ಪಂಚಭೂತಗಳಲ್ಲಿ ಶ್ರೀಕಂಠದತ್ತ ಒಡೆಯರ್ ಲೀನ

ಮೈಸೂರು, ಡಿ.11 : ಮಂಗಳವಾರ ಮಧ್ಯಾಹ್ನ ಹೃದಯಾಘಾತದಿಂದ ಮೃತಪಟ್ಟ ಯದುವಂಶದ ಕೊನೆಯ ಕೊಂಡಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಅಂತ್ಯಕ್ರಿಯೆ ಧಾರ್ಮಿಕ ವಿಧಿವಿಧಾನದಂತೆ ಮೈಸೂರಿನ ಮಧುವನದಲ್ಲಿ ನಡೆಯಿತು. ಸಂಜೆ 5.28ಕ್ಕೆ ಒಡೆಯರ್ ಸಹೋದರಿ ಗಾಯಿತ್ರಿ ದೇವಿ ಅವರ ಪುತ್ರ ಕಾಂತರಾಜ ಅರಸ್ ಒಡೆಯರ್ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಈ ಮೂಲಕ ಶ್ರೀಕಂಠದತ್ತ ಒಡೆಯರ್ ಪಂಚಭೂತಗಳಲ್ಲಿ ಲೀನವಾದರು. [ನಿರ್ಲಕ್ಷ್ಯಕ್ಕೊಳಗಾಗಿರುವ ಸುಂದರ ಮಧುವನ]

ಸಮಯ 5.28 : ಕಾಂತರಾಜ ಅರಸ್ ಅವರಿಂದ ಶ್ರೀಕಂಠದತ್ತ ನರಸಿಂಹರಾಜ ಚಿತೆಗೆ ಅಗ್ನಿ ಸ್ಪರ್ಶ

Srikantadatta Wadiyar

ಸಮಯ 5.15 : ಧಾರ್ಮಿಕ ವಿಧಿವಿಧಾನಗಳು ಅಂತ್ಯ ಒಡೆಯರ್ ಚಿತೆಗೆ ಅಗ್ನಿ ಸ್ಪರ್ಶಮಾಡಲು ಕ್ಷಣಗಣನೆ

ಸಮಯ 3.50 : ಮಧುವನದ ಸುತ್ತಲೂ ಸೇರಿದ ನೂರಾರು ಜನ. ಸರ್ಕಾರಿ ಗೌರವ ಸಲ್ಲಿಕೆ ಮುಕ್ತಾಯ. ಕೊನೆಯ ಹಂತಹ ಧಾರ್ಮಿಕ ಕ್ರಿಯೆಗಳು ಆರಂಭ.

ಸಮಯ 3.30 : ಸಿಎಂ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ, ಶಾಸಕ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಸಂಪುಟದ ವಿವಿಧ ಸಚಿವರಿಂದ ಒಡೆಯರ್ ಮೃತದೇಹಕ್ಕೆ ಅಂತಿಮ ನಮನ ಸಲ್ಲಿಕೆ. ಅಂತಿಮ ಕ್ಷಣದ ಸಿದ್ಧತೆಯಲ್ಲಿ ತೊಡಗಿದ ಅರ್ಚಕರು. ಪೊಲೀಸರಿಂದ ಸಕಲ ಸರ್ಕಾರಿ ಗೌರವ ಅರ್ಪಣೆ

ಸಮಯ.3.25 : ಪುಣ್ಯಾಹ, ಸರ್ವ ಪ್ರಾಯಾಶ್ಚೀತ, ಪ್ರಾಣಾ ಪ್ರತಿಷ್ಠಾನ, ಕುಂಭ ಪ್ರದಕ್ಷಿಣೆ ಪ್ರಕ್ರಿಯೆಗಳು ಮುಗಿದ ನಂತರ ಕಾಂತಾರಜ ಅರಸ್ ಅವರಿಂದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಚಿತೆಗೆ ಅಗ್ನಿಸ್ಪರ್ಶ. ಶ್ರೀ ವೈಷ್ಣವ ಸಂಪ್ರದಾಯಕ್ಕೆ ತಕ್ಕಂತೆ ಅಂತ್ಯ ಸಂಸ್ಕಾರ.

ಸಮಯ 3.15 : ಅರಮನೆ ಪುರೋಹಿತರಾದ ಜನಾರ್ಧನ್, ನರಸಿಂಹ ಶಾಸ್ತ್ರಿ, ಶ್ರೀಹರಿ, ಮಂಜುನಾಥ್ ಅವರಿಂದ ವೇದಮಂತ್ರ ಪಠಣ. ಮೃತದೇಹದಕ್ಕೆ ಮೊದಲು ಮಹಾಭಿಷೇಕ ನಂತರ ಉಳಿದ ವಿಧಿವಿಧಾನಗಳು.

ಸಮಯ 3.05 : ಮಧುವನಕ್ಕೆ ಸಾರ್ವಜನಿಕ ಪ್ರವೇಶ ನಿಷೇಧ. ಗಣ್ಯರು, ರಾಜಮನೆತನದವರು ಮತ್ತು ಮಾಧ್ಯಮದವರಿಗೆ ಮಾತ್ರ ಅವಕಾಶ. ಅರಮನೆ ಪುರೋಹಿತರಿಂದ ವೇದಘೋಷ ಪಠಣ.

ಸಮಯ 3 ಗಂಟೆ : ಮಧುವನಕ್ಕೆ ಆಗಮಿಸಿದ ಪಡೆಯರ್ ಪಾರ್ಥಿವ ಶರೀರ ಹೊತ್ತ ಚಿನ್ನದ ಪಲ್ಲಕ್ಕಿ. ಭಾನು ಪ್ರಕಾಶ್ ಶರ್ಮಾ ನೇತೃತ್ವದಲ್ಲಿ ಮಧುವನದಲ್ಲಿ ಅಂತಿಮ ಸಂಸ್ಕಾರಕ್ಕೆ ಸಕಲ ಸಿದ್ಧತೆ. ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಲವು ಗಣ್ಯರು ಭಾಗಿ.

ಹಿಂದಿನ ಸುದ್ದಿ : ಮಂಗಳವಾರ ಮಧ್ಯಾಹ್ನ ಚಿರನಿದ್ರೆಗೆ ಜಾರಿದ ಮೈಸೂರು ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಪಾರ್ಥಿವ ಶರೀರವನ್ನು ಅಂಭಾವಿಲಾಸ ಅರಮನೆಯಲ್ಲಿನ ಕಲ್ಯಾಣ ಮಂಟಪದಲ್ಲಿ ಇಡಲಾಗಿತ್ತು, ಮುಂಜಾನೆಯಿಂದಲೇ ಅಂತಿಮ ದರ್ಶನಕ್ಕೆ ಜನಸಾಗರವೇ ಸೇರಿತ್ತು. ಮೃತದೇಹದ ಅಂತ್ಯ ಸಂಸ್ಕಾರದ ವಿಧಿವಿಧಾನಗಳು ಅರಮನೆಯಲ್ಲಿ ಪೂರ್ಣಗೊಂಡಿದ್ದು, ಮೆರವಣಿಗೆ ಮೂಲಕ ಪಾರ್ಥಿವ ಶರೀರವನ್ನು ಮಧುನವಕ್ಕೆ ತೆಗೆದುಕೊಂಡು ಹೋಗಲಾಗುತ್ತಿದೆ.

ಮುಂಜಾನೆ 3 ಗಂಟೆಯಿಂದಲೇ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಪಾರ್ಥಿವ ಶರೀರದ ದರ್ಶನ ಪಡೆಯಲು ಜನರು ಆಗಮಿಸುತ್ತಿದ್ದರು. ಬೆಳಗ್ಗೆ 9 ಗಂಟೆ ಸುಮಾರಿಗೆ ಸಿಎಂ ಸಿದ್ದರಾಮಯ್ಯ ತಮ್ಮ ಸಂಪುಟ ಸಹೋದ್ಯೋಗಿಗಳ ಜೊತೆ ಆಗಮಿಸಿ ಮೃತರಿಗೆ ಅಂತಿಮ ನಮನ ಸಲ್ಲಿಸಿದರು. (ಅಳಿವಿನ ಅಂಚಿನಲ್ಲಿ ಮೈಸೂರಿನ ಆಳರಸರ ಮಧುವನ)

ಗೃಹ ಸಚಿವ ಕೆ.ಜೆ.ಜಾರ್ಜ್, ವಸತಿ ಸಚಿವ ಅಂಬರೀಶ್, ಸಚಿವ ಮಹದೇವ ಪ್ರಸಾದ್, ಶ್ರೀನಿವಾಸ್ ಪ್ರಸಾದ್ ಮುಂತಾದವರು ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಅರಮನೆಗೆ ಆಗಮಿಸಿ ಒಡೆಯರ್ ಅವರಿಗೆ ಅಂತಿಮ ಗೌರವ ಸಲ್ಲಿಸಿದರು. ಸುತ್ತೂರು ಮಠದ ಶ್ರೀಗಳು ಮೃತದೇಹದ ಅಂತಿಮ ದರ್ಶನ ಪಡೆದರು. (ಒಡೆಯರ್ ಗೆ ಚಿತ್ರನಮನ)

ಸಮಯ 2.48 : ಭಾನು ಪ್ರಕಾಶ ನೇತೃತ್ವದಲ್ಲಿ ಮಧುವನದಲ್ಲಿ ಅಂತಿಮ ಸಂಸ್ಕಾರಕ್ಕೆ ಸಕಲ ಸಿದ್ಧತೆ. ಸ್ಥಳದಲ್ಲಿ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಕೆ.ಜೆ.ಜಾರ್ಜ್, ವಸತಿ ಸಚಿವ ಅಂಬರೀಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತಿ.

ಸಮಯ 2.40 : ಮಧುವನದತ್ತ ಪಾರ್ಥಿವ ಶರೀರದ ಮೆರವಣಿಗೆ, ರಸ್ತೆ ಬದಿಯಲ್ಲಿ ಸಾವಿರಾರು ಜನರಿಂದ ಅಂತಿಮ ನಮನ. ಮೆರವಣಿಗೆ ನೇತೃತ್ವ ವಹಿಸಿದ 13 ಅಶ್ವಾರೋಹಿಗಳು ಮತ್ತು ಅರಮನೆ ಪಟ್ಟದ ಆನೆ ಗಜೇಂದ್ರ.

ಸಮಯ 2.30 : 5ನೇ ಕೆಎಸ್ಆರ್ ಪಿ ಪೊಲೀಸ್ ಬ್ಯಾಂಡ್ ಬೆಟಾಲಿಯನ್ ನಿಂದ ಒಡೆಯರ್ ಅವರಿಗೆ ಅಂತಿಮ ಗೌರವ ಸಲ್ಲಿಕೆ, ಎಸಿಪಿ ರಘುನಾಥ್ ನೇತೃತ್ವದಲ್ಲಿ ತಂಡದಿಂದ ಸಂಗೀತವಾದನ.

ಸಮಯ 2 ಗಂಟೆ : ಒಡೆಯರ್ ಅಂತಿಮ ಯಾತ್ರೆ ಆರಂಭ, ಚಿನ್ನದ ಪಲ್ಲಕ್ಕಿಯಲ್ಲಿ ಮಧುವನದತ್ತ ಹೊರಟ ಒಡೆಯರ್ ಪಾರ್ಥಿವ ಶರೀರ. ರಸ್ತೆ ಇಕ್ಕೆಲಗಳಲ್ಲಿ ನೂರಾರು ಜನ, ಮೃತದೇಹದ ಅಂತಿಮ ದರ್ಶನ ಪಡೆಯಲು ಕಟ್ಟಡವೇರಿದ ಜನರು.

ಸಮಯ 1.15 : ಶ್ರೀಕಂಠದತ್ತ ಒಡೆಯರ್ ಮೃತದೇಹಕ್ಕೆ ಕುಟುಂಬದವರಿಂದ ಪೂಜೆ, ಅಂತಿಮ ವಿಧಿವಿಧಾನ ನೆರವೇರಿಸುತ್ತಿರುವ ಒಡೆಯರ್ ಅಕ್ಕನ ಮಗನಾದ ಕಾಂತರಾಜ ಅರಸ್. ಅರಮನೆ ಪಂಡಿತರಿಂದ ವೇದಘೋಷ ಪಠಣ. ಪಾರ್ಥಿವ ಶರೀರಕ್ಕೆ ಸಪ್ತನದಿಗಳ ಜಲಾಭಿಷೇಕ ಮಾಡಿಸಿ, ಬಳಿಕ ಪಂಚದ್ರವ್ಯಗಳಿಂದ ಅಭಿಷೇಕ ಮಾಡಲಾಯಿತು.

ಸಮಯ 12.20 : ಶ್ರೀಕಂಠದತ್ತ ಒಡೆಯರ್ ಅಂತ್ಯಕ್ರಿಯೆಯ ವಿಧಿವಿಧಾನಗಳು ಅರಮನೆಯಲ್ಲಿ ಆರಂಭಗೊಂಡಿವೆ. ಆದ್ದರಿಂದ ಮಹಾರಾಜರ ಮೃತ ದೇಹದ ಅಂತಿಮ ದರ್ಶನವನ್ನು ಸ್ಥಗಿತಗೊಳಿಸಲಾಗಿದೆ. ಅರಮನೆ ಆವರಣದಲ್ಲಿ ನಡೆಯುತ್ತಿರುವ ಅಂತಿಮ ವಿಧಿವಿಧಾನಗಳ ಚಿತ್ರೀಕರಣ ಮಾಡದಂತೆ ಮಾಧ್ಯಮಗಳಿ ಸೂಚನೆ ನೀಡಲಾಗಿದೆ.

ಸಮಯ 12.05 : ಶ್ರೀಕಂಠದತ್ತ ಒಡೆಯರ್ ಅಂತಿಮ ಸಂಸ್ಕಾರಕ್ಕೆ ಸಿದ್ಧತೆಗಳು ಆರಂಭವಾಗಿವೆ. ನಂಜನಗೂಡು, ಚಾಮುಂಡೇಶ್ವರಿ, ಮೇಲುಕೋಟೆ, ಶ್ರೀರಂಗಪಟ್ಟಣ ದೇವಾಲಯಗಳ ಪ್ರಸಾದ ಅರಮನೆಗೆ ಬಂದು ತಲುಪಿದೆ. ಒಡೆಯರ್ ಅಂತಿಮ ದರ್ಶನಕ್ಕೆ ನೂರಾರು ಜನರು ಕಾದು ನಿಂತಿದ್ದಾರೆ. ಆದರೆ, ಅಂತಿಮ ಸಂಸ್ಕಾರಕ್ಕೆ ವಿಳಂಬವಾಗಬಾರದು ಎಂದು ಜನರನ್ನು ಅರಮನೆ ಪ್ರವೇಶ ದ್ವಾರದಲ್ಲಿಯೇ ತಡೆಯಲಾಗಿದೆ.

ಸಮಯ 12 ಗಂಟೆ : ಅತ್ತ ಅರಮನೆಯಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಚಿರನಿದ್ರೆಗೆ ಜಾರಿದ್ದರೆ ಇತ್ತ, ಅರಮನೆ ಕೊಟ್ಟಿಗೆಯಲ್ಲಿ ಮಹಾರಾಜರು ಪ್ರೀತಿಯಿಂದ ಸಾಕಿದ್ದ ಪ್ರಭಾವತಿ ಹಸು ಗಂಡು ಕರುವಿಗೆ ಜನ್ಮ ನೀಡಿದೆ. ಶ್ರೀಕಂಠದತ್ತ ಒಡೆಯರ್ ಈ ಹಸುವನ್ನು ಸಾಕಿದ್ದರು. ಪ್ರತಿನಿತ್ಯ ಬೆಳಗ್ಗೆ ಅದಕ್ಕೆ ಪೂಜೆ ಸಲ್ಲಿಸುತ್ತಿದ್ದರು.

ಸಮಯ 11.45 : ಮಹಾರಾಜರ ಅಂತಿಮ ದರ್ಶನಕ್ಕೆ ಜನಸಾಗರ ಹರಿದು ಬರುತ್ತಿರುವ ಹಿನ್ನಲೆಯಲ್ಲಿ ಪೊಲೀಸರು ಜನರನ್ನು ನಿಯಂತ್ರಿಸಲು ಅರಮನೆಯ ನಾಲ್ಕು ಗೇಟ್ ಗಳನ್ನು ಮುಚ್ಚಿದ್ದಾರೆ. ಕೆಲವು ಹೊತ್ತಿನಲ್ಲಿ ಅಂತ್ಯಸಂಸ್ಕಾರದ ವಿಧಿವಿಧಾನಗಳು ಆರಂಭವಾಗುವುದರಿಂದ ಜನರನ್ನು ನಿಯಂತ್ರಿಸಲು ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+