ಮೈಸೂರಿನಲ್ಲಿ ಜೂನ್ 18ಕ್ಕೆ ರಾಯಣ್ಣ ಬ್ರಿಗೇಡ್ ಸಮಾವೇಶ
ಮೈಸೂರಿನಲ್ಲಿ ಜೂನ್ 18 ರಂದು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಬೃಹತ್ ಸಮಾವೇಶವನ್ನ ನಡೆಸಲಾಗುವುದು ಎಂದು ಬ್ರಿಗೇಡ್ ನ ರಾಜ್ಯಾಧ್ಯಕ್ಷ ವಿರೂಪಾಕ್ಷಪ್ಪ ತಿಳಿಸಿದರು.
ಮೈಸೂರು, ಏಪ್ರಿಲ್ 28: ಮೈಸೂರಿನಲ್ಲಿ ಜೂನ್ 18 ರಂದು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಬೃಹತ್ ಸಮಾವೇಶವನ್ನ ನಡೆಸಲಾಗುವುದು ಎಂದು ಬ್ರಿಗೇಡ್ ನ ರಾಜ್ಯಾಧ್ಯಕ್ಷ ವಿರೂಪಾಕ್ಷಪ್ಪ ತಿಳಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ವಿರೂಪಾಕ್ಷಪ್ಪ, ಸಮಾವೇಶಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್ ಶಾ ಹಾಗೂ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನ ಅಹ್ವಾನಿಸಲಾಗುತ್ತದೆ. ಎಲ್ಲಾ ಜಿಲ್ಲೆ ತಾಲ್ಲೂಕು ಪದಾಧಿಕಾರಿಗಳ ಸಭೆ ನಡೆಸಲಾಗುತ್ತದೆ. ಮೇ 8 ರಂದು ರಾಯಚೂರಿನಲ್ಲಿ ರಾಜ್ಯ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕಾರ್ಯಕಾರಣಿ ಸಭೆ ನಿಗದಿ ಮಾಡಲಾಗಿದೆ ಎಂದರು. [ಬಿಎಸ್ ವೈ - ಈಶ್ವರಪ್ಪ ಬಣಗಳ ನಡುವೆ ಮೈಸೂರಿನಲ್ಲೂ ಮಾರಾಮಾರಿ]

ಅಲ್ಲದೆ ಬ್ರಿಗೇಡ್ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿಯಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿದೆ. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ವಿರೂಪಾಕ್ಷಪ್ಪ, ಬ್ರಿಗೇಡ್ ಯಾವುದೇ ರಾಜಕೀಯ ಪಕ್ಷಕ್ಕೆ ಸಂಬಂಧಿಸಿಲ್ಲ ಬಿಜೆಪಿ ಆಂತರಿಕ ಕಲಹಕ್ಕೂ ಬ್ರಿಗೇಡ್ ಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.












Click it and Unblock the Notifications