ಮೈಸೂರಿನಲ್ಲಿ ವಿಪ್ರೋ ಬಿಪಿಓ, 750 ಉದ್ಯೋಗ ಸೃಷ್ಟಿ
ಮೈಸೂರು, ಜುಲೈ 16 : ವಿಪ್ರೋ ಈ ವರ್ಷದ ಅಂತ್ಯದಲ್ಲಿ ಮೈಸೂರಿನಲ್ಲಿ ಬಿಪಿಓ ಆರಂಭಿಸುವ ಸಾಧ್ಯತೆ ಇದೆ. ಇದರಿಂದ ಸುಮಾರು 750 ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ.
ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. 'ಕೇಂದ್ರ ಸರ್ಕಾರದ ಬಿಪಿಓ ಪ್ರಮೋಶನ್ ಸ್ಕೀಮ್‌ನ ಅಡಿ ಮೈಸೂರಿನಲ್ಲಿ ವಿಪ್ರೋ ಬಿಪಿಓ ಆರಂಭಿಸಲಿದೆ. 2018ರ ಅಂತ್ಯದ ವೇಳೆಗೆ ಘಕಟ ಸ್ಥಾಪನಗೆಯಾಗಲಿದೆ' ಎಂದ ಹೇಳಿದ್ದಾರೆ.
ವಿಪ್ರೋ ಬಿಪಿಓನಿಂದ ಸುಮಾರು 750 ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ. ವಿಪ್ರೋ ನಂತರ ಬೇರೆ-ಬೇರೆ ಕಂಪನಿಗಳು ಮೈಸೂರಿನಲ್ಲಿ ಬಂಡವಾಳ ಹೂಡಿಕೆ ಮಾಡುವ ಸಾಧ್ಯತೆ ಇದೆ.

ಮೈಸೂರಿನಲ್ಲಿ ಈಗಾಗಲೇ ಇನ್ಫೋಸಿಸ್, ಎಲ್ ಅಂಡ್ ಟಿ ಮತ್ತು ವಿಪ್ರೋ ಕಂಪನಿಗಳಿವೆ. ಬೆಂಗಳೂರು-ಮೈಸೂರು 6 ಪಥದ ರಸ್ತೆ, ಮೈಸೂರು ವಿಮಾನ ನಿಲ್ದಾಣ ಇನ್ನಷ್ಟು ಅಭಿವೃದ್ಧಿಯಾದರೆ ಮತ್ತಷ್ಟು ಕಂಪನಿಗಳು ನಗರದಲ್ಲಿ ಬಂಡವಾಳ ಹೂಡಿಕೆ ಮಾಡವ ಸಾಧ್ಯತೆ ಇದೆ.
ಐಟಿ ಕಂಪನಿಗಳು ಬೆಂಗಳೂರು ಹೊರತು ಪಡಿಸಿ ರಾಜ್ಯದ 2 ನೇ ದರ್ಜೆಯ ನಗರಗಳಲ್ಲಿಯೂ ಕಾರ್ಯಾರಂಭ ಮಾಡಬೇಖು ಎಂಬುದು ಕರ್ನಾಟಕ ಸರ್ಕಾರದ ಉದ್ದೇಶವಾಗಿದೆ. ಬೇರೆ ನಗರದಲ್ಲಿ ಕಂಪನಿ ಆರಂಭಿಸಲು ಸರ್ಕಾರ ಹಲವು ವಿನಾಯಿತಿಗಳನ್ನು ನೀಡುತ್ತಿದೆ.












Click it and Unblock the Notifications