಗಿದ ಬಳಿಕ ಅವರ ಹೆಸರನ್ನು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಎಂದು ಮರು ನಾಮಕರಣ ಮಾಡಲಾಗಿದೆ.
ಸಮಯ 2 ಗಂಟೆ : ಯದುವೀರ ಗೋಪಾಲರಾಜ ಅರಸ್ ದತ್ತು ಸ್ವೀಕಾರ ಸಮಾರಂಭ ಮುಕ್ತಾಯಗೊಂಡಿದ್ದು, ಪರಕಾಲ ಶ್ರೀಗಳ ಪಾದಪೂಜೆ ನಡೆಯುತ್ತಿದೆ.
ಸಮಯ 1.30 : ಅರಮನೆಗೆ ಪರಕಾಲ ಮಠದ ಶ್ರೀಗಳ ಆಗಮನ
ಸಮಯ 01.23 : ತ್ರಿಪುರ ಸುಂದರಿ ದೇವಾಲಯದ ಅರ್ಚಕ ಮದಹೇವಪ್ರಸಾದ್ ಸೇರಿ 40ಕ್ಕೂ ಪುರೋಹಿತರು ಪೂಜೆಗಳನ್ನು ಮಾಡುತ್ತಿದ್ದಾರೆ.
ಸಮಯ 1 ಗಂಟೆ : ಕಲ್ಯಾಣ ಮಂಟಪಕ್ಕೆ ಯದುವೀರ ಅರಸ್ ಆಗಮನ

ಸಮಯ 11 ಗಂಟೆ : ಗಣಪತಿ ಪೂಜೆ, ಹೋಮ ಅಂಬಾ ವಿಲಾಸ ಅರಮನೆಯಲ್ಲಿ ನಡೆಯುತ್ತಿದೆ. ಪಟ್ಟದ ಆನೆ, ಕುದುರೆಗಳನ್ನು ಸಿಂಗರಿಸಿ ದತ್ತು ಸ್ವೀಕಾರ ಸಮಾರಂಭಕ್ಕೆ ಕರೆತರಲಾಗಿದೆ.
ಸಮಯ 10 ಗಂಟೆ : ದತ್ತು ಸ್ವೀಕಾರದ ಬಳಿಕ ಯದುವೀರ್ ಗೋಪಾಲರಾಜ ಅರಸ್ ಅವರ ಹೆಸರನ್ನು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಎಂದು ಮರುನಾಮಕರಣ ಮಾಡಲಾಗುತ್ತದೆ.
ಸಮಯ 9 ಗಂಟೆ : ಕೋಡಿ ಸೋಮೇಶ್ವರ ದೇವಾಲಯದಿಂದ ದೇವರು ಕರೆ ತರಲು ಅರಮನೆಯಿಂದ ಮೆರವಣಿಗೆ ಸಾಗಿದೆ.
ಸಮಯ 8.30 : ರಾಣಿ ಪ್ರಮೋದಾದೇವಿ ಅವರ ನೇತೃತ್ವದಲ್ಲಿ ಅಂಬಾ ವಿಲಾಸ ಅರಮನೆಯಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ಸಿಕ್ಕಿದೆ.
ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ : ಸೋಮವಾರ ಮುಂಜಾನೆ 5 ಗಂಟೆಯಿಂದಲೇ ಪುರೋಹಿತರು ಹಾಗೂ ಜೋಯಿಸರ ಮೂರು ತಂಡಗಳು ಶುದ್ಧೀಕರಣ ಚಟುವಟಿಕೆಗಳೊಂದಿಗೆ ದತ್ತು ಸ್ವೀಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಮಧ್ಯಾಹ್ನ 1.20ರಿಂದ 1.50ರ ಮಿಥುನ ಲಗ್ನದಲ್ಲಿ ದತ್ತು ಸ್ವೀಕಾರ ಕಾರ್ಯಕ್ರಮ ನಡೆದಿದೆ. 300 ಮಂದಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. [ಮೈಸೂರಿಗರಿಗೆ ಯದುವೀರ ಅರಸ್ ಕೃತಜ್ಞತೆ]














Click it and Unblock the Notifications