ಭೂಮಿಯಲ್ಲಿ ಬೆಂಕಿ ಕಾಣಿಸಿಕೊಂಡ ಪ್ರಕರಣ : ತಜ್ಞರ ತಂಡದಿಂದ ವರದಿ ಸಲ್ಲಿಕೆ

ಮೈಸೂರಿನ ಶಾದನಹಳ್ಳಿ ಬಳಿ ಸಂಭವಿಸಿದ ನಿಗೂಢ ಬೆಂಕಿ ಅವಘಡ ದಲ್ಲಿ ಬಾಲಕನೊಬ್ಬ ಮೃತಪಟ್ಟಿದ್ದ. ಆ ಪ್ರಕರಣದ ಬಗ್ಗೆ ವರದಿ ನೀಡಲು ತಜ್ಞರ ತಂಡವೊಂದನ್ನು ರಚಿಸಲಾಗಿತ್ತು. ಆ ತಂಡ ತನ್ನ ವರದಿ ನೀಡಿದ್ದು, ಅದರಲ್ಲಿ ಏನಿದೆ ಅಂತ ತಿಳಿಯಲು ಈ ವರದಿ ಓದಿ

ಮೈಸೂರು, ಮೇ 2 : ಇತ್ತೀಚೆಗೆ ಶಾದನಹಳ್ಳಿಯಲ್ಲಿ ಭೂಮಿಯಲ್ಲಿ ಕಾಣಿಸಿಕೊಂಡ ಬೆಂಕಿಗೆ ಸಿಲುಕಿ ಬಾಲಕ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ತು ಜನ ತಜ್ಞರ ಸಮಿತಿಯಿಂದ ಮಧ್ಯಂತರ ವರದಿ ಸಲ್ಲಿಕೆಯಾಗಿದೆ.

ಜಯಪ್ರಕಾಶ್ ನೇತೃತ್ವದ ತಂಡವು ಜಿಲ್ಲಾಧಿಕಾರಿ ಡಿ.ರಂದೀಪ್ ಅವರಿಗೆ ಮಧ್ಯಂತರ ವರದಿ ಸಲ್ಲಿಸಿದೆ. ವರದಿಯಲ್ಲಿ ಶ್ಯಾದನಹಳ್ಳಿ ಬಾಲಕ ಸಾವನ್ನಪ್ಪಿದ್ದ ಸ್ಥಳದಲ್ಲಿ ಯಾವುದೇ ರಾಸಾಯನಿಕ ತ್ಯಾಜ್ಯ ಪತ್ತೆಯಾಗಿಲ್ಲ. ಯಾರೋ ಪೊದೆಗಳಿಗೆ ಬೆಂಕಿ ಹಚ್ಚಿದ ಪರಿಣಾಮ ಬೂದಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಉಲ್ಲೇಖಿಸಲಾಗಿದೆ. ಬಾಲಕ ಹರ್ಷಲ್ ಸಾವಿನ ಮರಣೋತ್ತರ ಪರೀಕ್ಷೆ ವರದಿಯು ಪೊಲೀಸ್ ತನಿಖೆ ಪೂರ್ಣಗೊಂಡ ಬಳಿಕ ಸಿಗಲಿದೆ ಎನ್ನಲಾಗಿದೆ.[ಬೆಂಕಿಯುಗುಳುವ ಭೂಮಿ: ಪ್ರಾಥಮಿಕ ವರದಿಯಲ್ಲೇನಿದೆ?]

Mysuru

ವರದಿಯಲ್ಲೇನಿದೆ...?

ನಗರದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿರುವ ಶಾದನಹಳ್ಳಿ ಖಾಸಗಿ ಜಮೀನಿನಲ್ಲಿ ಏಪ್ರಿಲ್ 16ರಂದು ಹರ್ಷಲ್ ಎಂಬ ಬಾಲಕ ಭೂಮಿಯಲ್ಲಿ ಕಾಣಿಸಿಕೊಂಡ ಬೆಂಕಿಯಲ್ಲಿ ಬಿದ್ದು, ನಿಗೂಢ ರೀತಿಯಲ್ಲಿ ಸಾವ್ನಪ್ಪಿದ್ದ. ಈ ಘಟನೆಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ತಾಂತ್ರಿಕ ಮೌಲ್ಯಮಾಪನ ಸಮಿತಿಯ ಬಿಎಸ್ ಜೈಪ್ರಕಾಶ್ ನೇತೃತ್ವದ 10 ಸದಸ್ಯರ ಸಮಿತಿ ಏಪ್ರಿಲ್ 22ರಂದು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿತ್ತು.'[ದಾವಣಗೆರೆ: ಮೇಕೆ ಮರಿ ಹಿಡಿದ ಚಿರತೆಯನ್ನು ಜೀವಂತವಾಗಿ ಸುಟ್ಟರು]

ಈ ಸಂಬಂಧ ಜಿಲ್ಲಾಧಿಕಾರಿಗೆ ಮಧ್ಯಂತರ ವರದಿ ಸಲ್ಲಿಸಿದ್ದು, ಇದು ಮಾನವ ಕೃತ್ಯ ಎಂದು ಉಲ್ಲೇಖಿಸಲಾಗಿದೆ. ಬೆಂಕಿ ಕಾಣಿಸಿಕೊಂಡ ಸ್ಥಳದಲ್ಲಿ ಬಾಯ್ಲರ್ ಬೂದಿ ಹಾಗೂ ಮರಳು ಪತ್ತೆಯಾಗಿದೆ. 110ರಿಂದ 140 ಡಿಗ್ರಿ ಸೆಲ್ಸಿಯಸ್‌ ವರೆಗೆ ತಾಪಮಾನ ಕಾಣಿಸಿಕೊಂಡ ಸ್ಥಳದ ಸುತ್ತ ಯಾವುದೇ ರಾಸಾಯನಿಕ ವಸ್ತುವಿನ ಘಾಟು ಪತ್ತೆಯಾಗಿಲ್ಲ.

ಜಮೀನಿನಲ್ಲಿ ಬೆಳೆದಿರುವ ಪೊದೆಗಳಿಗೆ ಬಿದ್ದ ಬೆಂಕಿ ತಾಪಮಾನ ಏರಿಕೆಗೆ ಕಾರಣವಾಗಿದೆ. ಇದು ಬಾಯ್ಲರ್ ಬೂದಿಗೆ ವಿಸ್ತರಿಸಿರುವ ಸಾಧ್ಯತೆ ಇದೆ ಎಂದು ಮಧ್ಯಂತರ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಪತ್ತೆಯಾದ ಬೂದಿ ರಾಸಾಯನಿಕ ತ್ಯಾಜವೇ ಎಂಬುದನ್ನು ಸ್ಪಷ್ಟಪಡಿಸಿಲ್ಲ. ಬಾಲಕ ಹರ್ಷಲ್ ಮರಣೋತ್ತರ ಪರೀಕ್ಷೆಯ ವರದಿ ಬಂದು, ಪೊಲೀಸರ ತನಿಖೆ ಪೂರ್ಣಗೊಂಡ ಬಳಿಕ ಅಂತಿಮ ನಿರ್ಧಾರಕ್ಕೆ ಬರಲಾಗುವುದು ಎಂದು ಸಮಿತಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+