ಮೈಸೂರಿಗೆ ಆಗಮಿಸಿದ ತುಂಬುಗರ್ಭಿಣಿ ತ್ರಿಷಿಕಾ ಕುಮಾರಿ
ಮೈಸೂರು, ಸೆಪ್ಟೆಂಬರ್ 17 : ಮೈಸೂರು ದಸರಾದ ಖಾಸಗಿ ದರ್ಬಾರ್‌ನಲ್ಲಿ ಪಾಲ್ಗೊಳ್ಳಲು ರಾಜಕುಮಾರಿ ತ್ರಿಷಿಕಾ ಕುಮಾರಿ ಒಡೆಯರ್ ಇಂದು ಮೈಸೂರಿಗೆ ಆಗಮಿಸಿದರು. ಗರ್ಭಿಣಿಯಾದ ಬಳಿಕ ಇದೇ ಮೊದಲ ಬಾರಿಗೆ ತ್ರಿಷಿಕಾ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡರು.
ಬೆಂಗಳೂರಿನಲ್ಲಿದ್ದ ತ್ರಿಷಿಕಾ ಕುಮಾರಿ ಅವರು ಭಾನುವಾರ ರೈಲಿನಲ್ಲಿ ಮೈಸೂರಿಗೆ ಆಗಮಿಸಿದರು. ಶನಿವಾರ ಬೆಂಗಳೂರಿಗೆ ತೆರಳಿದ್ದ ಯದುವೀರ ಒಡೆಯರ್ ಅವರು ಇಂದು ಬೆಳಗ್ಗೆ ತ್ರಿಷಿಕಾ ಅವರನ್ನು ಕರೆದುಕೊಂಡು ಬಂದರು.

ಗರ್ಭಿಣಿಯಾದ ಕಾರಣ ಕಾರಿನಲ್ಲಿ ಆಗಮಿಸದೇ ರೈಲಿನಲ್ಲಿ ಮೈಸೂರಿಗೆ ಆಗಮಿಸಿದರು. ಮೈಸೂರು ರೈಲ್ವೆ ನಿಲ್ದಾಣದಿಂದ ಕಾರಿನಲ್ಲಿ ಅರಮನೆಗೆ ತೆರಳಿದರು. ಗರ್ಭಿಣಿಯಾದ ಬಳಿಕ ಇಂದು ಮೊದಲ ಬಾರಿ ತ್ರಿಷಿಕಾ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡರು.
ರಾಜಮನೆತನದ ಸೊಸೆಯನ್ನು ರೈಲು ನಿಲ್ದಾಣದಲ್ಲಿ ಕಂಡು ಜನರು ಪುಳಕಿತರಾದರು. ಯದವಂಶದ ಮಹಾರಾಜ ಯದುವೀರ್ ರೈಲ್ವೆ ನಿಲ್ದಾಣದಿಂದ ಯದುವೀರ್ ಅವರ ಜೊತೆ ತ್ರಿಷಿಕಾ ಕಾರಿನಲ್ಲಿ ಮೈಸೂರು ಅರಮನೆಯ ಖಾಸಗಿ ನಿವಾಸಕ್ಕೆ ತೆರಳಿದರು.
2017ನೇ ಸಾಲಿನ ದಸರಾಕ್ಕೆ ಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿದ್ದು, ಸೆ.21ರಿಂದ 30ರ ತನಕ ಈ ಬಾರಿಯ ದಸರಾ ನಡೆಯಲಿದೆ.












Click it and Unblock the Notifications