"ಸೋನಿಯಾ ಗಾಂಧಿ ದೇಶದ್ರೋಹಿಯ ಮಗಳು"

ಮೈಸೂರು, ಏ. 5 : "ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಒಬ್ಬ ದೇಶ ದ್ರೋಹಿಯ ಮಗಳು, ಅವರಿಂದ ದೇಶಪ್ರೇಮ ಹೇಗೆ ಇರಲು ಸಾಧ್ಯ" ಎಂದು ಹೇಳುವ ಮೂಲಕ ಮಾಜಿ ಸಚಿವ, ಬಿಜೆಪಿ ಮುಖಂಡ ಎಸ್.ಎ.ರಾಮದಾದ್ ಹೊಸ ವಿವಾದ ಹುಟ್ಟುಹಾಕಿದ್ದಾರೆ.

ಶನಿವಾರ ಮೈಸೂರು ನಗರದಲ್ಲಿ ಬಿಜೆಪಿ ಮಹಿಳಾ ಸಮಾವೇಶ ಉದ್ದೇಶಿಸಿ ಮಾತನಾಡಿದ ರಾಮದಾಸ್, "ಸೋನಿಯಾ ಗಾಂಧಿ ಓರ್ವ ದೇಶ ದ್ರೋಹಿ ತಂದೆಯ ಮಗಳು, ಸೋನಿಯಾ ಗಾಂಧಿ ಅವರ ತಂದೆ ಇಟಲಿಯ ಸೈನಿಕರಾಗಿದ್ದರು" ಎಂದು ಹೇಳಿದರು. [ಮೋದಿ ಮಾತನ್ನು ಕನ್ನಡಲ್ಲಿ ಕೇಳಿರಿ]

SA Ramadas

"ಇಟಲಿ ಸೈನಿಕರಾಗಿದ್ದ ಸೋನಿಯಾ ತಂದೆ, ತನ್ನ ದೇಶದ ಬಗೆಗಿನ ಗುಪ್ತ ಮಾಹಿತಿಯನ್ನು ಅನ್ಯ ದೇಶಗಳಿಗೆ ಮಾರಾಟ ಮಾಡಿದ್ದರು. ಇಂಥವರ ಮಗಳಾದ ಸೋನಿಯಾ ಗಾಂಧಿ ಅವರಿಂದ ದೇಶಪ್ರೇಮ ನಿರೀಕ್ಷಿಸಲು ಹೇಗೆ ಸಾಧ್ಯ?" ಎಂದು ಪ್ರಶ್ನಿಸಿದ್ದಾರೆ.

"ಸ್ವಂತ ದೇಶದ ಬಗ್ಗೆಯೇ ಪ್ರೀತಿ ಹೊಂದದೇ ಇರುವ ವ್ಯಕ್ತಿಯ ಮಗಳಿಂದ ಭಾರತದ ಜನರು ಹೇಗೆ ತಾನೆ ದೇಶಪ್ರೇಮ ನಿರೀಕ್ಷಿಸಲು ಸಾಧ್ಯ? ಎಂದು ಲೇವಡಿ ಮಾಡಿದ್ದಾರೆ. ಎಸ್ಎ ರಾಮದಾಸ್ ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ತೀವ್ರ ವಿವಾದ ಹುಟ್ಟುಹಾಕುವ ಸಾಧ್ಯತೆ ಇದೆ.

ವಿಷಾದ ವ್ಯಕ್ತಪಡಿಸಿದ ರಾಮದಾಸ್ : ಸಮಾವೇಶದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ ರಾಮದಾಸ್ "ನನ್ನ ದೇಶದ್ರೋಹಿಯ ಮಗಳು" ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ. ಉದ್ದೇಶಪೂರ್ವಕವಾಗಿ ನಾನು ಇಂತಹ ಹೇಳಿಕೆ ನೀಡಿಲ್ಲ ಎಂದು ರಾಮದಾಸ್ ಸ್ಪಷ್ಟೀಕರಣ ನೀಡಿದ್ದಾರೆ. ಇಂತಹ ಹೇಳಿಕೆ ನೀಡುವುದು ತಪ್ಪು ಎಂದು ತಿಳಿದಿದೆ. ಆದ್ದರಿಂದ ತಪ್ಪನ್ನು ತಿದ್ದುಕೊಳ್ಳಲು ವಿಷಾದ ವ್ಯಕ್ತಪಡಿಸುತ್ತಿದ್ದೇನೆ ಎಂದು ಅವರು ಹೇಳಿದರು.

ದೇವೇಗೌಡರಿಗೆ ತಿರುಗೇಟು : ಸಮಾವೇಶದಲ್ಲಿ ಜೆಡಿಎಸ್ ನಾಯಕ ಜಿಟಿ ದೇವೇಗೌಡರಿಗೆ ತಿರುಗೇಟು ನೀಡಿದ ಮಾಜಿ ಸಚಿವ ರಾಮದಾಸ್, ಜೆಡಿಎಸ್ ಅಭ್ಯರ್ಥಿಗೆ ನಾನು ಬೆಂಬಲ ನೀಡುತ್ತಿದ್ದೇನೆ ಎಂಬ ಹೇಳಿಕೆಯಲ್ಲಿ ಸತ್ಯಾಂಶವಿಲ್ಲ. ನಾನು ರಾಜಕೀಯವನ್ನು ತೊರೆದರೂ ಬಿಜೆಪಿ ಪಕ್ಷವನ್ನು ಬಿಡುವುದಿಲ್ಲ. ಬಿಜೆಪಿ ತಮಗೆ 2ನೇ ತಾಯಿ ಇದ್ದಂತೆ ಎಂದು ಹೇಳಿದರು.

ಶುಕ್ರವಾರ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ್ದ ಜಿಟಿ ದೇವೇಗೌಡರು, ಮಾಜಿ ಸಚಿವ ಎಸ್ಎ ರಾಮದಾಸ್ ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಹೇಳಿದ್ದರು. ಇಂದು ಇದಕ್ಕೆ ರಾಮದಾಸ್ ತಿರುಗೇಟು ನೀಡಿದ್ದಾರೆ. ಆ ಮೂಲಕ ತಾವು ಜೆಡಿಎಸ್ ಬೆಂಬಲಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+