ಅಂಬಾರಿ ಹೊರುವ ಅರ್ಜುನನಿಗೆ ಭಾರ ಹೊರುವ ತಾಲೀಮು: ಸಾಥ್ ಕೊಟ್ಟ ವಿಜಯ, ಕಾವೇರಿ, ಚೈತ್ರಾ

Recommended Video

      Mysore Dasara 2018 : ಜಂಬೂ ಸವಾರಿ ಹೊರಲು ಅರ್ಜುನನ ತಯಾರಿ ಜೋರು

      ಮೈಸೂರು, ಅಕ್ಟೋಬರ್.03: ಜಂಬೂಸವಾರಿ ಮೆರವಣಿಗೆಯಲ್ಲಿ 750 ಕೆ.ಜಿ.ತೂಕದ ಚಿನ್ನದ ಅಂಬಾರಿ ಹೊತ್ತು ಲಕ್ಷಾಂತರ ಜನರ ಗೌಜು-ಗದ್ದಲದ ನಡುವೆಯೇ ಗಜಗಾಂಭೀರ್ಯದಿಂದ ಸಾಗುವ ಅರ್ಜುನನಿಗೆ ಇದೀಗ ಮರದ ಅಂಬಾರಿ ಹೊರುವ ತಾಲೀಮು ನಡೆಸಲಾಗುತ್ತಿದೆ.

      ದಸರಾ ಜಂಬೂ ಸವಾರಿ ದಿನ ಸಮೀಪಿಸುತ್ತಿದ್ದು, ಅರ್ಜುನನಿಗೆ 300 ಕೆ.ಜಿ. ತೂಕದ ಮರದ ಅಂಬಾರಿ ಹಾಗೂ 300 ಕೆಜಿ ತೂಕದ ಮರಳು ಮೂಟೆ ಹೊರಿಸಿ ಅಂಬಾರಿ ಹೊರುವ ತಾಲೀಮು ನಡೆಸಲಾಗುತ್ತಿದೆ.

      ಮೈಸೂರಿನ ಅರಮನೆ ಆವರಣದಲ್ಲಿ ಅರ್ಜುನನ ಬೆನ್ನಮೇಲೆ ಮರದ ಅಂಬಾರಿ ಕಟ್ಟಿದ ನಂತರ ಜಂಬೂಸವಾರಿ ದಿನ ಮುಖ್ಯಮಂತ್ರಿ ಪುಷ್ಪಾರ್ಚನೆ ಮಾಡುವ ಜಾಗಕ್ಕೆ ಆನೆಯನ್ನು ಕರೆತಂದು ನಿಲ್ಲಿಸಿ, ಅಲ್ಲಿಂದ ಬಲರಾಮ ದ್ವಾರದ ಮೂಲಕ ಹೊರಬಂದು ಬನ್ನಿಮಂಟಪದವರೆಗೆ ತಾಲೀಮು ನಡೆಸಲಾಯಿತು.

      Weight-bearing workout is being conducted for Arjuna

      ಒಟ್ಟು ಅರ್ಜುನ 650 ಕೆಜಿ ತೂಕವನ್ನು ಹೊತ್ತು ಬನ್ನಿಮಂಟಪದತ್ತ ಹೆಜ್ಜೆ ಹಾಕಿದ. ಅರ್ಜುನನಿಗೆ ಹೆಣ್ಣಾನೆಗಳಾದ ವಿಜಯ, ಕಾವೇರಿ, ಚೈತ್ರ ಸಾಥ್ ಕೊಟ್ಟರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+