ಸುಳ್ಳುಗಾರ ಬಿಎಸ್ ವೈ ಬಾಯಲ್ಲಿ ಬೇರೆ ಮಾತು ಬರಲ್ಲ ಎಂದ ಸಿದ್ದರಾಮಯ್ಯ

ಮೈಸೂರು, ಸೆಪ್ಟೆಂಬರ್ 20: ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಪ್ರಶ್ನೆ ಕೇಳಿದೆ, ನಮ್ಮ ವಕೀಲರು ಉತ್ತರ ಕೊಡುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಇಲ್ಲಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಯನ್ನು ವಿರೋಧಿಸಿದ್ದೇವೆ. ನಾರಿಮನ್ ಜೊತೆ ಮಾತನಾಡುತ್ತೇನೆ. ಈ ಬಾರಿ ಸಂಕಷ್ಟ ಸೂತ್ರದ ಅನ್ವಯ ಕೂಡ ನೀರು ಬಿಡಲಾಗಿಲ್ಲ. ಕೆಆರ್ ಎಸ್ ತುಂಬಿಲ್ಲ. ಕಬಿನಿ ತುಂಬುವ ಹಂತಕ್ಕೆ ಬಂದರೂ ಹೆಚ್ಚು ನೀರು ಲಭ್ಯವಿಲ್ಲ ಎಂದರು.

What can we expect from liar BSY: CM Siddaramaiah

ತಮ್ಮ ವಿರುದ್ಧ ಯಡಿಯೂರಪ್ಪ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಯಾವ ದಾಖಲೆ ಬೇಕಾದರೂ ಬಿಡುಗಡೆ ಮಾಡಲಿ, ಹೆದರಲ್ಲ. ಯಡಿಯೂರಪ್ಪರನ್ನು ನಿನ್ನೆ ಮೊನ್ನೆಯಿಂದ ನೋಡಿಲ್ಲ, ಅವರು ಸುಳ್ಳುಗಾರ ಎಂದು ಹೇಳಿದರು.

ವೈಭವದ ದಸರಾ ವಿಶೇಷ ಪುಟ

ತಮ್ಮನ್ನು ಹಸಿಸುಳ್ಳುಗಾರ ಎಂದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಸುಳ್ಳುಗಾರನ ಬಾಯಲ್ಲಿ ಬೇರೆ ಮಾತು ಬರಲ್ಲ. ಯಡಿಯೂರಪ್ಪ ಇಲ್ಲಿವರೆಗೆ ಹೇಳಿದ ಯಾವ ವಿಚಾರವೂ ನಿಜವಾಗಿಲ್ಲ. ಇನ್ನು ಸಚಿವರ ಪುತ್ರರು, ಸಂಬಂಧಿಗಳಿಗೆ ಟಿಕೆಟ್ ನಿರಾಕರಿಸಲಾಗುವುದು ಎಂಬ ವಿಚಾರಗಳೆಲ್ಲ ಕೇವಲ ಊಹಾಪೋಹ ಎಂದರು.

ನಮ್ಮ ಸರಕಾರವು ಯಾವುದೇ ಪೋನ್ ಕದ್ದಾಲಿಕೆ ಮಾಡಿಲ್ಲ. ಅಶೋಕ್ ಸುಖಾಸುಮ್ಮನೆ ಆರೋಪ ಮಾಡಿದ್ದಾರೆ. ತಕ್ಷಣ ಅದರ ಬಗ್ಗೆ ತನಿಖೆ ನಡೆಸಲು ಸಾಧ್ಯವಿಲ್ಲ. ಅಶೋಕ್ ತಾವು ಮಾಡುತ್ತಿರುವ ಆರೋಪಕ್ಕೆ ಏನಾದರೂ ಸಾಕ್ಷಿ ಕೊಟ್ಟಿದ್ದಾರಾ? ಮೋದಿ ಪ್ರಧಾನ ಮಂತ್ರಿ ಆದ ಮೇಲೆ ಎಲ್ಲದಕ್ಕೂ ಸಿಬಿಐ ತನಿಖೆಗೆ ಒತ್ತಾಯಿಸುವುದು ಬಿಜೆಪಿ ಚಾಳಿಯಾಗಿದೆ ಎಂದು ವ್ಯಂಗ್ಯವಾಡಿದರು.

Photos : 407ನೇ ಮೈಸೂರು ದಸರಾಗೆ ವೈಭವದ ಚಾಲನೆ

ಯಾರಿಗೆ ಕ್ಷೇತ್ರ ಇಲ್ಲವೋ ಅಂತಹವರು ಬೇರೆ ಕಡೆ ಕ್ಷೇತ್ರ ಹುಡುಕುತ್ತಿದ್ದಾರೆ. ಯಡಿಯೂರಪ್ಪ ಶಿಕಾರಿಪುರವನ್ನು ಮಗನಿಗೆ ಬಿಟ್ಟುಕೊಡಬೇಕಾಗಿದೆ. ಜನ ಅಭಿಮಾನದಿಂದ ರಾಜ್ಯದ ಇತರೆಡೆ ಸ್ಪರ್ಧಿಸಲು ಕೇಳುತ್ತಾರೆ. ನಾನು ಈಗಲೂ ಚಾಮುಂಡೇಶ್ವರಿ ಕ್ಷೇತ್ರದಲ್ಲೇ ನಿಲ್ಲುವೆ. ಮುಂದಿನ 5 ವರ್ಷವೂ ನಾನೇ ದಸರಾ ಉದ್ಘಾಟನೆ ಮಾಡುತ್ತೇನೆ.

ಇಂದಿನಿಂದ ಮೈಸೂರು- ಚೆನ್ನೈ ಮಧ್ಯೆ ವಿಮಾನ ಯಾನ ಆರಂಭ ಆಗುತ್ತದೆ. ಮೊದಲೇ ನಾನು ಕಾರ್ಯಕ್ರಮಕ್ಕೆ ಬರಲ್ಲ ಎಂದು ತಿಳಿಸಿದ್ದೆ ಎಂದರು ಸಿದ್ದರಾಮಯ್ಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+