ಮೈಸೂರಿನ ಆಸ್ಪತ್ರೆಯಲ್ಲಿ ಸಿದ್ಧಾರ್ಥ್ ತಂದೆ: ಮಗನ ಮುಖವನ್ನು ಕೊನೇ ಬಾರಿಯೂ ನೋಡಲಾಗದೆ ಅಪ್ಪನಿಗೆ?
Recommended Video
ಮೈಸೂರು, ಜುಲೈ 31: ಸೋಮವಾರದಿಂದ ಈ ಕ್ಷಣದವರೆಗೂ ರಾಜ್ಯದ ಜನರ ಮಾತಲ್ಲಿ, ಮನದಲ್ಲಿ ಹರಿದಾಡುತ್ತಿರುವ ಹೆಸರು ಒಂದೇ. ಅದು ವಿ.ಜಿ. ಸಿದ್ಧಾರ್ಥ. ಹಲವು ಅನುಮಾನಗಳನ್ನು ಬಿಟ್ಟು ಹೋಗಿರುವ ಕಾಫಿ ಡೇ ಮಾಲೀಕ, ಹೆಸರಾಂತ ಉದ್ಯಮಿ ಸಿದ್ಧಾರ್ಥ್ ಅವರ ಸಾವು ಅರಗಿಸಿಕೊಳ್ಳಲಾಗದು. ಅವರ ಕುಟುಂಬಸ್ಥರು, ಸ್ನೇಹಿತರು, ರಾಜಕಾರಣಿಗಳು, ಸಿದ್ಧಾರ್ಥ್ ಅವರು ಕೆಲಸ ಕೊಟ್ಟ ಸಾವಿರಾರು ನೌಕರರು ಅವರ ಸಾವಿಗೆ ಮರುಗುತ್ತಿದ್ದಾರೆ, ಕಂಬನಿ ಮಿಡಿಯುತ್ತಿದ್ದಾರೆ.
ಆದರೆ ಇಷ್ಟೆಲ್ಲಾ ನಡೆಯುತ್ತಿದ್ದರೂ ಇದಾವುದೂ ಸಿದ್ಧಾರ್ಥ್ ಅವರಿಗೆ ಜನ್ಮ ಕೊಟ್ಟ, ಸಾಕಿ ಸಲಹಿದ ತಂದೆ ಗಂಗಯ್ಯ ಹೆಗ್ಡೆಯವರಿಗೆ ತಿಳಿದಿಲ್ಲ. ಇಂದು ತನ್ನ ಮಗನ ಕೊನೆ ದಿನ ಎಂಬುದೂ ಅವರಿಗೆ ಅರಿವಿಲ್ಲ.
ಹೌದು. ಉದ್ಯಮಿ ಸಿದ್ಧಾರ್ಥ್ ಅವರ ತಂದೆ ಗಂಗಯ್ಯ ಹೆಗ್ಡೆ ಕಳೆದ ಕೆಲವು ದಿನಗಳಿಂದ ಕೋಮಾದಲ್ಲಿದ್ದಾರೆ. ಮೈಸೂರಿನ ಗೋಪಾಲಗೌಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಂಗಯ್ಯ ಹೆಗ್ಡೆ ದಾಖಲಾತಿಯನ್ನು ಆಸ್ಪತ್ರೆ ಸಿಬ್ಬಂದಿ ಗೌಪ್ಯವಾಗಿಟ್ಟಿದ್ದು, ಮಾಧ್ಯಮಗಳಿಗೆ ತಿಳಿಸಿಲ್ಲ. ಗೋಪಾಲಗೌಡ ಆಸ್ಪತ್ರೆ ಮಾಲೀಕರು ಎಸ್.ಎಂ.ಕೃಷ್ಣ ಅವರು ಸಂಬಂಧಿಕರಾಗಿದ್ದು ಇದೇ ಆಸ್ಪತ್ರೆಯಲ್ಲಿ ಅವರನ್ನು ದಾಖಲಿಸಲಾಗಿದೆ.

ಮಾಧ್ಯಮಗಳು ಗಂಗಯ್ಯ ಹೆಗ್ಡೆಯವರ ಆರೋಗ್ಯದ ಕುರಿತು ಮಾಹಿತಿ ಕೇಳಿದರೆ ಸಿಬ್ಬಂದಿ, ಭಾನುವಾರವೇ ಡಿಸ್ಚಾರ್ಜ್ ಆಗಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ ಸಿದ್ಧಾರ್ಥ್ ಅವರ ತಂದೆ ಗಂಗಯ್ಯ ಅವರಿಗೆ ಆಸ್ಪತ್ರೆ ಸಿಬ್ಬಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. ಹೀಗಾಗಿ ಗಂಗಯ್ಯ ಹೆಗಡೆ ಅವರಿಗೆ ವಿಷಯ ತಿಳಿದಿಲ್ಲ, ಜೊತೆಗೆ ಅವರು ಸಿದ್ದಾರ್ಥ್ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲೂ ಸಾಧ್ಯವಿಲ್ಲ.
'ಕಾಫಿ ಕಿಂಗ್' ವಿಜಿ ಸಿದ್ಧಾರ್ಥ ಅವರ ಅತ್ಯಪರೂಪದ ಚಿತ್ರಗಳು
ಕಳೆದ ವಾರವಷ್ಟೇ ಮೈಸೂರಿಗೆ ಬಂದಿದ್ದ ಸಿದ್ದಾರ್ಥ್: ತಂದೆಯ ಆರೋಗ್ಯ ವಿಚಾರಿಸಲು ಸಿದ್ಧಾರ್ಥ್ ಮೈಸೂರಿಗೆ ಆಗಾಗ ಬರುತ್ತಿದ್ದರು. ಕಳೆದ ಭಾನುವಾರ, ಅಂದರೆ ಜುಲೈ 28ರಂದು ಸಹ ಇಲ್ಲಿಗೆ ಬಂದಿದ್ದರು ಎಂದು ಮೂಲಗಳು ತಿಳಿಸಿವೆ.
ಮೈಸೂರಿನ ನಜರ್ ಬಾದ್ ನಲ್ಲಿರುವ ಶಾಂತವೇರಿ ಗೋಪಾಲಗೌಡ ಆಸ್ಪತ್ರೆಯ ಮಾಲೀಕರಾದ ಲೇಟ್ ಡಾ.ವಿಷ್ಣು ಮೂರ್ತಿ ಅವರ ಪತ್ನಿ ಮತ್ತು ಗಂಗಯ್ಯ ಹೆಗ್ಡೆ ಅವರ ಪತ್ನಿ ಸಹೋದರಿಯರಾಗಿದ್ದು, ಸಿದ್ದಾರ್ಥ್ ತಮ್ಮ ತಂದೆ ಗಂಗಯ್ಯ ಹೆಗ್ಡೆ ಅವರನ್ನು ಗೋಪಾಲ ಗೌಡ ಆಸ್ಪತ್ರೆಗೆ ಕಳೆದ ಜೂನ್ 9ರಂದು ದಾಖಲಿಸಿದ್ದರು. ಆಸ್ಪತ್ರೆಯ ವೈದ್ಯರು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡುತ್ತಿದ್ದರು. ಅಂದಿನಿಂದಲೂ ಮೈಸೂರಿಗೆ ಬಂದು ಖಾಸಗಿ ಹೊಟೇಟ್ ನಲ್ಲಿ ವಾಸ್ತವ್ಯ ಹೂಡುತ್ತಿದ್ದರು. ಕಳೆದ ಗುರುವಾರ ಸಿದ್ದಾರ್ಥ್ ಅವರ ಮಾವ ಮಾಜಿ ಮುಖ್ಯ ಮಂತ್ರಿ ಎಸ್.ಎಂ. ಕೃಷ್ಣ, ಪತ್ನಿ ಪ್ರೇಮಾ ಮತ್ತು ಪುತ್ರಿ ಶಾಂಭವಿ ಅವರೊಂದಿಗೆ ಬೀಗರನ್ನು ನೋಡಲು ಮೈಸೂರಿನ ಆಸ್ಪತ್ರೆಗೆ ಬಂದಿದ್ದರು.

ಎಚ್.ಡಿ. ಕೋಟೆಯಲ್ಲಿನ ಸೆರಾಯ್ ರೆಸಾರ್ಟ್ ನಲ್ಲಿ ತಂಗಿದ್ದ ಸಿದ್ದಾರ್ಥ್ ಅವರ ಪತ್ನಿ ಕೂಡ ಮೈಸೂರಿಗೆ ಬಂದು ತಂದೆಯೊಂದಿಗೆ ಮಾವನನ್ನು ಭೇಟಿ ಮಾಡಲು ಬಂದಿದ್ದಾರೆ. ಅತ್ತೆ ಮಾವ ಬಂದಿರುವ ವಿಷಯ ತಿಳಿದ ಸಿದ್ದಾರ್ಥ್ ಕೂಡ ಬೆಂಗಳೂರಿನಿಂದ ಮೈಸೂರಿಗೆ ಆಗಮಿಸಿದ್ದರು. ಎಲ್ಲರನ್ನೂ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು ಎಂದು ತಿಳಿದುಬಂದಿದೆ.











Click it and Unblock the Notifications