ಖ್ಯಾತ ಹಿನ್ನೆಲೆ ಗಾಯಕ ವಿಜಯ್ ಪ್ರಕಾಶ್ ತಂದೆ ವಿಧಿವಶ
ಮೈಸೂರು, ಏಪ್ರಿಲ್ 07: ಖ್ಯಾತ ಹಿನ್ನೆಲೆ ಗಾಯಕ ವಿಜಯ್ ಪ್ರಕಾಶ್ ತಂದೆ ಎಲ್.ರಾಮಶೇಷ (72) ಇಂದು ಭಾನುವಾರ ಬೆಳಗ್ಗೆ 5.30ಕ್ಕೆ ನಿಧನರಾದರು. ಕಳೆದ ಒಂದು ವರ್ಷದಿಂದ ಅನಾರೋಗ್ಯಕ್ಕಿಡಾಗಿದ್ದ ರಾಮಶೇಷ ಅವರನ್ನು 5 ದಿನಗಳ ಹಿಂದೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು.
ಮೈಸೂರಿನ ಬೋಗಾದಿಯಲ್ಲಿ ರಾಮಶೇಷ ಅವರ ನಿವಾಸವಿದ್ದು, ಪುತ್ರ ವಿಜಯ್ ಪ್ರಕಾಶ್ ಅಮೇರಿಕಾದಿಂದ ಆಗಮಿಸಬೇಕಿರುವ ಹಿನ್ನಲೆಯಲ್ಲಿ ಮಂಗಳವಾರ ಬೆಳಗ್ಗೆ ಅಂತ್ಯಸಂಸ್ಕಾರ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.

ವಿಜಯ್ ಪ್ರಕಾಶ್ ಅಮೇರಿಕಾದಲ್ಲಿ ಕಾರ್ಯಕ್ರಮ ಅರ್ಧಕ್ಕೆ ಮೊಟುಕುಗೊಳಿಸಿ ತವರಿಗೆ ಆಗಮಿಸುತ್ತಿದ್ದಾರೆ. ಸೋಮವಾರ ವಿಜಯ್ ಪ್ರಕಾಶ್ ಮೈಸೂರಿಗೆ ಆಗಮಿಸುತ್ತಿದ್ದು, ಮೈಸೂರಿನ ಚಾಮುಂಡಿ ಬೆಟ್ಡದ ತಪ್ಪಲಿನ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ವಿಜಯ್ ಪ್ರಕಾಶ್ ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.












Click it and Unblock the Notifications