ಮಾವುತರಿಗೆ ಶೋಭಾ ಕರಂದ್ಲಾಜೆಯಿಂದ ಔತಣ ಕೂಟ

Recommended Video

      Mysore dasara 2017 :Shobha karandlaje says next dasara inaugurate by BSY

      ಮೈಸೂರು, ಸೆಪ್ಟೆಂಬರ್ 29 : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಹಿನ್ನಲೆಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಇಂದು ಮಾವುತರಿಗೆ ಔತಣ ಕೂಟ ಆಯೋಜಿಸಿದ್ದರು. ಸೆ.30ರ ಶನಿವಾರ ಜಂಬೂ ಸವಾರಿ ನಡೆಯಲಿದೆ.

      ಶುಕ್ರವಾರ ಅರಮನೆ ಅಂಗಳದಲ್ಲಿ ಶೋಭಾ ಕರಂದ್ಲಾಜೆ ಅವರು ಮಾವುತ, ಕಾವಾಡಿಗಳಿಗೆ ಔತಣ ಕೂಟ ಆಯೋಜಿಸಿದ್ದರು. ಶೋಭಾ ಕರಂದ್ಲಾಜೆ ಅವರು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಅವಧಿಯಿಂದಲೂ ಪ್ರತಿ ವರ್ಷ ಔತಣ ಕೂಟವನ್ನು ಆಯೋಜಿಸುತ್ತಾ ಬಂದಿದ್ದಾರೆ.

      Shobha Karandlaje host a breakfast for Mahouta and Kawadis

      ಮಾಧ್ಯಮಗಳ ಜೊತೆ ಮಾತನಾಡಿದ ಅವರು, 'ಈ ಬಾರಿ ದಸರಾ ಯಶಸ್ವಿಯಾಗಲಿ. ನಾಡಿಗೆ ಒಳಿತಾಗಲಿ ಎಂದು ಚಾಮುಂಡಿ ಬೆಟ್ಟ ಹತ್ತುತ್ತೇನೆ. ಮುಂದಿನ ದಸರಾ ಯಡಿಯೂರಪ್ಪ ನೇತೃತ್ವದಲ್ಲಿ ನಡೆಯಲಿ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

      'ಯಡಿಯೂರಪ್ಪ ನೇತೃತ್ವದಲ್ಲಿ ಮುಂದಿನ ದಸರಾ ನಡೆಯಲಿ ಎಂದು ಸಂಕಲ್ಪ ಮಾಡಿಕೊಂಡು ಬೆಟ್ಟ ಹತ್ತುತ್ತೇನೆ. ಚಾಮುಂಡೇಶ್ವರಿ ಆಶೀರ್ವಾದ ನಮ್ಮ ಮೇಲಿದೆ. ಮುಂದೆ ನಾವೇ ಅಧಿಕಾರಕ್ಕೆ ಬರುತ್ತೇವೆ' ಎಂದು ಹೇಳಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+