ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಧಾನಿ ಸ್ಥಾನಕ್ಕೆ ಮೋದಿ ಅನ್ ಫಿಟ್ : ಪ್ರೊ. ಮಹೇಶ್ ಚಂದ್ರ ಗುರು

|
Google Oneindia Kannada News

ಮೈಸೂರು, ಜನವರಿ 31 : ನಮ್ಮ ದೇಶದ ಬಹುದೊಡ್ಡ ಶತ್ರುವೆಂದರೇ ನರೇಂದ್ರ ಮೋದಿ. ಅವರು ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಜಾರಿಗೆ ತರಬೇಕೆಂದು ಪ್ರಗತಿಪರ ಚಿಂತಕ ಪ್ರೊ. ಮಹೇಶ್ ಚಂದ್ರ ಗುರು ತಿಳಿಸಿದ್ದಾರೆ.

ಗೌರಿ ಹಂತಕರ ಹಿಟ್ ಲಿಸ್ಟ್ ನಲ್ಲಿದ್ದ ಮಹೇಶ್ ಚಂದ್ರ ಗುರು ಸ್ಫೋಟಕ ಸಂದರ್ಶನ ಗೌರಿ ಹಂತಕರ ಹಿಟ್ ಲಿಸ್ಟ್ ನಲ್ಲಿದ್ದ ಮಹೇಶ್ ಚಂದ್ರ ಗುರು ಸ್ಫೋಟಕ ಸಂದರ್ಶನ

ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಆಯೋಜಿಸಿದ್ದ 103ನೇ ತಿದ್ದುಪಡಿ -2019ರ ಮೀಸಲಾತಿ ಕಾಯ್ದೆ ಕಾರಣ ಪರಿಣಾಮಗಳ ಕುರಿತು ದುಂಡು ಮೇಜಿನ ಸಭೆಯಲ್ಲಿ ಅವರು ಮಾತನಾಡಿದರು. ಇದೇ ವೇಳೆ ಕೇಂದ್ರ ಸರ್ಕಾರದ 10% ಮೀಸಲಾತಿ ವಿರೊಧಿಸಿ ಪ್ರಗತಿಪರರು ಅಸಮಾಧಾನ ವ್ಯಕ್ತಪಡಿಸಿದ್ದು, ಪ್ರಧಾನಿ ಮೋದಿ ವಿರುದ್ದ ಪ್ರೊ.ಮಹೇಶ್ ಚಂದ್ರಗುರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರೊ. ಮಹೇಶ್ ಚಂದ್ರ ಗುರು ವಜಾಕ್ಕೆ ರಾಜ್ಯಪಾಲರಿಗೆ ಕರಂದ್ಲಾಜೆ ಪತ್ರ ಪ್ರೊ. ಮಹೇಶ್ ಚಂದ್ರ ಗುರು ವಜಾಕ್ಕೆ ರಾಜ್ಯಪಾಲರಿಗೆ ಕರಂದ್ಲಾಜೆ ಪತ್ರ

ಪ್ರಧಾನಿ ಮೋದಿ ಜನಸಂಖ್ಯೆ ಅಧಾರದ ಮೇಲೆ ಮೀಸಲಾತಿ ಜಾರಿ ತರಲಿ. ನರೇಂದ್ರ ಮೋದಿ ಪ್ರಧಾನಿ ಸ್ಥಾನಕ್ಕೆ ಅನ್ ಫಿಟ್ ಆಗಿದ್ದಾರೆ. ಸಮಾನ ಅವಕಾಶ ಎಲ್ಲರಿಗೂ ಸಿಗಬೇಕು. ಇಷ್ಟು ವರ್ಷ ನಮ್ಮನ್ನಾಳಿದ ಯಾವುದೇ ಪ್ರಧಾನಿ ಸಂವಿಧಾನದ ಮೌಲ್ಯಗಳನ್ನು ನಾಶ ಮಾಡಿಲ್ಲ. ಆದರೆ ಇವತ್ತು ಆರ್ ಎಸ್ಎಸ್ ನ ಹಾಗೂ ಶ್ರೀಮಂತ ಜನರ ಪ್ರತಿನಿಧಿ ನರೇಂದ್ರ ಮೋದಿ ನಮ್ಮಬಹುಜನರ ಹಕ್ಕಿನ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಕಿಡಿಕಾರಿದರು.

Thinker Mahesh Chandra guru told that narendra modi is unfit for PM place

ನಮಗೆ ಬುಲೆಟ್ ಬೆಕಿಲ್ಲ, ಬ್ಯಾಲೆಟ್ ಪೇಪರ್ ನಿಂದಲೇ ಇವರನ್ನು ಆಳುವವರು ನಾವು. ಮೋದಿ ಸಂವಿಧಾನದ ಮೌಲ್ಯಗಳನ್ನು ನಾಶ ಮಾಡಲು ಹೊರಟಿದ್ದಾರೆ. ಬಡತನ ನಿರ್ಮೂಲನೆ ಮಾಡುವ ಬದಲು ಬಡವರನ್ನೇ ನಿರ್ಮೂಲನೆ ಮಾಡುತ್ತಿದ್ದಾರೆ. ಮೀಸಲಾತಿ ಎಲ್ಲಾ ಜನರಿಗೂ ಸಮವಾಗಿರಬೇಕು. ಆದರೆ ಬಂಡವಾಳ ಶಾಹಿಗಳ ಪರವಾಗಿರುವ ಪ್ರಧಾನಿ ಅವೈಜ್ಞಾನಿಕವಾಗಿ ಮೀಸಲಾತಿ ತರುತ್ತಿದ್ದಾರೆ ಎಂದು ಮಹೇಶ್ ಚಂದ್ರಗುರು ಹರಿಹಾಯ್ದರು.

ಗೋ ಮಾಂಸ ಭಕ್ಷಿಸಿದ ಪ್ರೊ. ಭಗವಾನ್ ವಿರುದ್ಧ ಪ್ರತಾಪ್ ಸಿಂಹ ಕಿಡಿ ಗೋ ಮಾಂಸ ಭಕ್ಷಿಸಿದ ಪ್ರೊ. ಭಗವಾನ್ ವಿರುದ್ಧ ಪ್ರತಾಪ್ ಸಿಂಹ ಕಿಡಿ

ಇನ್ನು ಸಭೆಯಲ್ಲಿ ಪ್ರೊ.ಮಹೇಶ್ ಚಂದ್ರ ಗುರು, ಮಾಜಿಕುಲಪತಿ ದಯಾನಂದ್ ಮಾನೆ, ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮು ಹಾಗೂ ವಿವಿಧ ಪ್ರಗತಿಪರ ಚಿಂತಕರು ಭಾಗಿಯಾಗಿದ್ದರು.

English summary
Thinker and activist Mahesh Chandra guru told that PM Narendra modi is unfit for that place, he is the big enemy for our India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X