ಸುತ್ತೂರು ಮಠದಲ್ಲಿ ಆರು ಗಂಧದ ಮರ ಕಳುವು
ಮೈಸೂರು, ಜುಲೈ 15: ಮೈಸೂರಿನ ಪ್ರತಿಷ್ಠಿತ ಸುತ್ತೂರು ಮಠದಲ್ಲಿ ನೈಸರ್ಗಿಕವಾಗಿ ಬೆಳೆದಿದ್ದ ಒಟ್ಟು 6 ಗಂಧದ ಮರಗಳನ್ನು ಕಳವು ಮಾಡಲಾಗಿದೆ.
ಇದೇ ಜುಲೈ 10ರಂದು ರಾತ್ರಿ ಮಠದ ಆವರಣದಲ್ಲಿನ ಕಲ್ಯಾಣಿ ಬಳಿ ಇರುವ 2 ಶ್ರೀಗಂಧದ ಮರಗಳನ್ನು ಕತ್ತರಿಸಿಕೊಂಡು ಹೋಗಿದ್ದರು. ಆದರೆ, ಮಠದ ವತಿಯಿಂದ ಪೊಲೀಸರಿಗೆ ದೂರು ನೀಡಿರಲಿಲ್ಲ.
ಆದರೆ ಮತ್ತೆ ಜುಲೈ 14ರಂದು ಮಠದ ಆವರಣಕ್ಕೆ ರಾತ್ರಿ ವೇಳೆ ಬಂದ ಗಂಧಚೋರರು, ನಾಲ್ಕು ಮರಗಳನ್ನು ಕತ್ತರಿಸಿಕೊಂಡು ಹೋಗಿದ್ದಾರೆ.

ಮಠದ ಕಾಂಪೌಂಡ್ ಗೆ ಅಳವಡಿಸಿರುವ ಕಬ್ಬಿಣದ ಮುಳ್ಳುತಂತಿಗಳನ್ನೇ ಕತ್ತರಿಸಿ ಮರವನ್ನು ಹೊತ್ತೊಯ್ದಿದ್ದಾರೆ. ಆರು ಮರಗಳ ಒಟ್ಟು ಅಂದಾಜು ಬೆಲೆ 45 ಸಾವಿರವಾಗಿದ್ದು, ಕಳ್ಳರನ್ನು ಪತ್ತೆ ಮಾಡಬೇಕು ಎಂದು ಮಠದ ವತಿಯಿಂದ ಶಿವಣ್ಣ ಎಂಬುವವರು ಕೆ.ಆರ್.ಠಾಣೆಗೆ ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.












Click it and Unblock the Notifications