ಕೊರೊನಾ ಎಫೆಕ್ಟ್; ಮೈಸೂರಲ್ಲಿ ಶೇ.70 ಇಳಿದಿದೆ ತರಕಾರಿ ಬೆಲೆ
ಮೈಸೂರು, ಮಾರ್ಚ್ 9: ಕೊರೊನಾ ವೈರಸ್ ಮೈಸೂರು ಎಪಿಎಂಸಿಯಲ್ಲಿನ ತರಕಾರಿ ಮಾರುಕಟ್ಟೆಯ ಮೇಲೂ ಪರಿಣಾಮ ಬೀರಿದೆ. ಕೊರೊನಾ ವೈರಸ್ ನಿಂದಾಗಿ ತರಕಾರಿಗಳ ಬೆಲೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ.
ಮಾರ್ಚ್ 5 ರಿಂದ ತರಕಾರಿ ಬೆಲೆಯಲ್ಲಿ ದಿಢೀರ್ ಕುಸಿತ ಕಂಡಿದ್ದು, ಕಳೆದ ನಾಲ್ಕು ದಿನದಿಂದ ಬೆಲೆ ಕಡಿಮೆಯಾಗುತ್ತಿರುವುದನ್ನು ಕಂಡು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ವಾರದ ಹಿಂದೆ ಇದ್ದ ಬೆಲೆಗೂ ಈಗಿನ ಬೆಲೆಗೂ ಶೇಕಡಾ 70% ರಷ್ಟು ಇಳಿಕೆಯಾಗಿದೆ. ಟೊಮೆಟೊ ಕೆ.ಜಿ.ಗೆ 5 ರೂ, ಕೋಸು ಕೆ.ಜಿ.ಗೆ 3ರೂ, ಈರುಳ್ಳಿ 10ರೂ, ಬೆಂಡೆಕಾಯಿ 14ರೂ, ಬದನೆಕಾಯಿ 3ರೂ. ಸೇರಿದಂತೆ ಎಲ್ಲಾ ತರಕಾರಿಗಳ ಬೆಲೆಗಳೂ ಇಳಿಮುಖವಾಗಿದೆ. ಕೊರೊನಾ ವೈರಸ್ ಎಫೆಕ್ಟ್ ನಿಂದ ಅಲರ್ಟ್ ಆದ ಎಪಿಎಂಸಿ, ರೈತರು, ದಲ್ಲಾಳಿಗಳು, ವರ್ತಕರ ಜೊತೆ ಸಭೆ ನಡೆಸಲು ನಿರ್ಧರಿಸಿದ್ದಾರೆ. ನಾಳೆ ಸಭೆ ನಡೆಸಲು ಎಪಿಎಂಸಿ ಅಧ್ಯಕ್ಷ ಕೆ ಪ್ರಭುಸ್ವಾಮಿ ತೀರ್ಮಾನಿಸಿದ್ದಾರೆ ಎನ್ನಲಾಗಿದೆ.












Click it and Unblock the Notifications