ರಂಗಾಯಣದಲ್ಲಿ ಪರ್ವ ನಾಟಕದ ಮೊದಲ ಪ್ರದರ್ಶನ ವೀಕ್ಷಿಸಿದ ಎಸ್.ಎಲ್.ಭೈರಪ್ಪ
ಮೈಸೂರು, ಮಾರ್ಚ್ 12: ಹಿರಿಯ ಸಾಹಿತಿ ಡಾ.ಎಸ್.ಎಲ್ ಭೈರಪ್ಪ ಅವರ ಪರ್ವ ಕಾದಂಬರಿ ಆಧಾರಿತ "ಪರ್ವ' ನಾಟಕ ಮಾ.12 ರಿಂದ ಪ್ರದರ್ಶನಗೊಳ್ಳುತ್ತಿದ್ದು, ಶುಕ್ರವಾರ ನಾಟಕಕ್ಕೆ ಚಾಲನೆ ನೀಡಲಾಯಿತು.
ಮೊದಲ ಪ್ರದರ್ಶನದ ಹಿನ್ನೆಲೆಯಲ್ಲಿ ರಂಗಾಯಣದ ಇಡೀ ಕಲಾಮಂದಿರ ಹೌಸ್ ಫುಲ್ ಆಗುವ ಮೂಲಕ ಮೊದಲ ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯಿತು. ನಾನು ಎಸ್.ಎಲ್ ಭೈರಪ್ಪ ಈ ನಾಟಕಕ್ಕೆ ಚಾಲನೆ ಕೊಡುತ್ತಿದ್ದೇನೆ ಎನ್ನುವ ಮೂಲಕ ಪರ್ವ ನಾಟಕದ ಮೂಲ ರಚನಾಕಾರರಾದ ಎಸ್.ಎಲ್.ಭೈರಪ್ಪ ವಿಶಿಷ್ಟ ರೀತಿಯಲ್ಲಿ ಚಾಲನೆ ನೀಡಿದರು.
""ಇದು ರಂಗಾಯಣದಲ್ಲಿ ಹೊಸ ಮೈಲಿಗಲ್ಲು. ಈ ಮಹಾಪರ್ವದ ವಿಶೇಷ ಪ್ರದರ್ಶನಕ್ಕೆ ಹಣ ಕೊಟ್ಟು ಟಿಕೆಟ್ ಕೊಟ್ಟು ಬಂದಿರುವ ಪ್ರೇಕ್ಷಕರೇ ಅತಿಥಿಗಳು'' ಎಂದರು.

ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಮಾತನಾಡಿ, ""ಪ್ರಕಾಶ್ ಬೆಳವಾಡಿ ನಾಟಕ ನಿರ್ದೇಶನ ಮಾಡಿದ್ದು, ಕನ್ನಡ ಕಾಯಕ ವರ್ಷದಲ್ಲಿ ಕನ್ನಡದಲ್ಲಿ ʻಪರ್ವʼವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತೇವೆ.'' ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇದನ್ನು ಚೈನೀಸ್, ರಷ್ಯನ್ ಭಾಷೆಗೆ ಅನುವಾದ ಮಾಡಿದ್ದಾರೆಂದು ಸ್ಮರಿಸಿದರು.












Click it and Unblock the Notifications