Siddaramaiah: ವರುಣಾದಲ್ಲಿ ಸಿದ್ದುಗೆ ಗದ್ದುಗೆ ಖಚಿತ ಎಂದು ಭವಿಷ್ಯ ನುಡಿದ ಅರ್ಚಕ

ವರುಣಾ ಕ್ಷೇತ್ರದಲ್ಲಿ ಈ ಬಾರಿ ಸಿದ್ದರಾಮಯ್ಯ ಗೆಲ್ಲೋದು ಖಚಿತ ಎಂದು ಚೊಕ್ಕನಹಳ್ಳಿಯ ಚಿಕ್ಕಮ್ಮ ದೇವಿ ಭವಿಷ್ಯ ನುಡಿದಿದೆ ಎಂದ ದೇವಿಯ ಅರ್ಚಕರು ತಿಳಿಸಿದ್ದಾರೆ. 7ನೇ ತಾರೀಕು ಯತೀಂದ್ರ ಸಿದ್ದರಾಮಯ್ಯ ಇಲ್ಲಿಗೆ ಬಂದು ಪೂಜೆ ಮಾಡಿಸಿದ್ದರು. ಈ ಸಂದರ್ಭದಲ್ಲಿ ವರುಣಾದಲ್ಲಿ ಸಿದ್ದರಾಮಯ್ಯ ಗೆಲ್ಲುವ ಸೂಚನೆ ನೀಡಿದೆ ಎಂದು ಅರ್ಚಕರು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ವಿಚಾರದಲ್ಲಿ ಕೂಡ ದೇವಿ ಭವಿಷ್ಯ ನುಡಿದಿದ್ದು, ಅದು ನಿಜವಾಗಿತ್ತು ಎಂದು ಹೇಳಿದ್ದಾರೆ. ಎರಡು ಕಡೆ ನಿಂತರೆ ಮೋದಿ ಗೆಲ್ತಾರೆ, ನೂರು ಜನ ವಿರೋಧಿಗಳು ಇದ್ದರೂ ನಾನು ಈ ಬಾರಿ ಪಾಸ್ ಮಾಡಿಕೊಡ್ತೀನಿ ಎಂಧು ಚಿಕ್ಕಮ್ಮ ದೇವಿ ಭವಿಷ್ಯ ನುಡಿದಿತ್ತು ಎಂದಿದ್ದಾರೆ.

Siddaramaiah Will Win In Varuana : Predicts Priest of Chikkamma Devi

ಸಿದ್ದರಾಮಯ್ಯ ಅವರಿಗೂ ಎರಡು ಕಡೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ದೇವಿ ಸಲಹೆ ನೀಡಿದ್ದಳು, ಆದರೆ ಕಾರಣಾಂತರದಿಂದ ಅವರು ಎರಡು ಕಡೆ ಸ್ಪರ್ಧಿಸಲು ಸಾಧ್ಯವಾಗಲಿಲ್ಲ. ಆದರೂ, ಈ ಬಾರಿ ವರುಣಾದಲ್ಲಿ ಸಿದ್ದರಾಮಯ್ಯ ಗೆಲ್ಲುವುದು ಖಚಿತ ಎಂದರು, ಇದನ್ನು ದೇವಿ ಹೇಳುತ್ತಿಲ್ಲ ಬದಲಾಗಿ ನನಗೆ ಮುನ್ಸೂಚನೆ ಸಿಕ್ಕಿದೆ, ಅವರು ಹೆಚ್ಚಿನ ಅಂತರದಲ್ಲಿ ಗೆಲ್ಲದಿದ್ದರೂ ಗೆಲ್ಲುವುದು ಮಾತ್ರ ನಿಶ್ಚಿತ ಎಂದು ಹೇಳಿದ್ದಾರೆ. ದೇವಿ ಅವರಿಗೆ ಬೆನ್ನೆಲುಬಾಗಿ ನಿಂತಿದ್ದಾಳೆ ಎಂದು ಹೇಳಿದರು.

ಸಿದ್ದರಾಮಯ್ಯ ಇನ್ನೂ ಈ ದೇವಸ್ಥಾನಕ್ಕೆ ಭೇಟಿ ಮಾಡಿಲ್ಲ, ಆದರೂ ಅವರು ಆದಷ್ಟು ಬೇಗ ಇಲ್ಲಿಗೆ ಬಂದು ಅಮ್ಮನ ಆಶೀರ್ವಾದ ಪಡೆದುಕೊಳ್ಳುತ್ತಾರೆ. ಸಿದ್ದರಾಮಯ್ಯ ಕೂಡ ಎರಡು ಕಡೆ ನಿಲ್ಲಲು ಬಯಸಿದ್ದರು, ಆದರೆ ಹೈ ಕಮಾಂಡ್ ಟಿಕೆಟ್ ನೀಡದ ಕಾರಣ ವರುಣಾದಲ್ಲಿ ಸ್ಪರ್ಧೆ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+