ಜಾರ್ಜ್ ಫರ್ನಾಂಡಿಸ್ ಅಗಲಿಕೆ ನನಗೆ ಅಘಾತ ತಂದಿದೆ:ಸಿದ್ದರಾಮಯ್ಯ

ಮೈಸೂರು, ಜನವರಿ 29: ಮಾಜಿ ಕೇಂದ್ರ ಸಚಿವ ಜಾರ್ಜ್ ಫರ್ನಾಂಡಿಸ್ ಅವರ ನಿಧನಕ್ಕೆ ಮೈಸೂರಿನಲ್ಲಿ ಸಂತಾಪ ಸೂಚಿಸಿದ ಮಾಜಿ ಸಿಎಂ ಸಿದ್ದರಾಮಯ್ಯ, ಅವರೇ ನನಗೆ ರಾಜಕೀಯದಲ್ಲಿ ಸಹಾಯ ಮಾಡಿದ ವ್ಯಕ್ತಿ. ಯಾವಾಗಲು ಅವರೊಂದಿಗೆ ಒಡನಾಟ ಚೆನ್ನಾಗಿತ್ತು. ಅವರು ಕರ್ನಾಟದಿಂದ ಹೋಗಿ ಮುಂಬೈ ಹಾಗೂ ಬಿಹಾರದಲ್ಲಿ ರಾಜಕೀಯ ನೆಲೆ ಕಂಡುಕೊಂಡಿದ್ದರು. ಅಂದಿನ ಕಾಲದಲ್ಲಿ ಮಹಾನ್ ಕಾಂಗ್ರೆಸ್ ನಾಯಕರೊಬ್ಬರನ್ನ ಸೋಲಿಸಿ ಖ್ಯಾತಿ ಗಳಿಸಿದ್ದರು ಎಂದು ಹೇಳಿದರು.

ನಾನು ವರ್ಷದ ಹಿಂದೆ ಭೇಟಿ ಮಾಡಿದ್ದೆ. ಆಗ ನನ್ನನ್ನು ಗುರುತಿಸುವ ಶಕ್ತಿ ಇರಲಿಲ್ಲ. ಇಂದು ಅವರ ಅಗಲಿಕೆ ನನಗೆ ಅಘಾತ ತಂದಿದೆ. ಅವರ ಅಂತಿಮ ದರ್ಶನ ಪಡೆಯಲು ತೆರಳುತ್ತೇನೆ ಎಂದು ಸಿದ್ದರಾಮಯ್ಯ ತಿಳಿಸಿದರು.

ನಿನ್ನೆಯ ಘಟನೆಯನ್ನು ಸುಮ್ಮನೆ ದೊಡ್ಡದು ಮಾಡಬೇಡಿ. ಅವರು ನಮ್ಮ ಕಾರ್ಯಕರ್ತರು ಎಂದು ಸ್ವತಃ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ. ಮತ್ತೆ ಏಕೆ ಆ ಬಗ್ಗೆ ಪ್ರಶ್ನೆ ಎಂದು ವರುಣಾ ಕ್ಷೇತ್ರದಲ್ಲಿ ನಡೆದ ಘಟನೆಯ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ಪ್ರತಿಕ್ರಿಯಿಸಿದರು.

Siddaramaiah expresses condolence to the demise of George Fernandes

ಬಿಜೆಪಿಯವರಿಗೆ ಮಾತನಾಡುವುದಕ್ಕೆ ಬೇರೆ ವಿಚಾರವೇ ಇಲ್ಲ. ಅದಕ್ಕೆ ಮಹಾಭಾರತದ ಪಾತ್ರಗಳನ್ನು ತರುತ್ತಿದ್ದಾರೆ. ಇದನ್ನು ಮಾಧ್ಯಮದವರು ಸಹ ತರುತ್ತಿದ್ದಾರೆ ಎಂದು ಮಾಧ್ಯಮದವರಿಗೆ ಗರಂ ಆಗಿಯೇ ಉತ್ತರಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+