ಅಪೌಷ್ಟಿಕತೆ ಹೋಗಲಾಡಿಸಲು ಸಿಎಫ್ ಟಿಆರ್ ಐನಿಂದ ವಿಶೇಷ ಉಪಾಹಾರ

ಮೈಸೂರು, ಅಕ್ಟೋಬರ್. 30 : ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ಸಿಎಫ್ ಟಿಆರ್ ಐ) ಅಪೌಷ್ಟಿಕತೆಯನ್ನು ಹೋಗಲಾಡಿಸಲು ನಿರಂತರ ಸಂಶೋಧನೆಗಳನ್ನು ನಡೆಸುತ್ತಿದ್ದು, ಇದೀಗ ಉಪಾಹಾರಕ್ಕಾಗಿ ಪೌಷ್ಟಿಕ ಆಹಾರ ಸಿದ್ಧಪಡಿಸುವ ಯೋಜನೆ ರೂಪಿಸಿದೆ.

ಬೆಳಗಿನ ಉಪಾಹಾರ ಪ್ರತಿಯೊಬ್ಬರ ದೈನಂದಿನ ಬದುಕಿನಲ್ಲಿ ಪ್ರಮುಖವಾಗಿದ್ದು, ಇದನ್ನು ಪೌಷ್ಟಿಕಾಂಶಯುಕ್ತವಾಗಿ ಮಾಡಿ ಕೊಡುವುದು ಸಿಎಫ್ ಟಿಆರ್ ಐನ ಗುರಿ.

ಶಾಲೆಗೆ ಹೋಗುವ 7ರಿಂದ 15 ವರ್ಷದ ಮಕ್ಕಳಿಗಾಗಿ ಮಧ್ಯಾಹ್ನದ ಊಟಕ್ಕೆ ಸಮನಾಗಿ ಪೌಷ್ಟಿಕಾಂಶ ಉಪಾಹಾರ ಅಭಿವೃದ್ಧಿಗೊಳಿಸಿದ್ದು, ಕ್ಯಾಲರಿಯುಕ್ತವಾಗಿ ನೀಡಲು ಸಿದ್ಧತೆ ನಡೆದಿದೆ.

Successful nutritional breakfast plan by Mysuru CFTRI

ನಗರದಲ್ಲಿರುವ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಂಸ್ಥೆ (ಸಿಎಸ್ಐಆರ್) ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾಲಯ (ಸಿಎಫ್ ಟಿಆರ್ ಐ) ಸಂಪನ್ಮೂಲ ಕ್ರೋಢೀಕರಣ ಹಾಗೂ ಖಾಸಗಿ ಸಂಸ್ಥೆಗಳಿಗೆ ತಂತ್ರಜ್ಞಾನವನ್ನು ಪರಿಚಯಿಸುವ ಕಾರ್ಯದಲ್ಲಿ ನಿರತವಾಗಿದೆ.

ಸಿಎಫ್ ಟಿಆರ್ ಐ ಇದೇ ಮೊದಲ ಬಾರಿಗೆ 2018-19ನೇ ಸಾಲಿಗೆ 20 ಕೋಟಿ ರೂ. ವಹಿವಾಟು ಗುರಿ ಹೊಂದಿದ್ದು, ಸೆಪ್ಟೆಂಬರ್ ಅಂತ್ಯಕ್ಕೆ 10 ಕೋಟಿ ರೂ. ವಹಿವಾಟು ನಡೆಸಿ ದಾಪುಗಾಲು ಇಟ್ಟಿದೆ.

ಸಿಮ್ಯಾಗೋ ಸಂಸ್ಥೆಯ ರಾಂಕಿಂಗ್ ನಲ್ಲಿ 2017ನೇ ಸಾಲಿನಲ್ಲಿ 270 ಸಂಸ್ಥೆಗಳ ಪಟ್ಟಿಯಲ್ಲಿ 32ನೇ ಸ್ಥಾನದಲ್ಲಿದ್ದ ಸಿಎಫ್ ಟಿಆರ್ ಐ 2018ರಲ್ಲಿ 16ನೇ ಸ್ಥಾನಕ್ಕೆ ಜಿಗಿದಿದೆ.

ಹ್ಯಾಂಗೋ ಕೈಗಾರಿಕೆಗೆ ತಂತ್ರಜ್ಞಾನ ವರ್ಗಾವಣೆಗೆ 30 ಲಕ್ಷ ರೂ. ಪಡೆಯಲಾಯಿತು. ಇದು ಸಿಎಫ್ ಟಿಆರ್ ಐ ಇತಿಹಾಸದಲ್ಲಿ ತಂತ್ರಜ್ಞಾನ ವರ್ಗಾವಣೆಗೆ ಪಡೆದ ಅತಿ ಹೆಚ್ಚು ಶುಲ್ಕವಾಗಿದೆ.

ಹೊಸದಾಗಿ ಕಾರ್ಬೊನೇಟೆಡ್ ಬೆವರೇಜ್ ಫ್ರೂಟ್ ಘಟಕ ಸ್ಥಾಪಿಸಿದ್ದು, ಅನಿಮಲ್ ಹೌಸ್ ಫೆಸಿಲಿಟಿಯನ್ನು ಆಧುನೀಕರಣಗೊಳಿಸಲಾಗಿದೆ. 1 ಗಂಟೆಯಲ್ಲಿ 300 ರಾಗಿಮುದ್ದೆ ತಯಾರಿಸುವ ಯಂತ್ರವನ್ನು ಸಿದ್ಧಪಡಿಸಲಾಗಿರುವುದು ಸಿಎಫ್ ಟಿಆರ್ ಐ ಸಾಧನೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+